ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಗಗನಕ್ಕೆ ಮುತ್ತಿಕ್ಕೀತು, ಮುತ್ತು ಎರಡಾಯಿತಲೇ ಎಚ್ಚರ': ಕಾರ್ಣಿಕ

|
Google Oneindia Kannada News

Recommended Video

North Karnataka Flood : ಉತ್ತರ ಕರ್ನಾಟಕದ ಪ್ರವಾಹದ ಬಗ್ಗೆ ಕಾರ್ಣಿಕ ಕೋಡಿ ಶ್ರೀ ಭವಿಷ್ಯ

ಶ್ರಾವಣ ಮಾಸದ ಎರಡನೇ ಸೋಮವಾರ (ಆ 5) ಆಂಜನೇಯ ಸ್ವಾಮಿಯ ಉತ್ಸವದ ವೇಳೆ ಕಾರ್ಣಿಕ ನುಡಿಯಲಾಗಿದೆ. ಅದರ ಪ್ರಕಾರ, ರೈತರು ಸಂಕಷ್ಟ ಎದುರಿಸಬೇಕಾಗುತ್ತದೆ.

ಕಳೆದ ಜುಲೈ ತಿಂಗಳಲ್ಲಿ ಕೋಡಿಮಠದ ಶ್ರೀಗಳು ಸಮ್ಮಿಶ್ರ ಸರಕಾರದ ಆಯುಸ್ಸಿನ ಬಗ್ಗೆ ಮತ್ತು ರಾಜ್ಯದ ಹವಾಮಾನದ ಬಗ್ಗೆ ಭವಿಷ್ಯ ನುಡಿದಿದ್ದರು.

ಇದಲ್ಲದೇ, ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಕಳೆದ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ, ಪರೋಕ್ಷವಾಗಿ, 'ಮೋದಿ ಮತ್ತೆ ಚೌಕೀದಾರ್' ಎಂದಿದ್ದರು.

ರಾಜ್ಯ ಮೈತ್ರಿ ಸರ್ಕಾರ, ರಾಜ್ಯ ಹವಾಮಾನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ ರಾಜ್ಯ ಮೈತ್ರಿ ಸರ್ಕಾರ, ರಾಜ್ಯ ಹವಾಮಾನದ ಬಗ್ಗೆ ಕೋಡಿಮಠ ಶ್ರೀ ಭವಿಷ್ಯ

ಈಗ, ಎರಡು ದಿನದ ಹಿಂದೆ, ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯದಲ್ಲಿ ನುಡಿಯಲಾಗಿರುವ ಕಾರ್ಣಿಕವೂ, ಈಗ, ಉತ್ತರ ಕರ್ನಾಟಕದ ಭಾಗದಲ್ಲಾಗುತ್ತಿರುವ ಅತಿವೃಷ್ಟಿಗೆ ಒಂದಕ್ಕೊಂದು ತಾಳೆಯಾಗುತ್ತಿರುವುದು ಗಮನಿಸಬೇಕಾದ ವಿಚಾರ.

ಮೈತ್ರಿ ಸರ್ಕಾರಕ್ಕೆ ಆಯುಸ್ಸು ಇಲ್ಲ

ಮೈತ್ರಿ ಸರ್ಕಾರಕ್ಕೆ ಆಯುಸ್ಸು ಇಲ್ಲ

ಕಳೆದ ಜುಲೈ ಒಂದರಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು, ಮೈತ್ರಿ ಸರ್ಕಾರದ ಬಗ್ಗೆ ಭವಿಷ್ಯ ನುಡಿದು, ಈ ಸರ್ಕಾರಕ್ಕೆ ಹೆಚ್ಚು ಕಾಲ ಆಯುಸ್ಸು ಇಲ್ಲ. ಜೊತೆಗೆ, ಈ ಬಾರಿ ಮಳೆಯ ಕೊರತೆ ಆಗುವುದಿಲ್ಲ, ಗಾಳಿ ಹೋದ ನಂತರ ಮಳೆ ಬರುತ್ತದೆ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದರು.

ಮಂಡ್ಯ, ಕಲಬುರಗಿ: ಕೋಡಿಶ್ರೀಗಳು ಭವಿಷ್ಯ ನುಡಿದಿದ್ದೇನು, ಆಗಿದ್ದೇನು? ಮಂಡ್ಯ, ಕಲಬುರಗಿ: ಕೋಡಿಶ್ರೀಗಳು ಭವಿಷ್ಯ ನುಡಿದಿದ್ದೇನು, ಆಗಿದ್ದೇನು?

ಕೋಡಿಶ್ರೀಗಳ ಭವಿಷ್ಯ

ಕೋಡಿಶ್ರೀಗಳ ಭವಿಷ್ಯ

ಕೋಡಿಶ್ರೀಗಳ ಭವಿಷ್ಯದಂತೆ, ಕುಮಾರಸ್ವಾಮಿ ನೇತೃತ್ವದ ಸರಕಾರ ಪತನಗೊಂಡಿತ್ತು. ಆದರೆ, ಮಳೆಯ ಕೊರತೆ ಆಗುವುದಿಲ್ಲ ಎನ್ನುವುದು ಸರಿಯಾದ ಭವಿಷ್ಯವಾಗಿದ್ದರೂ, ಉತ್ತರ ಕರ್ನಾಟಕದ ಭಾಗದಲ್ಲಿನ ಜನತೆ ಅತಿವೃಷ್ಟಿಯಿಂದ ಹೈರಾಣರಾಗಿ ಹೋಗಿದ್ದಾರೆ. ತೀರಾ ಗಂಭೀರ ಪರಿಸ್ಥಿತಿ ಅಲ್ಲಿದೆ ಎನ್ನುವುದು ವಾಸ್ತವತೆ.

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ, ಆಂಜನೇಯ ಸ್ವಾಮಿ

ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ, ಆಂಜನೇಯ ಸ್ವಾಮಿ

ಎರಡನೇ ಶ್ರಾವಣ ಸೋಮವಾರದ ದಿನದಂದು, ದಾವಣಗೆರೆ ಜಿಲ್ಲೆ, ಹರಿಹರ ತಾಲೂಕಿನ, ಆಂಜನೇಯ ಸ್ವಾಮಿ ಉತ್ಸವದಲ್ಲಿ ನುಡಿಯಲಾದ ಕಾರ್ಣಿಕ ಹೀಗಿತ್ತು, ' ಗಗನಕ್ಕೆ ಮುತ್ತಿಕ್ಕೀತು, ಮುತ್ತು ಎರಡಾಯಿತಲೇ ಎಚ್ಚರ'. ಇದರ ಪ್ರಕಾರ, 'ಅತಿರೇಕ ಮಳೆಯಿಂದಾಗಿ, ಸಮೃದ್ದ ಬೆಳೆ, ರೈತರಿಗೆ ದಕ್ಕುವುದಿಲ್ಲ' ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಲಾಗುತ್ತಿದೆ

ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಲಾಗುತ್ತಿದೆ

ಶಿವಮೊಗ್ಗ - ಹರಿಹರ ರಸ್ತೆಯಲ್ಲಿರುವ ಈ ಪುರಾಣ ಪ್ರಸಿದ್ದ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಆಂಜನೇಯಸ್ವಾಮಿಯ, ವಾರ್ಷಿಕ ಉತ್ಸವದಲ್ಲಿ ಈ ಮೇಲಿನ ಕಾರ್ಣಿಕ ನುಡಿಯಲಾಗಿದ್ದು, ಇದನ್ನು ಅವರವರ ಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳಲಾಗುತ್ತಿದೆ.

ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು..ಕುರ್ಚಿಯ ಕಾಲು ಗಟ್ಟಿ ಆತು

ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು..ಕುರ್ಚಿಯ ಕಾಲು ಗಟ್ಟಿ ಆತು

'ಸೆರಗೊಡ್ಡಿ ಬೇಡಿದವರಿಗೆ ಸಿಹಿ ಆತು.. ಕುಟುಂಬ ಸರಪಳಿ ತುಂಡಾತು..ಕುರ್ಚಿಯ ಕಾಲು ಗಟ್ಟಿ ಆತು.. ಸಂಸಾರ ಬಂಧ ಕತ್ತಲ ಕೋಣೆಗೆ ಹೋದೀತು..' ಎನ್ನುವ ಒಗಟಿನ ಮೂಲಕ ಕೋಡಿಶ್ರೀಗಳು ಮಂಡ್ಯ ಚುನಾವಣೆಯ ಬಗ್ಗೆ ಭವಿಷ್ಯವನ್ನು ನುಡಿದಿದ್ದರು. ಇದು, ಪರೋಕ್ಷವಾಗಿ ಸುಮಲತಾ ಗೆಲ್ಲಲಿದ್ದಾರೆಂದು ಶ್ರೀಗಳು ನುಡಿದ ಭವಿಷ್ಯ ಎಂದೇ ಹೇಳಲಾಗುತ್ತಿತ್ತು.

English summary
Karnataka Heavy Rain May Effect Farmers Corps: Prediction at One Of the Ranganatha Swamy Temple, Anjaneya Utsava in Davangere District Limit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X