ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ ಡೌನ್ ಬೇಡ ಎಂದ ಸಚಿವರಿಗೆ ಡಾ.ಸುಧಾಕರ್ ಹೇಳಿದ್ದೇನು?

|
Google Oneindia Kannada News

ಬೆಂಗಳೂರು, ಮೇ 31: ಜೂನ್ ಏಳರ ನಂತರ ಕರ್ನಾಟಕ ಅನ್ ಲಾಕ್ ಆಗಲಿದೆಯೇ ಎನ್ನುವುದರ ಬಗ್ಗೆ ಆರೋಗ್ಯ ಸಚಿವ ಡಾ.ಸುಧಾಕರ್, ಏಕಾಏಕಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸಚಿವರಾದ ಎಸ್.ಟಿ.ಸೋಮಶೇಖರ್ ಮತ್ತು ಎಂ.ಟಿ.ಬಿ ನಾಗರಾಜ್, ಲಾಕ್ ಡೌನ್ ಜೂನ್ ಏಳರ ನಂತರ ಮುಂದುವರಿಯಬಾರದು, ಜನರಿಗೆ ತೊಂದರೆಯಾಗುತ್ತಿದೆ ಎಂದು ಹೇಳಿದ್ದರು.

ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್‌ನ ಸಾಮಾನ್ಯ ಫ್ರಿಜ್‌ನಲ್ಲಿ ಕೊರೊನಾ ಲಸಿಕೆ!ಅಡ್ಡ ಪರಿಣಾಮದ ಅಪಾಯ: ಪಂಚತಾರಾ ಹೋಟೆಲ್‌ನ ಸಾಮಾನ್ಯ ಫ್ರಿಜ್‌ನಲ್ಲಿ ಕೊರೊನಾ ಲಸಿಕೆ!

ಈ ಬಗ್ಗೆ ಮಾತನಾಡಿದ ಸುಧಾಕರ್, "ಲಾಕ್ ಡೌನ್, ಅನ್ ಲಾಕ್ ವಿಚಾರವನ್ನು ವೈದ್ಯಕೀಯ ಕೋನದಿಂದ ನೋಡಬೇಕಿದೆ. ಕೂರೊನಾದಿಂದ ಯಾವ ರೀತಿ ಸಾವುನೋವು ಆಗಿದೆ ಎನ್ನುವುದನ್ನು ಎಲ್ಲರೂ ಮೊದಲು ಅರಿಯಬೇಕು. ಇದೊಂದು ಸಾಂಕ್ರಾಮಿಕ ರೋಗ ಆಗಿರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು"ಎಂದು ಅಭಿಪ್ರಾಯ ಪಟ್ಟಿದ್ದಾರೆ.

Karnataka Health Minister Dr.Sudhakar Reaction On Lockdown Extension

"ಬಹಳ ಸುಲಭವಾಗಿ ನಾವು ಅನ್ ಲಾಕ್ ಎಂದು ಹೇಳಬಹುದು. ಆದರೆ ಅದರ ಸಾಧಕಬಾಧಕಗಳನ್ನು ಅರ್ಥ ಮಾಡಿಕೊಳ್ಳದೇ, ತಾಂತ್ರಿಕ ತೊಂದರೆಗಳನ್ನು ಅರಿಯದೇ, ಸಮಿತಿಯ ಸಲಹೆಯನ್ನು ನೋಡದೇ ಹೇಳಿಕೆ ನೀಡುವುದು ಅಪ್ರಸ್ತುತ"ಎಂದು ಸುಧಾಕರ್ ಹೇಳಿದ್ದಾರೆ.

"ತಾಂತ್ರಿಕ ಸಲಹಾ ಸಮಿತಿಯ ವರದಿಯ ಬಗ್ಗೆ ಅವರಿಗೆ ಮಾಹಿತಿ ಇಲ್ಲದೇ ಇರಬಹುದು. ಆರೋಗ್ಯ ಸಚಿವನಾಗಿ ಅವರಿಗೆ ತಿಳಿಸುವುದು ನನ್ನ ಕರ್ತವ್ಯ"ಎಂದು ಸುಧಾಕರ್ ಹೇಳಿದ್ದಾರೆ.

Recommended Video

UT Khader Exclusive Interview with lavanya | ಜನ BJP ಅವರಿಗೆ ಬುದ್ಧಿ ಕಲಿಸುತ್ತಾರೆ! | Oneindia Kannada

"ಅವರ ಕ್ಷೇತ್ರದ ಸಮಸ್ಯೆಯನ್ನು ಅವರು ಹತ್ತಿರದಿಂದ ನೋಡಿರುತ್ತಾರೆ, ಅನೇಕರು ತಮ್ಮ ಸಮಸ್ಯೆಗಳನ್ನು ಅವರ ಬಳಿ ತೋಡಿಕೊಂಡಿರುತ್ತಾರೆ. ಭಾವನಾತ್ಮಕವಾಗಿ ಅವರು ಹೇಳಿಕೆಯನ್ನು ನೀಡಿರಬಹುದು"ಎಂದು ಡಾ.ಸುಧಾಕರ್ ಹೇಳಿದ್ದಾರೆ.

English summary
Karnataka Health Minister Dr.Sudhakar Reaction On Lockdown Extension
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X