ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಬ್ಬರು ವಕೀಲರಿಗೆ 2 ತಿಂಗಳ ಜೈಲು ಶಿಕ್ಷೆ ನೀಡಿದ ಕರ್ನಾಟಕ ಹೈಕೋರ್ಟ್

|
Google Oneindia Kannada News

ಬೆಂಗಳೂರು, ಜನವರಿ 16; ಕರ್ನಾಟಕ ಹೈಕೋರ್ಟ್ ಇಬ್ಬರು ವಕೀಲರಿಗೆ 2 ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ತಲಾ 2 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

ವಿಪ್ರೊ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ ಜಿ ಮತ್ತು ಅವರ ಟ್ರಸ್ಟ್‌ ವಿರುದ್ಧ ತನಿಖೆ ನಡೆಸುವಂತೆ ಕೋರಿ ಹಲವು ಸುಳ್ಳು ಮೊಕದ್ದಮೆಗಳನ್ನು ಚೆನ್ನೈ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ದಾಖಲು ಮಾಡಿತ್ತು.

ಕೋವಿಡ್ ನಿಯಂತ್ರಣ SOP ಕಟ್ಟು ನಿಟ್ಟು ಜಾರಿಗೆ ಹೈಕೋರ್ಟ್ ನಿರ್ದೇಶನ ಕೋವಿಡ್ ನಿಯಂತ್ರಣ SOP ಕಟ್ಟು ನಿಟ್ಟು ಜಾರಿಗೆ ಹೈಕೋರ್ಟ್ ನಿರ್ದೇಶನ

ಈ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದ ಚೆನ್ನೈನ ವಕೀಲರಾದ ಆರ್‌. ಸುಬ್ರಮಣಿಯನ್ ಮತ್ತು ಪಿ. ಸದಾನಂದಗೆ ಕರ್ನಾಟಕ ಹೈಕೋರ್ಟ್ ಜೈಲು ಶಿಕ್ಷೆ ವಿಧಿಸಿದೆ.

ಕೋವಿಡ್; ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್ ಕಲಾಪ ಕೋವಿಡ್; ವಿಡಿಯೋ ಕಾನ್ಫರೆನ್ಸ್ ಮೂಲಕ ಹೈಕೋರ್ಟ್ ಕಲಾಪ

Karnataka High Court Sends Two Advocates To Jail For 2 Months

ಶುಕ್ರವಾರ ನ್ಯಾಯಮೂರ್ತಿ ಬಿ. ವೀರಪ್ಪ ಮತ್ತು ನ್ಯಾಯಮೂರ್ತಿ ಕೆ. ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ವಕೀಲರು ದಂಡ ಪಾವತಿ ಮಾಡಲು ವಿಫಲವಾದರೆ ಪುನಃ ಒಂದು ತಿಂಗಳು ಜೈಲು ಶಿಕ್ಷೆ ಮುಂದುವರೆಸಬೇಕು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಕಲಿಕೆ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ ಪದವಿ ಹಂತದಲ್ಲಿ ಕನ್ನಡ ಕಡ್ಡಾಯ ಕಲಿಕೆ ಕುರಿತು ಹೈಕೋರ್ಟ್ ಮಧ್ಯಂತರ ಆದೇಶ

ಅಜೀಂ ಪ್ರೇಮ್‌ ಜಿ ಸೇರಿದಂತೆ ಇತರ ಮೂವರು ಸಲ್ಲಿಕೆ ಮಾಡಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಇಬ್ಬರು ವಕೀಲರಿಗೆ ಎರಡು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಇಬ್ಬರೂ ವಕೀಲರು ಅಜೀಂ ಪ್ರೇಮ್‌ ಜಿ ಮತ್ತು ವಿಪ್ರೊ ಕಂಪನಿ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಯಾವುದೇ ಬಗೆಯ ಕೇಸು ದಾಖಲು ಮಾಡದಂರೆ ನ್ಯಾಯಪೀಠ ನಿರ್ಬಂಧ ವಿಧಿಸಿದೆ.

ವಕೀಲ ಆರ್. ಸುಬ್ರಮಣಿ ಮತ್ತು ಪಿ. ಸದಾನಂದ ವಿರುದ್ಧದ ಆರೋಪಗಳು ನ್ಯಾಯಾಂಗ ನಿಂದನೆ ಕಾಯ್ದೆ ಸೆಕ್ಷನ್ 2 (3) ಅಡಿ ದೃಢಪಟ್ಟಿದೆ. ಆದ್ದರಿಂದ ಇಬ್ಬರಿಗೂ 2 ತಿಂಗಳ ಜೈಲು ಶಿಕ್ಷೆ ಮತ್ತು ತಲಾ 2 ಸಾವಿರ ರೂ. ದಂಡ ವಿಧಿಸಲಾಗಿದೆ.

ನ್ಯಾಯಾಂಗ ನಿಂದನೆ ಕೈ ಬಿಡಲು ಯಾವುದೇ ಸಾಕ್ಷ್ಯಧಾರವಿಲ್ಲ ಆದ್ದರಿಂದ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ. ವಕೀಲರು ದಂಡ ಪಾವತಿ ಮಾಡಲು ವಿಫಲರಾದರೆ ಮತ್ತೆ ಒಂದು ತಿಂಗಳು ಜೈಲು ಶಿಕ್ಷೆ ಮುಂದುವರೆಬೇಕು ಎಂದು ಕೋರ್ಟ್ ಹೇಳಿದೆ.

ವಕೀಲರು ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಮನವಿ ಮಾಡಿದರು. ಈ ಹಿನ್ನಲೆಯಲ್ಲಿ ಈ ಆದೇಶವನ್ನು ನಾಲ್ಕು ವಾರಗಳ ಕಾಲ ಅಮಾನತಿನಲ್ಲಿಡಲು ನ್ಯಾಯಪೀಠ ಆದೇಶ ನೀಡಿದೆ.

2021ರ ಡಿಸೆಂಬರ್‌ನಲ್ಲಿಯೇ ಆರ್. ಸುಬ್ರಮಣಿ ಮತ್ತು ಪಿ. ಸದಾನಂದ ಸಲ್ಲಿಕೆ ಮಾಡಿದ್ದ ರಿಟ್ ಅರ್ಜಿಗಳನ್ನು ಕೋರ್ಟ್ ವಜಾ ಮಾಡಿತ್ತು. ಈ ಅರ್ಜಿಗಳಲ್ಲಿ ವಿಚಾರಣೆ ನಡೆಸಬೇಕಾದ ಅಂಶಗಳಲ್ಲ ಎಂದು ಹೇಳಿತ್ತು. ಆದರೆ ಪದೇ ಪದೇ ಇದೇ ವಿಚಾರದಲ್ಲಿ ವಕೀಲರು ಮತ್ತೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದರು.

ವಿಪ್ರೊ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ ಜಿ ಮತ್ತು ಇತರರ ವಿರುದ್ಧ ಅರ್ಜಿ ದಾಖಲು ಮಾಡಿದ್ದ ಚೆನ್ನೈ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿಗೆ ಕಳೆದ ವರ್ಷ ಕೋರ್ಟ್ 10 ಲಕ್ಷ ದಂಡ ವಿಧಿಸಿತ್ತು.

ಅಜೀಂ ಪ್ರೇಮ್‌ ಜಿ ಫೌಂಡೇಷನ್‌ನಲ್ಲಿನ ಹಣಕಾಸು ಅವ್ಯವಹಾರ ನಡೆದಿದೆ ಎಂದು ಇಂಡಿಯಾ ಅವೇಕ್ ಫಾರ್ ಟ್ರಾನ್ಸಪರೆನ್ಸಿ ಆರೋಪ ಮಾಡಿತ್ತು. ಈ ಕುರಿತು ವಿಚಾರಣೆ ನಡೆಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.

ರಿಟ್ ಅರ್ಜಿಗಳನ್ನು ವಜಾಗೊಳಿಸಿದ ಮೇಲೆಯೂ ಮತ್ತು ನ್ಯಾಯಾಲಯದ ಆದೇಶಗಳ ಎಚ್ಚರಿಕೆ ಮತ್ತು ನಿಷೇಧದ ಹೊರತಾಗಿಯೂ, ಹಲವಾರು ಪ್ರಕರಣಗಳನ್ನು ದಾಖಲಿಸಿ ವಿಚಾರಣೆಯನ್ನು ಮುಂದುವರೆಸಿದ್ದೀರಿ. ಒಂದು ಅಥವಾ ಇನ್ನೊಂದು ನಿಷ್ಪ್ರಯೋಜಕ ಅರ್ಜಿಗಳ ಮೂಲಕ ಕಾನೂನು ಪ್ರಕ್ರಿಯೆಗಳನ್ನು ಅಪಹಾಸ್ಯ ಮಾಡಿದ್ದೀರಿ ಎಂದು ಕೋರ್ಟ್ ಹೇಳಿದೆ.

ವಿವಿಧ ನ್ಯಾಯಾಲಯಗಳು, ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುವುದು ಮತ್ತು ಕಾನೂನಿನ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುವುದು. 1971ರ ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 2(ಸಿ) ರ ನಿಬಂಧನೆಗಳ ಅರ್ಥದಲ್ಲಿ ಕ್ರಿಮಿನಲ್ ಅಪರಾಧಕ್ಕೆ ಸಮ ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

English summary
Karnataka high court convicted two advocates who represented the NGO India Awake for Transparency for criminal contempt for filing multiple petitions on the same cause against Azim Premji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X