ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ ಸಮಾರಂಭಕ್ಕೆ ಸರಕಾರ ಹೊರಡಿಸಿದ 17 ನಿಯಮಗಳ ಪಟ್ಟಿ

|
Google Oneindia Kannada News

ಮೇ ಹದಿನೆಂಟರಿಂದ ಲಾಕ್ ಡೌನ್ ಇನ್ನಷ್ಟು ಸಡಿಲಗೊಳ್ಳುವ ಸಾಧ್ಯತೆಯ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ, ಶುಕ್ರವಾರ (ಮೇ 15) ಸುಳಿವನ್ನು ನೀಡಿದ್ದಾರೆ.

ಈಗಾಗಲೇ, ಮದುವೆ ಸಮಾರಂಭದಲ್ಲಿ ಐವತ್ತು ಜನರು ಮೀರಿ ಭಾಗವಹಿಸುವಂತಿಲ್ಲ ಎನ್ನುವ ಆದೇಶವನ್ನು ಸರಕಾರ ಹೊರಡಿಸಿದೆ. ಜೊತೆಗೆ, ಸಾಮಾಜಿಕ ಅಂತರ ಕಾಪಾಡಿಕೊಂಡು ಬರುವುದು ಮತ್ತು ಮಾಸ್ಕ್ ಧರಿಸುವುದನ್ನೂ ಖಡ್ಡಾಯ ಮಾಡಲಾಗಿತ್ತು.

ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದ ಹೈಕೋರ್ಟ್ನಿಖಿಲ್ ಕುಮಾರಸ್ವಾಮಿ ಮದುವೆಯಲ್ಲಿ ಲಾಕ್‌ಡೌನ್ ಉಲ್ಲಂಘನೆಯಾಗಿದೆ ಎಂದ ಹೈಕೋರ್ಟ್

ಮದುವೆ ಸಮಾರಂಭಕ್ಕೆ ಹದಿನೇಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮೇ 4ರ ನಂತರದ ಲಾಕ್ ಡೌನ್: ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿಮೇ 4ರ ನಂತರದ ಲಾಕ್ ಡೌನ್: ಮದುವೆ ಸಮಾರಂಭಕ್ಕೆ ಹೊಸ ಮಾರ್ಗಸೂಚಿ

ಮದುವೆ ನಡೆಸುವ ಕುಟುಂಬ ಮತ್ತು ಮದುವೆಯಲ್ಲಿ ಭಾಗವಹಿಸುವವರು ಈ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ. ಸರಕಾರ ಹೊರಡಿಸಿದ ಹದಿನೇಳು ಮಾರ್ಗಸೂಚಿಗಳ ಪಟ್ಟಿ ಇಂತಿದೆ:

ಕಂಟೇನ್ಮೆಂಟ್ ವಲಯದವರಿಗೆ ನಿರ್ಬಂಧ

ಕಂಟೇನ್ಮೆಂಟ್ ವಲಯದವರಿಗೆ ನಿರ್ಬಂಧ

1. ಕಂಟೇನ್ಮೆಂಟ್ ವಲಯದವರಿಗೆ ನಿರ್ಬಂಧ ಮುಂದುವರಿಯಲಿದೆ.
2. ಮದುವೆ ಸ್ಥಳಗಳ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು.
3. ಮದುವೆ ಹಾಲ್/ಸ್ಥಳಗಳಲ್ಲಿ ಎಸಿ ಹಾಕುವುದಕ್ಕೆ ನಿರ್ಬಂಧ.
4. ಮದುವೆ ಸಮಾರಂಭಕ್ಕೆ ಸ್ಥಳೀಯ ಆಡಳಿತ ಸಂಸ್ಥೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ.
5. ಮದುವೆಯಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರುವ ಹಾಗಿಲ್ಲ.

ಮದುವೆಗೆ ಬರುವುವವರು ಮಾಸ್ಕ್ ಧರಿಸುವುದು ಕಡ್ಡಾಯ

ಮದುವೆಗೆ ಬರುವುವವರು ಮಾಸ್ಕ್ ಧರಿಸುವುದು ಕಡ್ಡಾಯ

6. ಮದುವೆಗೆ ಬರುವುವವರು ಮಾಸ್ಕ್ ಧರಿಸುವುದು ಕಡ್ಡಾಯ.
7. ಸೂಕ್ತ ಸಾರ್ವಜನಿಕ ಸ್ಥಳ ಮತ್ತು ನೈಸರ್ಗಿಕ ವಾತಾವರಣ ಚೆನ್ನಾಗಿರುವಲ್ಲಿ ಮದುವೆ.
8. ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ. 99.5 ಸೆಲ್ಸಿಯಸ್ ಉಷ್ಣತೆ, ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರೋರಿಗೆ ನಿರ್ಬಂಧ.
9. ಗರ್ಭಿಣಿಯರು, 65 ವರ್ಷ ಮೇಲ್ಪಟ್ಟ ವೃದ್ಧರು, 10 ವರ್ಷದೊಳಗಿನ ಮಕ್ಕಳಿಗೆ ಸಮಾರಂಭಕ್ಕೆ ನಿರ್ಬಂಧ.

ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು

ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು

10. ಮದುವೆಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯಿರುವುದು ಕಡ್ಡಾಯ.
11. ಒಂದು ಮೀಟರ್ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.
12. ಮದುವೆಗೆ ಬಂದವರ ಲಿಸ್ಟ್ ಅನ್ನು ನೋಡಲ್ ಅಧಿಕಾರಿಗೆ ಸಲ್ಲಿಸಬೇಕು.
13. ಮದುವೆಗೆ ಬರುವವರು ಆರೋಗ್ಯ ಸೇತು ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು.

ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ

ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ

14. ಮದುವೆ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು.
15. ಸಾಬೂನಿನಲ್ಲಿ ಹ್ಯಾಂಡ್ ವಾಷ್ ಗೆ ವ್ಯವಸ್ಥೆಯನ್ನು ಮಾಡಿರಬೇಕು.
16. ಸಾರ್ವಜನಿಕವಾಗಿ ಉಗುಳುವಂತಿಲ್ಲ.
17. ಮದ್ಯ, ಪಾನ್, ಗುಟ್ಕಾ, ತಂಬಾಕು ಸೇವನೆ ನಿಷಿದ್ಧ.

English summary
Karnataka Health And Family Welfare Ministry's 17 Guide lines For Marriage Function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X