ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗ್ರಾಮ ಪಂಚಾಯಿತಿ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ
ಬೆಂಗಳೂರು, ಮೇ 29: ಮುಂದಿನ ತಿಂಗಳು ನಡೆಯಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕೊರೊನಾವೈರಸ್ ಹಾವಳಿಯಿಂದ ಮುಂದಕ್ಕೆ ಹಾಕಿ ಚುನಾವಣಾ ಆಯೋಗ ಆದೇಶಿಸಿದೆ.
Recommended Video
ನರಕಯಾತನೆ
ಅನುಭವಿಸ್ತಾಯಿದಾರೆ
ಕ್ವಾರಂಟೈನ್
ನಿವಾಸಿಗಳು
|
Oneindia
Kannada
ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿತ್ತು.
ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ. ಆದರೆ, ದಿನಾಂಕ ಇನ್ನೂ ತಿಳಿಸಿಲ್ಲ.
ರಾಜ್ಯದ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಬಹುತೇಕ ಈ ತಿಂಗಳೇ ಅಂತ್ಯವಾಗುತ್ತೆ. ಸುಗಮ ಆಡಳಿತಕ್ಕಾಗಿ ಈಗ ಸರ್ಕಾರವೇ ಆಡಳಿತ ಸಮಿತಿಯನ್ನು ಗ್ರಾಮ ಪಂಚಾಯಿತಿಗಳಲ್ಲಿ ರಚಿಸಬೇಕಿದೆ. ಚುನಾವಣೆ ಆಯೋಗದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.
Comments
karnataka gram panchayat election election commission ks eshwarappa ಗ್ರಾಮ ಪಂಚಾಯಿತಿ ಕರ್ನಾಟಕ ಚುನಾವಣೆ ಚುನಾವಣಾ ಆಯೋಗ
English summary
Karnataka Gram Panchayath Election Postponed By State Election Commission ahead of coronavirus outbreak.