ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Gram Panchayat polls 2020 Voting: ಪಂಚಾಯಿತಿ ಫೈಟ್; 2ನೇ ಹಂತದ ಮತದಾನ ಮುಕ್ತಾಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 27; ಕರ್ನಾಟಕದಲ್ಲಿ ಮೊದಲ ಮತ್ತು 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಮುಕ್ತಾಯಗೊಂಡಿದೆ. ಡಿಸೆಂಬರ್ 30ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕದ 109 ತಾಲೂಕುಗಳ 2709 ಗ್ರಾಮ ಪಂಚಾಯಿತಿಗಳ 39,378 ಸ್ಥಾನಗಳಿಗೆ ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಿತು. ಕೋವಿಡ್ ಸೋಂಕು ಹೊಂದಿರುವ ವ್ಯಕ್ತಿಗಳು ಸಹ ಮತ ಚಲಾವಣೆ ಮಾಡಲು ಅವಕಾಶ ನೀಡಲಾಗಿತ್ತು.

ಜೈಲಿನಿಂದಲೇ ಗ್ರಾ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ! ಜೈಲಿನಿಂದಲೇ ಗ್ರಾ. ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿ!

ಎರಡನೇ ಹಂತದಲ್ಲಿ 43,291 ಸ್ಥಾನಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, 3,697 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 39,378 ಸ್ಥಾನಗಳಿಗೆ ಮತದಾನ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,05,431 ಅಭ್ಯರ್ಥಿಗಳು ಕಣದಲ್ಲಿದ್ದರು. ಪಂಚಾಯಿತಿ ಚುನಾವಣೆ ಮತದಾನದ ಮಾಹಿತಿ, ಚಿತ್ರ, ವಿಡಿಯೋ ವಿವರಗಳು ಇಲ್ಲಿವೆ...

ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!ಗ್ರಾ. ಪಂ ಚುನಾವಣೆ; ವೈರಲ್ ಆದ ಗಂಗಮ್ಮ ನೀಡಿದ ಭರವಸೆಗಳು!

Recommended Video

      ಬೆಂಗಳೂರು: ಯುಕೆಯಿಂದ ಬಂದ 1122ಬೆಂಗಳೂರಿಗರಿಗೆ ಕೋವಿಡ್ ಪರೀಕ್ಷೆ, 15 ಮಂದಿ ವರದಿ ಪಾಸಿಟಿವ್ಕ | Oneindia Kannada
      Gram Panchayat Election

      Newest FirstOldest First
      7:00 PM, 27 Dec

      ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿ ಮತಗಟ್ಟೆಯಲ್ಲಿ ಪಕ್ಕದ ಶಿವಪುರ ಗ್ರಾಮದ 90 ವರ್ಷದ ಸರೋಜಮ್ಮ ಎಂಬ ವೃದ್ಧೆ ಮತ ಚಲಾಯಿಸಿ ಹಿಂದಿರುಗುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
      5:21 PM, 27 Dec

      ಚಿತ್ರಗಳು : ಕರ್ನಾಟಕ ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆ 2020

      ಚಿತ್ರಗಳು : ಕರ್ನಾಟಕ ಗ್ರಾಮ ಪಂಚಾಯತಿ ಎರಡನೇ ಹಂತದ ಚುನಾವಣೆ 2020
      5:01 PM, 27 Dec

      2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯ. ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.
      4:55 PM, 27 Dec

      ಅಭ್ಯರ್ಥಿ ಮೇಲೆ ಹಲ್ಲೆ ನಡೆಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕು ಎಂ. ಶೆಟ್ಟಹಳ್ಳಿಯಲ್ಲಿ ನಡೆದಿದೆ. ಸ್ಥಳಕ್ಕೆ ಮಂಡ್ಯ ಎಸ್ ಪಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮಣ್ಣ ಎಂಬ ಅಭ್ಯರ್ಥಿ ಮೇಲೆ ಅದೇ ಗ್ರಾಮದ ಎಸ್. ಆರ್. ಲೋಕೇಶ್, ನಂಜೇಗೌಡ ಎಂಬುವರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
      4:41 PM, 27 Dec

      ಚಾಮರಾಜನಗರದಲ್ಲಿ ಮಧ್ಯಾಹ್ನ 3 ಗಂಟೆಯ ತನಕ ಶೇ 67.49ರಷ್ಟು ಮತದಾನವಾಗಿದೆ. ಯಳಂದೂರು ಶೇ 68.58, ಕೊಳ್ಳೇಗಾಲ 68.92, ಹನೂರು 67.49ರಷ್ಟು ಮತದಾನವಾಗಿದೆ.
      4:32 PM, 27 Dec

      ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತೀರ್ಥಪುರದಲ್ಲಿ ಮತ ಚಲಾವಣೆ ಮಾಡಲು ಆಗಮಿಸುವಾಗ ನಿವೃತ್ತ ಶಿಕ್ಷಕ ಪುಟ್ಟಮರುಳಾರಾಧ್ಯ (62) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಹಲವು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಟುಂಬದವರ ಸಹಾಯದಿಂದ ಮತಗಟ್ಟೆಗೆ ಆಗಮಿಸುತ್ತಿದ್ದರು.
      3:46 PM, 27 Dec

      ಹಾವೇರಿ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯ ತನಕ ಒಟ್ಟು ಶೇ 45.09ರಷ್ಟು ಮತದಾನವಾಗಿದೆ. ಸವಣೂರು 43.34, ಶಿಗ್ಗಾಂವಿ 47.81, ಹಾನಗಲ್ 43.51 ಮತ್ತು ಬ್ಯಾಡಗಿ 47.29ರಷ್ಟು ಮತದಾನವಾಗಿದೆ.
      Advertisement
      3:19 PM, 27 Dec

      ಬೆಳಗಾವಿ ಜಿಲ್ಲೆಯ 7 ತಾಲೂಕುಗಳಲ್ಲಿ ಮಧ್ಯಾಹ್ನ 1 ಗಂಟೆಯ ತನಕ ಶೇ 45.13ರಷ್ಟು ಮತದಾನವಾಗಿದೆ.
      3:01 PM, 27 Dec

      ಮತದಾನ ಬಹಿಷ್ಕಾರ ಮಾಡಿದ್ದ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಸಿದ್ದಯ್ಯನಪುರ ಗ್ರಾಮದ ವಾರ್ಡ್‌ ನಂಬರ್ -1ರ ಗ್ರಾಮಸ್ಥರ ಮನವೊಲಿಕೆ ಮಾಡುವಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಯಶಸ್ವಿಯಾಗಿದ್ದಾರೆ. ಮತದಾನ ಮಾಡಲು ಹೆಚ್ಚುವರಿಯಾಗಿ ಮೂರು ಗಂಟೆಗಳ ಅವಕಾಶ ನೀಡಲಾಗಿದೆ.
      2:39 PM, 27 Dec

      ಮೈಸೂರು ತಾಲ್ಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ ಚಲಾಯಿಸಿದರು.
      2:26 PM, 27 Dec

      ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ವಡ್ಡು ಗ್ರಾಮದಲ್ಲಿ ಅಂತರರಾಜ್ಯದ ಯುವತಿಯೊಬ್ಬಳು ಮೊದಲ ಬಾರಿಗೆ ಮತದಾನ ಮಾಡಿದರು. ಛತ್ತೀಸ್​​ಗಢ ಮೂಲದ ರಿಯಾ ತಿವಾರಿ ವಡ್ಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಯುವತಿಯ ತಂದೆ ರಮೇಶ್​​ ತಿವಾರಿ ಜಿಂದಾಲ್ ಉದ್ಯೋಗಿಯಾಗಿದ್ದಾರೆ.
      1:56 PM, 27 Dec

      ಕಲಬುರಗಿ ಜಿಲ್ಲಾಧಿಕಾರಿಗಳ ಪರಿಶೀಲನೆ
      Advertisement
      1:41 PM, 27 Dec

      ವಿಜಯಪುರ ಜಿಲ್ಲೆಯಲ್ಲಿ ಮಧ್ಯಾಹ್ನ 1 ಗಂಟೆಯ ತನಕ ಶೇ 34.53ರಷ್ಟು ಮತದಾನವಾಗಿದೆ. ಇಂಡಿ ಶೇ 38.65, ಸಿಂಧಗಿ ಶೇ 33.85, ದೇವರ ಹಿಪ್ಪರಗಿ ಶೇ 36.12, ಚಡಚಣದಲ್ಲಿ ಶೇ 29.50ಯಷ್ಟು ಮತದಾನವಾಗಿದೆ.
      1:20 PM, 27 Dec

      ಎರಡು ಕೈಗಳಿಲ್ಲದ ಯುವತಿ ಲಕ್ಷ್ಮೀ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡಿದರು. ಬಳ್ಳಾರಿ ಜಿಲ್ಲೆಯ ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 47 ರಲ್ಲಿ ಮತದಾನ
      1:08 PM, 27 Dec

      ಚನ್ನಪಟ್ಟಣ ತಾಲೂಕಿನಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ 25 ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಬಿಜೆಪಿ ಪಾಲಾಗಲಿವೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ ಹೇಳಿದರು. ಭಾನುವಾರ ಅವರು ಹುಟ್ಟೂರು ಚಕ್ಕೆರೆ ಗ್ರಾಮದ ಮತಕೇಂದ್ರದಲ್ಲಿ ಮತದಾನ ಮಾಡಿದರು.
      12:52 PM, 27 Dec

      ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಥಣಿ ವಿಧಾನಸಭಾ ಕ್ಷೇತ್ರದ ನಾಗನೂರ್ ಪಿ.ಕೆ ಮತಗಟ್ಟೆಯಲ್ಲಿ ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮಾಡಿದರು.
      12:32 PM, 27 Dec

      ಅಥಣಿ ತಾಲೂಕಿನ ನಾಗನೂರು ಪಿ. ಕೆ. ಗ್ರಾಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮತದಾನ ಮಾಡಿದರು.
      12:02 PM, 27 Dec

      ಗ್ರಾಮ ಪಂಚಾಯಿತಿ ಚುನಾವಣೆ ಬ್ಯಾಲೆಟ್ ಪೇಪರ್‌ನಲ್ಲಿ ಚಿಹ್ನೆ ಬದಲಾದ ಹಿನ್ನಲೆಯಲ್ಲಿ ಮತದಾನವನ್ನು ಮುಂದೂಡಲಾಗಿದೆ. ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿ ಚಿಹ್ನೆ ತಪ್ಪಾಗಿ ಮುದ್ರಣವಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕದಂಪೂರ ವಾರ್ಡ್ ನಂಬರ್ 6ರಲ್ಲಿ ಚುನಾವಣೆ ಮುಂದೂಡಲಾಗಿದೆ.
      12:01 PM, 27 Dec

      ಏಷಿಯನ್ ಪೈಂಟ್ಸ್ ಕಾರ್ಖಾನೆಯಲ್ಲಿ ಉದ್ಯೋಗ ನೀಡಿದ ಭರವಸೆ ಈಡೇರದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಇಮ್ಮಾವು ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಗೆ ಈ ಗ್ರಾಮ ಬರುತ್ತದೆ.
      11:38 AM, 27 Dec

      ಗದಗ ಜಿಲ್ಲೆಯಲ್ಲಿ 9 ಗಂಟೆಯವರೆಗೆ ಮುಂಡರಗಿ ತಾಲೂಕಿನಲ್ಲಿ ಶೇ 8.22, ನರಗುಂದ ಶೇ 8.29, ರೋಣ ಶೇ 6.62 ಹಾಗೂ ಗಜೇಂದ್ರಗಡ ಶೇ 7.74 ಒಟ್ಟು ಶೇ 7.69 ರಷ್ಟು ಮತದಾನವಾಗಿದೆ.
      10:46 AM, 27 Dec

      ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಇಳಕಲ್, ಹುನಗುಂದ ತಾಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಮತದಾನ ನಡೆಯುತ್ತಿದೆ.
      10:25 AM, 27 Dec

      ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಬೆಳಗ್ಗೆ 9ರ ಹೊತ್ತಿಗೆ ಶೇ 5.41ರಷ್ಟು ಮತದಾನವಾಗಿದೆ. ಚನ್ನಗಿರಿ ಶೇ 4.05, ಹರಿಹರ ಶೇ 4.17 ಮತ್ತು ನ್ಯಾಮತಿಯಲ್ಲಿ ಶೇ 8.03 ಮತದಾನವಾಗಿದೆ.
      10:13 AM, 27 Dec

      ದಕ್ಷಿಣ ಕನ್ನಡದ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಝಹುರಾ ಮತ್ತು ಖೈರಾನ್ನಿಸಾ ತಮ್ಮ ಮದುವೆ ಸಂಭ್ರಮದ ನಡುವೆಯೂ ಗ್ರಾಮದ 103 ಸಂಖ್ಯೆಯ ಮತ ಕೇಂದ್ರಕ್ಕೆ ಬಂದು ಮತದಾನ ಮಾಡಿದರು.
      9:52 AM, 27 Dec

      ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬೊಕ್ಕಹಳ್ಳಿ ಗ್ರಾಮದಲ್ಲಿ ಭಿಕ್ಷುಕ ಅಂಕ ನಾಯಕ ಮತದಾನ ಮಾಡಿದರು. ಗ್ರಾಮಸ್ಥರು ಅಂಕ ನಾಯಕನನ್ನು ಗ್ರಾಮ ಪಂಚಾಯಿತಿ ಚುನಾವಣಾ ಕಣಕ್ಕಿಳಿಸಿದ್ದಾರೆ.
      9:43 AM, 27 Dec

      ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಬ್ಯಾಲೆಟ್ ಪೇಪರ್ ಅದಲು ಬದಲಾಗಿದೆ. ಗ್ರಾಮ ಪಂಚಾಯಿತಿ 3 ಮತ್ತು 4ನೇ ವಾರ್ಡ್‌ನಲ್ಲಿ ಮತದಾನ ಸ್ಥಗಿತವಾಗಿದೆ. ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಮತದಾನ ಬಹಿಷ್ಕಾರ ಮಾಡಿದ್ದಾರೆ.
      9:28 AM, 27 Dec

      ಮೈಸೂರು ತಾಲೂಕಿನಲ್ಲಿ ಚುರುಕುಗೊಂಡ ಮತದಾನ. ಸಿದ್ದಲಿಂಗಪುರ ಗ್ರಾಮದಲ್ಲಿ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾವಣೆ. ಆಟೋದಲ್ಲಿ ಬಂದು ಮತಚಲಾಯಿಸಿದ ವಯೋವೃದ್ಧೆ. ಮಾಸ್ಕ್ ಇಲ್ಲದೆ ಮತಗಟ್ಟೆ ಬಳಿ ಬಂದವರನ್ನು ವಾಪಾಸ್ ಕಳುಹಿಸಿದ ಪೊಲೀಸರು.
      9:13 AM, 27 Dec

      ಪಂಚಾಯಿತಿ ಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದೆ
      8:59 AM, 27 Dec

      ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಮತಗಟ್ಟೆಯಲ್ಲಿ ಆರತಿ ಬೆಳಗಲು ಮಹಿಳೆಯರು ಬಂದಿದ್ದರು. ಮತಗಟ್ಟೆ ಅಧಿಕಾರಿಗಳು ಅವಕಾಶ ನೀಡದ ಕಾರಣ ಹೊರಗಿನಿಂದಲೇ ಆರತಿ ಮಾಡಿದರು.
      8:42 AM, 27 Dec

      ತುಮಕೂರು ಜಿಲ್ಲೆಯ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಮಧುಗಿರಿ ಮತ್ತು ಶಿರಾ ತಾಲೂಕಿನಲ್ಲಿ ಮತದಾನ ಆರಂಭವಾಗಿದೆ. 1321 ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದೆ.
      8:14 AM, 27 Dec

      2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಕರ್ನಾಟಕ ಬಿಜೆಪಿ ಟ್ವೀಟ್
      READ MORE

      English summary
      Karnataka Gram Panchayat Election 2020 Phase 2 Voting Live Updates in Kannada: Check out the live updates, breaking news, videos and images here.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X