• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸಿಬಿ ರಚನೆ ರದ್ದು; ಲೋಕಾಯುಕ್ತಕ್ಕೆ ಫುಲ್ ಪವರ್ ಕೊಟ್ಟ ಹೈಕೋರ್ಟ್‌

|
Google Oneindia Kannada News

ಬೆಂಗಳೂರು, ಆಗಸ್ಟ್ 11: ಲೋಕಾಯುಕ್ತ ವ್ಯಾಪ್ತಿಗೆ ಎಸಿಬಿಯನ್ನು ಸೇರ್ಪಡೆ ಮಾಡಿ ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶವನ್ನು ಹೊರಡಿಸಿದೆ. ಎಸಿಬಿ ತನಿಖೆಯನ್ನು ನಡೆಸುತ್ತಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ಸೂಚನೆಯನ್ನು ನೀಡಲಾಗಿದೆ. ಇನ್ನು ಎಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳು ಮರು ಸ್ಥಾಪನೆಯಾಗಲಿವೆ. ಎಸಿಬಿಯಲ್ಲಿರುವ ಅಧಿಕಾರಿಗಳು ಮತ್ತು ಪೊಲೀಸರು ಸಹ ಲೋಕಾಯುಕ್ತ ವ್ಯಾಪ್ತಿಗೆ ಬರಲಿದ್ದಾರೆ.

ಎಸಿಬಿ ರಚನೆಯನ್ನೇ ರದ್ದು ಪಡಿಸಿದ ಹೈಕೋರ್ಟ್, ಈವೆರಗೂ ಎಸಿಬಿ ನಡೆಸಿದ ಎಲ್ಲಾ ಪ್ರಕರಣಗಳ ದಾಖಲೆಗಳನ್ನು ಮತ್ತು ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಲೋಕಾಯುಕ್ತಕ್ಕೆ ವರ್ಗಾವಣೆಯನ್ನು ನಡೆಸಬೇಕೆಂದು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ನ್ಯಾ. ಕೆ. ಎಸ್. ಹೇಮಲೇಖಾ ಅವರಿದ್ದ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ.

ಮಾಜಿ ಲೋಕಾಯುಕ್ತ ವೈ. ಭಾಸ್ಕರ್ ರಾವ್ ಲಂಚ ಕೇಸ್ ಏನಾಯ್ತು? ಮಾಜಿ ಲೋಕಾಯುಕ್ತ ವೈ. ಭಾಸ್ಕರ್ ರಾವ್ ಲಂಚ ಕೇಸ್ ಏನಾಯ್ತು?

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2016 ಮಾ. 4ರಂದು ಎಸಿಬಿ ರಚನೆಯನ್ನು ಮಾಡಿ ಆದೇಶವನ್ನು ಹೊರಡಿಸಿತ್ತು. ಎಸಿಬಿ ರಚನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿದ್ದ ಅಧಿಸೂಚನೆಯನ್ನು ಮಾ. 19, 2016ರಲ್ಲಿ ಪ್ರಶ್ನಿಸಲಾಗಿತ್ತು. ಈ ಪ್ರಕರಣ ಕುರಿತ ತೀರ್ಪು ಪ್ರಕಟಿಸಿರುವ ಹೈಕೋರ್ಟ್‌ ಎಸಿಬಿ ರಚನೆಯನ್ನೇ ರದ್ದು ಮಾಡಿದೆ.

ಸಮಾಜ ಪರಿವರ್ತನಾ ಸಮುದಾಯ ಮತ್ತಿತರರು ಪಿಐಎಲ್ ಸಲ್ಲಿಕೆ

ಸಮಾಜ ಪರಿವರ್ತನಾ ಸಮುದಾಯ ಮತ್ತಿತರರು ಪಿಐಎಲ್ ಸಲ್ಲಿಕೆ

ಚಿದಾನಂದ ಅರಸ್, ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನಾ ಸಮುದಾಯ ಸೇರಿದಂತೆ ಹಲವರು ಜನ ಎಸಿಬಿಯ ರಚನೆಯನ್ನು ರದ್ದು ಕೋರಿ, ಎಸಿಬಿ ರಚನೆಯ ಸಾಂವಿಧಾನಿಕ ಸ್ಥಾನಮಾನವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು. ಮಾ. 19, 2016ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ಸುದೀರ್ಘ ವಾದ ಪ್ರತಿವಾದವನ್ನು ಆಲಿಸಿದ್ದ ನ್ಯಾಯಪೀಠ ಎಸಿಬಿ ರಚನೆಯನ್ನು ರದ್ದು ಮಾಡಿ ಆದೇಶವನ್ನು ಹೊರಡಿಸಿದೆ.

ಜಾತಿ ಆಧರಿಸಿ ನೇಮಕ ಮಾಡಬಾರದು

ಜಾತಿ ಆಧರಿಸಿ ನೇಮಕ ಮಾಡಬಾರದು

ಲೋಕಾಯುಕ್ತ ಮತ್ತು ಉಪಲೋಕಾಯುಕ್ತರನ್ನು ನೇಮಕವನ್ನು ಮಾಡುವ ಸಮಯದಲ್ಲಿ ಸರ್ಕಾರ ಅರ್ಹತೆ ಪರಿಗಣಿಸಬೇಕು. ಜಾತಿ ಆಧರಿಸಿ ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕ ಮಾಡಬಾರದು ಎಂದು ನ್ಯಾಯಪೀಠ ಅಭಿಪ್ರಾಯವನ್ನು ಪಟ್ಟಿದೆ. ಇದರೊಂದಿಗೆ ಎಸಿಬಿ ರಚನೆಯನ್ನೇ ರದ್ದುಪಡಿಸಿದ ಹೈಕೋರ್ಟ್ , ಈವೆರಗೂ ಎಸಿಬಿ ನಡೆಸಿದ ಎಲ್ಲಾ ಪ್ರಕರಣಗಳ ದಾಖಲೆಗನ್ನು ಮತ್ತು ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ತಕ್ಷಣವೇ ಲೋಕಾಯುಕ್ತಕ್ಕೆ ವರ್ಗಾವಣೆಯನ್ನು ನಡೆಸಬೇಕೆಂದು ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ನ್ಯಾ. ಕೆ. ಎಸ್. ಹೇಮಲೇಖಾ ಅವರಿದ್ದ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ.

ಎಸಿಬಿಯನ್ನು ಕಲೆಕ್ಷನ್ ಬ್ಯೂರೋ ಎಂದಿದ್ದ ಕೋರ್ಟ್‌

ಎಸಿಬಿಯನ್ನು ಕಲೆಕ್ಷನ್ ಬ್ಯೂರೋ ಎಂದಿದ್ದ ಕೋರ್ಟ್‌

ಎಸಿಬಿಯ ತನಿಖೆಯ ವಿಧಾನದಿಂದ ಬೇಸತ್ತಿದ್ದ ಹೈಕೋರ್ಟ್‌ ಬಿ ರಿಪೋರ್ಟ್‌ ಹಾಕಿದ್ದರ ಬಗೆಗಿನ ಎಲ್ಲಾ ಮಾಹಿತಿಯನ್ನು ಕೇಳಿತ್ತು. ಸರಿಯಾದ ಮಾಹಿತಿಯನ್ನು ಸಲ್ಲಿಸದ ಎಸಿಬಿ ವಿರುದ್ದ ಗರಂ ಆಗಿತ್ತು. ಈ ವೇಳೆ ಎಸಿಬಿಯನ್ನು ಕಲೆಕ್ಷನ್ ಬ್ಯೂರೋ ಎಂದಿದ್ದ ಹೈಕೋರ್ಟ್‌ ಹೇಳಿತ್ತು. ಇದಾದ ಬಳಿಕ ಎಚ್ಚೆತ್ತಾ ಎಸಿಬಿ ಐಎಎಸ್ ಅಧಿಕಾರಿಯನ್ನು ಬಂಧಿಸುವ ಕೆಲಸವನ್ನು ಮಾಡಿತ್ತು.

ಲೋಕಾಯುಕ್ತ ಪವರ್ ಫುಲ್ ಆಗುತ್ತಾ?

ಲೋಕಾಯುಕ್ತ ಪವರ್ ಫುಲ್ ಆಗುತ್ತಾ?

ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೆಲ್ಮನವಿಯನ್ನೋ, ಅಥವಾ ಸುಪ್ರೀಂ ಅಗಳಕ್ಕೋ ಹೋಗದೆ ಇದ್ದರೇ ಲೋಕಾಯುಕ್ತರಿಗೆ ಫುಲ್ ಪವರ್ ಬರೋದು ಗ್ಯಾರಂಟಿಯಾಗಲಿದೆ. ಇನ್ನು ಜಸ್ಟಿಸ್ ವೆಂಕಟಾಲಯ್ಯ, ಸಂತೋಷ್ ಹೆಗಡೆಯವರ ಕಾಲದಂತೆ ಲೋಕಾಯುಕ್ತ ಸಂಸ್ಥೆ ತಮ್ಮ ಹಳೇಯ ಖದರ್ ತೋರಿಸುವ ಮೂಲಕ ಭ್ರಷ್ಟರ ಪಾಲಿಗೆ ಸಿಂಹಸ್ವಪ್ನವಾಗಲಿ ಅನ್ನೋದು ಜನರ ಆಶಯವಾಗಿದೆ.

English summary
High Court of Karnataka abolished the Anti Corruption Bureau (ACB), formed by the state government in 2016 by withdrawing the Lokayukta police wing’s power under Prevention of Corruption (PC) Act,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X