ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮ ಪಂಚಾಯಿತಿ ಚುನಾವಣೆ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ

|
Google Oneindia Kannada News

ಬೆಂಗಳೂರು, ಮೇ 29: ಮುಂದಿನ ತಿಂಗಳು ನಡೆಯಬೇಕಿದ್ದ ರಾಜ್ಯದ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಕೊರೊನಾವೈರಸ್ ಹಾವಳಿಯಿಂದ ಮುಂದಕ್ಕೆ ಹಾಕಿ ಚುನಾವಣಾ ಆಯೋಗ ಆದೇಶಿಸಿದೆ.

Recommended Video

ನರಕಯಾತನೆ ಅನುಭವಿಸ್ತಾಯಿದಾರೆ ಕ್ವಾರಂಟೈನ್ ನಿವಾಸಿಗಳು | Oneindia Kannada

ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಹಂತದಲ್ಲಿ ಚುನಾವಣೆ ನಡೆಸದಿರುವುದೇ ಸೂಕ್ತ ಎಂಬ ತೀರ್ಮಾನಕ್ಕೆ ರಾಜ್ಯ ಚುನಾವಣಾ ಆಯೋಗ ಬಂದಿದೆ. ಈ ಹಿಂದೆ ಚುನಾವಣೆ ನಡೆಸಬೇಕೂ ಬೇಡವೋ ಎಂಬ ಬಗ್ಗೆ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆಯೋಗ ವರದಿ ಕೇಳಿತ್ತು.

ಬಹುತೇಕ ಜಿಲ್ಲಾಧಿಕಾರಿಗಳು ಚುನಾವಣೆ ನಡೆಸಲು ಕಷ್ಟ ಎಂಬ ವರದಿಯನ್ನು ನೀಡಿದ್ದರು. ಈ ವರದಿ ಅನ್ವಯ ಆಯೋಗ ಚುನಾವಣೆಗಳನ್ನು ಮುಂದೂಡಿದೆ. ಆದರೆ, ದಿನಾಂಕ ಇನ್ನೂ ತಿಳಿಸಿಲ್ಲ.

Karnataka Gram Panchayat Election Postponed By State Election Commission

ರಾಜ್ಯದ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳ ಅಧಿಕಾರಾವಧಿ ಬಹುತೇಕ ಈ ತಿಂಗಳೇ ಅಂತ್ಯವಾಗುತ್ತೆ. ಸುಗಮ ಆಡಳಿತಕ್ಕಾಗಿ ಈಗ ಸರ್ಕಾರವೇ ಆಡಳಿತ ಸಮಿತಿಯನ್ನು ಗ್ರಾಮ ಪಂಚಾಯಿತಿಗಳಲ್ಲಿ ರಚಿಸಬೇಕಿದೆ. ಚುನಾವಣೆ ಆಯೋಗದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ.

English summary
Karnataka Gram Panchayath Election Postponed By State Election Commission ahead of coronavirus outbreak.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X