ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರ ರಾಜ್ಯಗಳಿಂದ ಆ್ಯಂಟಿ ರೇಬಿಸ್ ಚುಚ್ಚು ಮದ್ದು ಖರೀದಿಗೆ ಚಿಂತನೆ

|
Google Oneindia Kannada News

ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಆ್ಯಂಟಿ ರೇಬಿಸ್ ಚುಚ್ಚುಮದ್ದು ಕೊರತೆ ಇರುವ ಕಾರ ಹೊರ ರಾಜ್ಯದಿಂದ ಖರೀದಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿದೆ.

ಈ ಕುರಿತು ಆಯುಕ್ತ ಪಂಕಜ್ ಕುಮಾರ್ ಪಾಂಡೆ ಮಾಹಿತಿ ನೀಡಿದ್ದು, ರಾಜ್ಯದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಆ್ಯಂಟಿ ರೇಬಿಸ್ ಚುಚ್ಚುಮದ್ದು ಕೊರತೆ ಇದೆ. ಈ ಸಂಬಂಧ ಕೇರಳ, ತಮಿಳುನಾಡು, ತೆಲಂಗಾಣಕ್ಕೆ ಪತ್ರ ಬರೆಯಲಾಗಿದ್ದು, ಲಭ್ಯವಿರುವ ಆ್ಯಂಟಿ ರೇಬಿಸ್ ಮತ್ತು ಇಮ್ಯುನೊಗ್ಲೊಬ್ಯುಲಿನ್ ಔಷಧಗಳನ್ನು ನೀಡುವಂತೆ ಕೋರಲಾಗಿತ್ತು.

ಬೆಂಗಳೂರು : ಬೀದಿನಾಯಿಗಳ ದಾಳಿ, 5 ವರ್ಷದ ಬಾಲಕ ಬಲಿ ಬೆಂಗಳೂರು : ಬೀದಿನಾಯಿಗಳ ದಾಳಿ, 5 ವರ್ಷದ ಬಾಲಕ ಬಲಿ

ಅದರಂತೆ ಜೂನ್ 22ರಂದು ಕೇರಳ ಸರ್ಕಾರದ ಔಷಧ ಸರಬರಾಜು ಸಂಸ್ಥೆಯವರು 10 ಸಾವಿರ ರೆಬಿಸ್ ಮತ್ತು 2 ಸಾವಿರ ಇಮ್ಯುನೊಗ್ಲೊಬ್ಯುಲಿನ್ ಔಷಧಗಳನ್ನು ನೀಡಲು ಒಪ್ಪಿಗೆ ಸೂಚಿಸಿದೆ. ತಮಿಳುನಾಡಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ.

Karnataka Health department ready to buy anti Rabies vaccine from other states

ದೇಶಾದ್ಯಂತ ಆ್ಯಂಟಿ ರೇಬಿಸ್ ಮತ್ತು ಇಮ್ಯುನೊಗ್ಲೊಬ್ಯುಲಿನ್ ಚುಚ್ಚುಮದ್ದುಗಳ ಉತ್ಪಾದನಾ ಕೊರತೆ ಉಂಟಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಏ.10ರಂದು ಎಲ್ಲಾ ರಾಜ್ಯದಲ್ಲಿ ಉಂಟಾಗಿರುವ ಔಷಧ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದರು.

English summary
Karnataka Health department ready to buy anti Rabies vaccine from other states, written to Tamil Nadu, Telangana and Kerala hoping to get a few vials for patients in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X