ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕೊರೊನಾ ವೈರಸ್ ರೋಗಿಗಳ ಶೇ.95ರಷ್ಟು ಸಂಪರ್ಕಿತರ ಸುಳಿವೇ ಪತ್ತೆ ಇಲ್ಲ!

|
Google Oneindia Kannada News

ಬೆಂಗಳೂರು, ಜೂನ್ 20: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರ ಸಂಪರ್ಕದಲ್ಲಿ ಇದ್ದವರು ಯಾರು ಎಂಬುದನ್ನು ಪತ್ತೆ ಮಾಡುವುದು ತುರ್ತು ಅಗತ್ಯ ಎಂಬುದನ್ನು ಕೋವಿಡ್-19 ವಾರ್ ರೂಮ್ ಅಂಕಿ-ಅಂಶಗಳು ಸ್ಪಷ್ಟವಾಗಿ ಹೇಳುತ್ತಿವೆ.
ಕೋವಿಡ್-19 ಸೋಂಕಿನ ನಿಯಂತ್ರಣ ಮತ್ತು ನಿರ್ವಹಣೆಗೆ ಆರೋಗ್ಯ ಇಲಾಖೆಯು ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಏಕೆಂದರೆ ಕಳೆದ ಒಂದು ವಾರದಲ್ಲಿ ಪತ್ತೆ ಆಗಿರುವ ಹೊಸ ಸೋಂಕಿತರಿಗೆ ಸಂಬಂಧಿಸಿದಂತೆ ಶೇ.95.42ರಷ್ಟು ಸಂಪರ್ಕಿತರನ್ನು ಪತ್ತೆ ಮಾಡುವುದು ಬಾಕಿ ಉಳಿದಿದೆ.

ಹುಷಾರಾಗಿರಿ: ಕರ್ನಾಟಕದಲ್ಲಿ ಒಂದೇ ದಿನ ಅಂಟಿದೆ 750 ಮಂದಿಗೆ ಕೊರೊನಾ ವೈರಸ್!ಹುಷಾರಾಗಿರಿ: ಕರ್ನಾಟಕದಲ್ಲಿ ಒಂದೇ ದಿನ ಅಂಟಿದೆ 750 ಮಂದಿಗೆ ಕೊರೊನಾ ವೈರಸ್!

ಕಳೆದ ಜೂನ್ 9 ಮತ್ತು ಜೂನ್ 15ರ ನಡುವೆ ಬೆಂಗಳೂರಿನಲ್ಲಿ 3,799 ಪ್ರಕರಣಗಳು ದಾಖಲಾಗಿವೆ. ಈ ಸೋಂಕಿತ ಪ್ರಕರಣಗಳಿಗೆ ಸಂಬಂಧಿಸಿದಂತೆ ಇದುವರೆಗೂ ಕೇವಲ 308 ಪ್ರಾಥಮಿಕ ಸಂಪರ್ಕಿತರು ಹಾಗೂ 241 ದ್ವಿತೀಯ ಸಂಪರ್ಕತರನ್ನು ಪತ್ತೆ ಮಾಡಲಾಗಿದೆ. ರಾಜ್ಯದಲ್ಲಿ ಕೋವಿಡ್-19 ಸಂಪರ್ಕ ಪತ್ತೆ ಹಚ್ಚುವಿಕೆಯ ಸರಾಸರಿಯು ಪ್ರಾಥಮಿಕ ಸಂಪರ್ಕಿತರ ಪ್ರಮಾಣ ಶೇ.0.09ರಷ್ಟಿದ್ದರೆ, ದ್ವಿತೀಯ ಸಂಪರ್ಕಿತರ ಪ್ರಮಾಣ ಶೇ.0.07ರಷ್ಟಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಕೋವಿಡ್-19 ಸೋಂಕಿತರ ಸಂಪರ್ಕ ಪತ್ತೆಗೆ ಹೆಚ್ಚಿನ ಆದ್ಯತೆ:

"ಕೊರೊನಾವೈರಸ್ ಮೊದಲ ಅಲೆಯ ಸಮಯದಲ್ಲಿ ಸಂಪರ್ಕ ಪತ್ತೆ ಹಚ್ಚುವಿಕೆಯೇ ಆದ್ಯತೆಯಾಗಿತ್ತು. ಆದಾಗ್ಯೂ, ಎರಡನೇ ಮತ್ತು ಮೂರನೇ ಅಲೆಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದವು. ಈ ಹಂತದಲ್ಲಿ ಸೋಂಕಿತರ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡುವುದು ಕೊಂಚ ಕಷ್ಟಕರವಾಗಿತ್ತು. ಇದರ ಮಧ್ಯೆ ಅನೇಕ ರೋಗಿಗಳಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. ರೋಗಿಗಳು ತಮ್ಮ ಸಂಪರ್ಕದಲ್ಲಿ ಇರುವವರ ಬಗ್ಗೆ ನಮಗೆ ಮಾಹಿತಿ ನೀಡಲು ಮುಂದೆ ಬರಬೇಕು ಹಾಗೂ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು," ಎಂದು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊರೊನಾ ವೈರಸ್ ಸಂಪರ್ಕಿತರನ್ನು ಪತ್ತೆ ಮಾಡುವುದು ಅಗತ್ಯ

ಕೊರೊನಾ ವೈರಸ್ ಸಂಪರ್ಕಿತರನ್ನು ಪತ್ತೆ ಮಾಡುವುದು ಅಗತ್ಯ

"ಕೊರೊನಾ ವೈರಸ್ ಮೊದಲ ಅಲೆಯ ಸಮಯದಲ್ಲಿ ಸಂಪರ್ಕ ಪತ್ತೆ ಹಚ್ಚುವಿಕೆಯೇ ಆದ್ಯತೆಯಾಗಿತ್ತು. ಆದಾಗ್ಯೂ, ಎರಡನೇ ಮತ್ತು ಮೂರನೇ ಅಲೆಗಳ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದವು. ಈ ಹಂತದಲ್ಲಿ ಸೋಂಕಿತರ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡುವುದು ಕೊಂಚ ಕಷ್ಟಕರವಾಗಿತ್ತು. ಇದರ ಮಧ್ಯೆ ಅನೇಕ ರೋಗಿಗಳಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿರಲಿಲ್ಲ. ರೋಗಿಗಳು ತಮ್ಮ ಸಂಪರ್ಕದಲ್ಲಿ ಇರುವವರ ಬಗ್ಗೆ ನಮಗೆ ಮಾಹಿತಿ ನೀಡಲು ಮುಂದೆ ಬರಬೇಕು ಹಾಗೂ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳಬೇಕು," ಎಂದು ಹಿರಿಯ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್19 ಸೋಂಕಿತ ಪ್ರಕರಣಗಳು

ರಾಜ್ಯದಲ್ಲಿ ಕೋವಿಡ್19 ಸೋಂಕಿತ ಪ್ರಕರಣಗಳು

ಕಳೆದ 24 ಗಂಟೆಗಳಲ್ಲೇ 623 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 412 ಸೋಂಕಿತರು ಗುಣಮುಖರಾಗಿದ್ದು, ಒಂದು ಸಾವಿನ ಪ್ರಕರಣ ವರದಿಯಾಗಿದೆ. ಭಾನುವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 3960831 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಈವರೆಗೂ 3915683 ಸೋಂಕಿತರು ಗುಣಮುಖರಾಗಿದ್ದು, 40,071 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊತರಾಗಿ ರಾಜ್ಯದಲ್ಲಿ 5035 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರ ಜಿಲ್ಲೆಯಲ್ಲೇ 588 ಜನರಿಗೆ ಸೋಂಕು

ಬೆಂಗಳೂರು ನಗರ ಜಿಲ್ಲೆಯಲ್ಲೇ 588 ಜನರಿಗೆ ಸೋಂಕು

ಕರ್ನಾಟಕದ ಇಡೀ ರಾಜ್ಯದಲ್ಲಿ 623 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ಖಾತ್ರಿಯಾಗಿದ್ದರೆ, ಅದರಲ್ಲಿ 588 ಮಂದಿ ಸೋಂಕಿತರು ಬೆಂಗಳೂರಿನವರೇ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 588 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1796042ಕ್ಕೆ ಏರಿಕೆಯಾಗಿದೆ. ಇದುವರೆಗೂ 1774242 ಸೋಂಕಿತರು ಗುಣಮುಖರಾಗಿದ್ದರೆ, 16966 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಕೋವಿಡ್-19 ಅಪಾಯ ಇನ್ನೂ ಕಡಿಮೆಯಾಗಿಲ್ಲ ಎನ್ನುವ ಸಂದೇಶ ರವಾನೆಯಾಗಿದೆ.

ರಾಜ್ಯದಲ್ಲಿ ಕೋವಿಡ್-19 ತಪಾಸಣೆ ಮತ್ತು ಲಸಿಕೆ ವಿತರಣೆ

ರಾಜ್ಯದಲ್ಲಿ ಕೋವಿಡ್-19 ತಪಾಸಣೆ ಮತ್ತು ಲಸಿಕೆ ವಿತರಣೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 5704 ಜನರಿಗೆ ರಾಪಿಡ್ ಆಂಟಿಜೆನಿಕ್ ಪರೀಕ್ಷೆ ನಡೆಸಲಾಗಿದೆ. 17466 ಜನರಿಗೆ RT-PCR ತಪಾಸಣೆ ನಡೆಸಲಾಗಿದ್ದು, ಒಂದು ದಿನದಲ್ಲಿ ಒಟ್ಟು 23170 ಮಂದಿಗೆ ಕೊವಿಡ್-19 ಸೋಂಕಿನ ತಪಾಸಣೆ ನಡೆಸಲಾಗಿದೆ.

Recommended Video

Narendra Modi ಬೆಂಗಳೂರಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಹೀಗೆ | *Politics | OneIndia Kannada

English summary
How Karnataka Health Department trace 95 per cent of coronavirus patients contacts in past one week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X