ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.22ರಂದು ಹೈಕೋರ್ಟಲ್ಲಿ ಸಂಜನಾ ಜಾಮೀನು ಅರ್ಜಿ ವಿಚಾರಣೆ

|
Google Oneindia Kannada News

ಬೆಂಗಳೂರು, ಅ. 21: ಸ್ಯಾಂಡಲ್‌ವುಡ್‌ ಮಾದಕ ವಸ್ತು ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿಗೆ ನೆಮ್ಮದಿಯ ಸುದ್ದಿ ಸಿಕ್ಕಿದೆ. ಸಂಜನಾ ಸಲ್ಲಿಸಿರುವ ಜಾಮೀನು ಅರ್ಜಿ ಶೀಘ್ರವೇ ಕೈಗೆತ್ತಿಕೊಳ್ಳದಂತೆ ಸರ್ಕಾರಿ ವಕೀಲರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಹೀಗಾಗಿ, ಅಕ್ಟೋಬರ್ 22ರಂದೇ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.

ಸಂಜನಾ ಪ್ರಕರಣದಲ್ಲಿ ಆಕ್ಷೇಪಣೆ ಸಲ್ಲಿಸಲು ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿ ವಿಶೇಷ ಸಾರ್ವಜನಿಕ ಅಭಿಯೋಜಕ(SPP)ರು ಸಲ್ಲಿಸಿದ್ದ ಮನವಿಯನ್ನು ವಿರೋಧಿಸಿದ ಸಂಜನಾ ಪರ ವಕೀಲ ನಾಸಿರ್‌ ಅಲಿ, ನಟಿ ಸಂಜನಾ ಗಲ್ರಾನಿ ಅವರು 50 ದಿನಗಳಿಂದ ಪೊಲೀಸರ ವಶದಲ್ಲಿದ್ದಾರೆ, ಹೀಗಾಗಿ, ಈ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆಯಲ್ಲಿ ವಿಳಂಬವೇಕೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜಾಮೀನು ಪಡೆಯಲು ಹೈಕೋರ್ಟ್ ಮೊರೆ ಹೋದ ಸಂಜನಾ ಜಾಮೀನು ಪಡೆಯಲು ಹೈಕೋರ್ಟ್ ಮೊರೆ ಹೋದ ಸಂಜನಾ

ನಟಿ ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಈಚೆಗೆ ಕರ್ನಾಟಕ ಹೈಕೋರ್ಟ್‌ ನ್ಯಾ. ಶ್ರೀನಿವಾಸ ಹರೀಶ್‌ ಕುಮಾರ್‌ ಅವರಿದ್ದ ಏಕಸದಸ್ಯ ಪೀಠವು, ವಕೀಲ ನಾಸಿರ್ ಅಲಿ ವಾದವನ್ನು ಪುರಸ್ಕರಿಸಿ, ವಿಚಾರಣೆಯನ್ನು ಅಕ್ಟೋಬರ್‌ 22ಕ್ಕೆ ಮುಂದೂಡಿದೆ. ಜೊತೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಿದೆ.

ಎನ್ ಡಿ ಪಿಎಸ್ ಕಾಯ್ದೆ ವಿವಿಧ ಸೆಕ್ಷನ್ ಅಡಿಯಲ್ಲಿ ಕೇಸ್

ಎನ್ ಡಿ ಪಿಎಸ್ ಕಾಯ್ದೆ ವಿವಿಧ ಸೆಕ್ಷನ್ ಅಡಿಯಲ್ಲಿ ಕೇಸ್

ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿಯಂತ್ರಣ ಕಾಯಿದೆಗೆ (ಎನ್‌ಡಿಪಿಎಸ್‌) ಸಂಬಂಧಿಸಿದ ವಿಶೇಷ ನ್ಯಾಯಾಲಯದಲ್ಲಿ ಸಂಜನಾ ಗಲ್ರಾನಿ ಹಾಗೂನಟಿ ರಾಗಿಣಿ ದ್ವಿವೇದಿ ಅವರಿಗೆ ಜಾಮೀನು ನಿರಾಕರಿಸಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯಿದೆ-1985 ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಾಟನ್ ಪೇಟೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಎಲ್ಲಾ ಆರೋಪಿಗಳ ವಿರುದ್ಧ ಎನ್ ಡಿ ಪಿಎಸ್ ಕಾಯ್ದೆ ಸೆಕ್ಷನ್ 21, 21 ಸಿ, 27 ಎ, 27 ಬಿ, 29 ಹಾಗೂ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಪ್ರಕರಣ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ಕನಿಷ್ಠ 10 ರಿಂದ 20 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು ತನಕ ದಂಡ ವಿಧಿಸಬಹುದು.

ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?ರಾಗಿಣಿ ದ್ವಿವೇದಿ ಆರೋಪಿ ನಂ.2, ರವಿಶಂಕರ್ ಹೆಸರು ನಾಪತ್ತೆ?

ನಿಷೇಧಿತ ಮಾದಕ ವಸ್ತುಗಳ ಸಂಗ್ರಹ ಹಾಗೂ ಮಾರಾಟ

ನಿಷೇಧಿತ ಮಾದಕ ವಸ್ತುಗಳ ಸಂಗ್ರಹ ಹಾಗೂ ಮಾರಾಟ

ನಿಷೇಧಿತ ಮಾದಕ ವಸ್ತುಗಳ ಸಂಗ್ರಹ ಹಾಗೂ ಮಾರಾಟದಲ್ಲಿ ಸಂಜನಾ ತೊಡಗಿದ್ದರು. ಕ್ಲಬ್‌, ಪಬ್‌, ರೆಸಾರ್ಟ್, ಫೈವ್ ಸ್ಟಾರ್ ಹೋಟೆಲ್, ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲವನ್ನು ನಡೆಸಿದ್ದರು ಎಂದು ಆರೋಪಿಸಲಾಗಿದೆ. ವಿದೇಶದಿಂದ ಡ್ರಗ್ಸ್ ತರೆಸಿಕೊಳ್ಳುತ್ತಿದ್ದ ಲೂಮ್ ಪೆಪ್ಪರ್ ಅದನ್ನು ಇಲ್ಲಿನ ನಟ, ನಟಿಯರು, ಡಿಜೆಗಳು, ಐಟಿ ಉದ್ಯೋಗಿಗಳು, ಅನೇಕ ಸೆಲೆಬ್ರಿಟಿಗಳಿಗೆ ಹಂಚುತ್ತಿದ್ದ. ಲೂಮ್ ಪೆಪ್ಪರ್ ಕೂಡಾ ಜೈಲಿನಲ್ಲಿದ್ದಾನೆ.

ಶಿವಶಂಕರ್ ಎಂಬ ಪೆಡ್ಲರ್ ಈ ಪ್ರಕರಣದಲ್ಲಿ ಆರೋಪಿ ನಂ.1

ಶಿವಶಂಕರ್ ಎಂಬ ಪೆಡ್ಲರ್ ಈ ಪ್ರಕರಣದಲ್ಲಿ ಆರೋಪಿ ನಂ.1

ಶಿವಶಂಕರ್ ಎಂಬ ಪೆಡ್ಲರ್ ಈ ಪ್ರಕರಣದಲ್ಲಿ ಆರೋಪಿ ನಂ.1 ಎನಿಸಿಕೊಂಡಿದ್ದಾನೆ. ರಾಗಿಣಿ ದ್ವಿವೇದಿ ಎ2, ಫ್ಯಾಷನ್ ಲೋಕದ ಸೆಲೆಬ್ರಿಟಿ, ಪಾರ್ಟಿ ಆಯೋಜಕ ವಿರೇನ್ ಖನ್ನಾ ಎ3, ಪ್ರಶಾಂತ್ ರಂಕಾ ಎ 4, ವೈಭವ್ ಜೈನ್ ಎ 5, ಆದಿತ್ಯ ಆಳ್ವ ಎ 6, ಸೆನೆಗೆಲ್ ದೇಶದ ಪ್ರಜೆ ಲೂಮ್ ಪೆಪ್ಪರ್ ಎ 7, ಸೈಮನ್ ಎ 8, ಪ್ರಶಾಂತ್ ಬಾಬು ಎ 9, ಅಶ್ವಿನ್ ಅಲಿಯಾಸ್ ಬೂಗಿ ಎ 10, ರಾಹುಲ್ ತೋನ್ಸೆ ಎ 11, ವಿನಯ್ ಎ 12 ಎಂದು ಕಾಟನ್ ಪೇಟೆ ಪೊಲೀಸರು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ.

ಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆಗಾರ್ಡನ್ ಸಿಟಿ ಡ್ರಗ್ಸ್ ಘಾಟು; ಸೇಲಂ ಪೊಣ್ಣು, ಆಫ್ರಿಕಾ ಜುಂಬೋ ನಶೆ

ರವಿಶಂಕರ್ ಹೆಸರು ಏಕಿಲ್ಲ

ರವಿಶಂಕರ್ ಹೆಸರು ಏಕಿಲ್ಲ

ರವಿಶಂಕರ್ ಹೆಸರು ಏಕಿಲ್ಲ: ಜಯನಗರ ಆರ್ ಟಿಎಯಲ್ಲಿ ಎಫ್ ಡಿಎ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಗ ಅಮಾನತುಗೊಂಡಿರುವ ರವಿಶಂಕರ್ ಈ ಪ್ರಕರಣದಲ್ಲಿ ಮೊದಲಿಗೆ ಬಂಧಿತನಾದ ವ್ಯಕ್ತಿ. ಆತನ ಹೇಳಿಕೆ ಆಧಾರದ ಮೇಲೆ ಆತನ ಗೆಳತಿ ನಟಿ ರಾಗಿಣಿ ಬಂಧನವಾಗಿದೆ ಎಂಬ ವರದಿಯಿದೆ. ಆದರೆ, ಎಫ್ಐಆರ್ ನಲ್ಲಿ ರವಿಶಂಕರ್ ಹೆಸರು ನಾಪತ್ತೆಯಾಗಿದೆ. ಸೆನೆಗಲ್ ಮೂಲದ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್(38) ಜೊತೆ ರವಿಶಂಕರ್ ಸಂಪರ್ಕ ಹೊಂದಿದ್ದ. ರಾಹುಲ್ ಜೊತೆಗೂಡಿ ಪಾರ್ಟಿಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ, ರವಿಶಂಕರ್ ನನ್ನು ಇನ್ಫಾರ್ಮರ್ ರೀತಿ ಮಾತ್ರ ಪೊಲೀಸರು ಬಳಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

Recommended Video

ಮೋದಿ ಕೊಟ್ರು ವಿಶೇಷ ಸಲಹೆ | Oneindia Kannada
ಆದಿತ್ಯ ಆಳ್ವ ನಾಪತ್ತೆ ಪ್ರಕರಣ

ಆದಿತ್ಯ ಆಳ್ವ ನಾಪತ್ತೆ ಪ್ರಕರಣ

ಮಾಜಿ ಸಚಿವ ದಿವಂಗತ ಜೀವರಾಜ್ ಆಳ್ವ ಹಾಗೂ ನೃತ್ಯಗಾರ್ತಿ ನಂದಿನಿ ಆಳ್ವ ಅವರ ಪುತ್ರ ಆದಿತ್ಯ ಆಳ್ವ ಈ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ. ಆದಿತ್ಯ ಅವರ ಸೋದರಿ ಪ್ರಿಯಾಂಕಾ ಅವರು ನಟ ವಿವೇಕ್ ಒಬೆರಾಯ್ ವರಿಸಿದ್ದಾರೆ. ಆರನೇ ಆರೋಪಿ ಆದಿತ್ಯ ಆಳ್ವ ಮನೆ, ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದೆ. ಆದಿತ್ಯನನ್ನು ಹುಡುಕಿಕೊಂಡು ಎನ್ ಸಿಬಿ ಅಧಿಕಾರಿಗಳು ಮುಂಬೈನಲ್ಲಿರುವ ಅವರ ಬಾವ ವಿವೇಕ್ ಮನೆಯನ್ನು ಹುಡುಕಿದ್ದಾರೆ. ಅಕ್ಕ ಪ್ರಿಯಾಂಕಾಗೆ ಎರಡು ಬಾರಿ ಸಮನ್ಸ್ ನೀಡಿ, ವಿಚಾರಣೆಗೆ ಬರುವಂತೆ ಸೂಚಿಸಲಾಗಿದೆ. ಆದರೆ, ಪ್ರಿಯಾಂಕಾ ಇನ್ನೂ ಪ್ರತಿಕ್ರಿಯಿಸಿಲ್ಲ.

ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್ಕಮ್ಮನಹಳ್ಳಿಯಲ್ಲಿ ಡ್ರಗ್ ಹಬ್ ಸೃಷ್ಟಿಸಿದ್ದ ಪೆಡ್ಲರ್ ಅನೂಪ್

English summary
The Karnataka High Court refused to delay the proceedings regarding a bail application filed by Sanjjanaa Galrani and served notice to government and Special Public Prosecutor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X