ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಪತ್ನಿಯ ಮಕ್ಕಳು ಕೂಡ ತಂದೆಯ ನೌಕರಿ ಪಡೆಯಲು ಅರ್ಹರು: ಹೈಕೋರ್ಟ್

|
Google Oneindia Kannada News

ಬೆಂಗಳೂರು, ಜುಲೈ 15: ಎರಡನೇ ಪತ್ನಿ ಮಕ್ಕಳು ಕೂಡ ಅನುಕಂಪದ ಆಧಾರದಲ್ಲಿ ತಂದೆಯ ನೌಕರಿ ಪಡೆಯಲು ಅರ್ಹರು ಎಂದು ಹೈಕೋರ್ಟ್ ಹೇಳಿದೆ.

ಪೋಷಕರ ಸಂಬಂಧ ಅನಧಿಕೃತ ಇರಬಹುದು. ಆದರೆ, ಅವರ ಮಕ್ಕಳು ಅನಧಿಕೃತ ಅಲ್ಲ, ಹೀಗಾಗಿ ಎರಡನೆಯ ಪತ್ನಿಯ ಮಕ್ಕಳಿಗೂ ಅನುಕಂಪದ ಆಧಾರದ ಮೇಲೆ ನೌಕರಿ ಪಡೆಯಲು ಅಧಿಕಾರವಿರುತ್ತದೆ ಎಂದು ಹೇಳಲಾಗಿದೆ.

ಮಕ್ಕಳೆಲ್ಲರೂ ಸಮಾನರು ಎಂಬ ಕಾನೂನನ್ನು ಜಾರಿಗೆ ತರಬಹುದಾಗಿದೆ. ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳಿಗೂ ನ್ಯಾಯ ದೊರಕಿಸಲು ಸಂಸತ್ ಮುಂದಾಗಬೇಕಿದೆ' ಎಂದು ಪೀಠ ಹೇಳಿತು. ಅರ್ಜಿದಾರರ ಮನವಿಯನ್ನು ಕಾನೂನಿನ ಅಡಿಯಲ್ಲಿ ಪರಿಗಣಿಸಲು ಕೆಪಿಟಿಸಿಎಲ್‌ಗೆ ಪೀಠ ನಿರ್ದೇಶನ ನೀಡಿತು.

Karnataka High Court Ruled That Children Of Second Wife Are Eligible To Get Job

ಎರಡನೇ ಪತ್ನಿಯ ಮಕ್ಕಳು ಅನುಕಂಪದ ನೌಕರಿ ಪಡೆಯಲು ಅರ್ಹರಲ್ಲ ಎಂದು 2011ರ ಕೆಪಿಟಿಸಿಎಲ್‌(ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ) ಸುತ್ತೋಲೆ ಪ್ರಶ್ನಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಈ ಅಭಿಪ್ರಾಯಪಟ್ಟಿದೆ.

ಮೊದಲ ಪತ್ನಿ ಇದ್ದಾಗಲೇ ಎರಡನೇ ವಿವಾಹವಾದರೆ ಆ ಪತ್ನಿ ಅಧಿಕೃತ ಅಲ್ಲ. ತಾಯಿ ಅನಧಿಕೃತ ಆಗಿರುವ ಕಾರಣ ಮಗನೂ ಅನಧಿಕೃತ ಎಂದು ವಾದಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿ ಮತ್ತು ಮರು ಪರಿಶೀಲನಾ ಅರ್ಜಿಯನ್ನು ಏಕ ಸದಸ್ಯ ಪೀಠ ತಿರಸ್ಕರಿಸಿತ್ತು. ತಂದೆ ಮತ್ತು ತಾಯಿ ಇಲ್ಲದೆ ಮಗು ಜನಿಸಲು ಸಾಧ್ಯವಿಲ್ಲ. ಜನ್ಮ ತಾಳುವ ಪ್ರಕ್ರಿಯೆಯಲ್ಲಿ ಮಗುವಿನ ಪಾತ್ರ ಏನೂ ಇರುವುದಿಲ್ಲ.

Recommended Video

DKS-ಮೂಟೆ ಮೂಟೆ ತರಕಾರಿ ಖರೀದಿ ಮಾಡಿದ ಶಿವಕುಮಾರ್ | Oneindia Kannada

ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಡವೆಕೆರೆ ನಿವಾಸಿ ಸಂತೋಷ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ವಿಭಾಗೀಯ ಪೀಠ ನಡೆಸಿತು. ಲೈನ್‌ಮನ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು 2014ರ ಜೂನ್‌ನಲ್ಲಿ ನಿಧನರಾದರು. ಅನುಕಂಪದ ಆಧಾರದಲ್ಲಿ ನೌಕರಿ ಕೋರಿ ಎರಡನೇ ಪತ್ನಿ ಮಗ ಸಲ್ಲಿಸಿದ್ದ ಅರ್ಜಿಯನ್ನು ಕೆಪಿಟಿಸಿಎಲ್‌ ತಿರಸ್ಕರಿಸಿತ್ತು.

English summary
The Karnataka High Court ruled that children of second wife are eligible to get job on compassionate grounds. A division bench of Justice BV Nagarathna and Justice Hanchate Sanjeevkumar passed the order while allowing the appeal filed by K Santhosha of Kadavekere of Kanakapura taluk in Ramanagara district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X