ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

ಮೊದಲ ಹಂತದ ಗ್ರಾ.ಪಂ ಚುನಾವಣಾ ಮತದಾನ ಮುಕ್ತಾಯ

|
Google Oneindia Kannada News

ಬೆಂಗಳೂರು, ಡಿಸೆಂಬರ್ 22: ಕರ್ನಾಟಕದಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಮಂಗಳವಾರ ನಡೆಯಲಿದೆ. ಕೋವಿಡ್ ಸಂದರ್ಭದಲ್ಲಿಯೇ ಚುನಾವಣೆ ಎದುರಾಗಿದ್ದು, ಪ್ರತಿ ಮತಗಟ್ಟೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಬದಲು ಬ್ಯಾಲೆಟ್ ಪೇಪರ್ ಬಳಕೆ ಮಾಡಲಾಗುತ್ತಿದೆ.

ಕರ್ನಾಟಕದ 117 ತಾಲೂಕುಗಳ 3019 ಗ್ರಾಮ ಪಂಚಾಯಿತಿಗಳ 43,238 ಸ್ಥಾನಗಳಿಗೆ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯ ತನಕ ಮತದಾನ ನಡೆಯಲಿದೆ. ಕೋವಿಡ್ ಸೋಂಕು ಹೊಂದಿರುವ ವ್ಯಕ್ತಿಗಳು ಸಹ ಮತ ಚಲಾವಣೆ ಮಾಡಲು ಅವಕಾಶ ನೀಡಲಾಗಿದೆ. ಕೊನೆಯ ಒಂದು ಗಂಟೆಗಳ ಕಾಲ ಅವರು ಮತದಾನ ಮಾಡಬಹುದು.

ಗ್ರಾಮ ಪಂಚಾಯಿತಿ ಚುನಾವಣೆ: ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ಮೇಲೆ ಆಯೋಗ ಕಣ್ಣುಗ್ರಾಮ ಪಂಚಾಯಿತಿ ಚುನಾವಣೆ: ಅವಿರೋಧ ಆಯ್ಕೆಯಾದ ಅಭ್ಯರ್ಥಿಗಳ ಮೇಲೆ ಆಯೋಗ ಕಣ್ಣು

Karnataka Gram Panchayat Election 2020 Phase 1 Voting Live Updates In Kannada

ಮೊದಲ ಹಂತದಲ್ಲಿ 48,048 ಸ್ಥಾನಗಳಿಗೆ ಮತದಾನ ನಡೆಯಬೇಕಿತ್ತು. ಆದರೆ, 4,377 ಸ್ಥಾನಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 43,238 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,17,383 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಂಚಾಯಿತಿ ಚುನಾವಣೆ ಕ್ಷಣ-ಕ್ಷಣದ ಮಾಹಿತಿ, ಚಿತ್ರ, ವಿವರಗಳು ಇಲ್ಲಿವೆ...

ಪಂಚಾಯಿತಿ ಚುನಾವಣೆ; ಆಯೋಗದಿಂದ ವಿಶೇಷ ಕೋವಿಡ್ ಕಿಟ್‌ ಪಂಚಾಯಿತಿ ಚುನಾವಣೆ; ಆಯೋಗದಿಂದ ವಿಶೇಷ ಕೋವಿಡ್ ಕಿಟ್‌

Newest FirstOldest First
5:34 PM, 22 Dec

ರಾಜ್ಯಾದ್ಯಂತ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮುಕ್ತಾಯ.
5:33 PM, 22 Dec

ಸಂಜೆಯಾಗುತ್ತಿದ್ದಂತೆ ಮತದಾನ ಚುರುಕುಗೊಂಡಿದ್ದು ಕುಮಟಾ ತಾಲ್ಲೂಕಿನ ಬರ್ಗಿಯ ಮತಗಟ್ಟೆಯೊಂದರಲ್ಲಿ ನೂರಕ್ಕೂ ಹೆಚ್ಚು ಜನರು ಸಾಲುಗಟ್ಟಿದ್ದಾರೆ.
5:33 PM, 22 Dec

ಮತದಾರರಿಗೆ ಅಭ್ಯರ್ಥಿಗಳ ಚಿಹ್ನೆಯುಳ್ಳ ಪೇಪರ್ ಕೊಟ್ಟು ಮತಗಟ್ಟೆಯೊಳಗೆ ಕಳುಹಿಸುತ್ತಿದ್ದಾರೆಂದು ಗಲಾಟೆ.ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮದಲ್ಲಿ ಘಟನೆ. ಮತಗಟ್ಟೆ ಕೇಂದ್ರದ ಹೊರಗೆ ಮಾತಿನ ಚಕಮಕಿ. ಸ್ಥಳಕ್ಕೆ ತಹಶೀಲ್ದಾರ್, ಪೊಲೀಸರ ಭೇಟಿ. ಬೇಡವೇ ಬೇಡ, ಮತದಾನ ಬೇಡವೆಂದು ಆಕ್ರೋಶ.
4:40 PM, 22 Dec

ಧಾರವಾಡ ಜಿಲ್ಲೆಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ.63.96 ರಷ್ಟು ಮತದಾನವಾಗಿದೆ
3:49 PM, 22 Dec

ಮದ್ದೂರು ಶಾಸಕ ಶ್ರೀ ಡಿ.ಸಿ ತಮ್ಮಣ್ಣರವರು ದೊಡ್ಡರಸಿನಕೆರೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಮತ ಚಲಾಯಿಸಿದರು.
3:34 PM, 22 Dec

ಕಡೂರು ತಾಲೂಕಿನ ಸ್ವಗ್ರಾಮ ಯಗಟಿಯಲ್ಲಿ ಮಾಜಿ ಶಾಸಕ, ಜೆಡಿಎಸ್ ನಾಯಕ ವೈಎಸ್‌ವಿ ದತ್ತಾ ಮತದಾನ ಮಾಡಿದರು.
3:34 PM, 22 Dec

ಗ್ರಾಮ ಪಂಚಾಯಿತಿ ಚುನಾವಣೆ ಮತದಾನದ ದಿನವೇ ಅಭ್ಯರ್ಥಿ ಆತ್ಮಹತ್ಯೆ. ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನೇಣಿಗೆ ಶರಣಾದ ಅಭ್ಯರ್ಥಿ. ದಾಮೋದರ್ ಯಲಿಗಾರ್ ಗರಗ ಗ್ರಾಮದ 2ನೇ ವಾರ್ಡ್‌ನಿಂದ ಚುನಾವಣೆಗೆ ಸ್ಪರ್ಧಿಸಿದ್ದರು.
Advertisement
3:33 PM, 22 Dec

ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ. ಕೆ. ಸುರೇಶ್ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದರು.
3:05 PM, 22 Dec

ರಾಮನಗರ ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾ.ಪಂ ಚುನಾವಣೆ ಕನಕಪುರ ಹಾಗೂ ರಾಮನಗರ ತಾಲ್ಲೂಕುಗಳಲ್ಲಿ ಇಂದು ಮತದಾನ 1 ಗಂಟೆ ವೇಳೆಗೆ ರಾಮನಗರ ತಾಲ್ಲೂಕಿನಲ್ಲಿ 56.07 % ಹಾಗೂ ಕನಕಪುರ ತಾಲ್ಲೂಕಿನಲ್ಲಿ 52.06%ರಷ್ಟು ಮತದಾನವಾಗಿದೆ. ಎರಡು ತಾಲ್ಲೂಕಿನಿಂದ ಒಟ್ಟು 54.07 % ಮತದಾನವಾಗಿದೆ.
3:01 PM, 22 Dec

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೈಲನಹಳ್ಳಿ ಮತ ಕೇಂದ್ರ ಸಂಖ್ಯೆ 167 ರಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ನಟ ವಿನೋದ್‌ರಾಜ್ ಮತ ಚಲಾಯಿಸಿದರು.
2:44 PM, 22 Dec

ಕೋಲಾರ ತಾಲೂಕಿನ ಸೀತಿ ಹೊಸೂರು ಗ್ರಾಮದಲ್ಲಿ 105 ವರ್ಷದ ನಾರಾಯಣಮ್ಮ ಮತದಾನ ಮಾಡಿದರು. ಕುಟುಂಬದವರು ಅಜ್ಜಿಯನ್ನು ಮತಗಟ್ಟೆಗೆ ಕರೆದುಕೊಂಡು ಬಂದಿದ್ದರು.
2:43 PM, 22 Dec

ದಾವಣಗೆರೆ ತಾಲೂಕಿನ ಹದಡಿ ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದ್ದು, ಮತದಾರರನ್ನು ಸೆಳೆಯಲು ಮತಗಟ್ಟೆ ಬಳಿಯೇ ನಿಂತಿದ್ದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವವರ ಮಧ್ಯೆ ಜಗಳವಾಗಿದೆ.
Advertisement
1:54 PM, 22 Dec

ಕನಕಪುರ ತಾಲೂಕಿನ ಹೊಸದುರ್ಗ ಗ್ರಾ.ಪಂ ವ್ಯಾಪ್ತಿಯ ಏರಂಗೆರೆಯಲ್ಲಿ ಚುನಾವಣೆ ಗಲಾಟೆ ನಡೆದಿದೆ. ಅಭ್ಯರ್ಥಿಯ ಪತಿಯೊಬ್ಬ ಮತದಾರರಿಗೆ ಕಣ್ಣು ಕಾಣಿಸುವುದಿಲ್ಲ, ಕೈ ಸರಿ ಇಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿ, ಮತದಾರರೊಂದಿಗೆ ತಾನೇ ಹೋಗಿ ಮತ ಚಲಾಯಿಸುತ್ತಿದ್ದ.‌ ಈ‌ ಕಾರಣಕ್ಕೆ ಏರಂಗೆರೆ ಗ್ರಾಮದಲ್ಲಿ ಬಣಗಳ ನಡುವೆ ಗಲಾಟೆ ನಡೆದಿದೆ. ಇದರಿಂದಾಗಿ ಮತದಾನ ಕೆಲ ಕಾಲ ಸ್ಥಗಿತಗೊಂಡಿತ್ತು. ಪೊಲೀಸರು ಮಧ್ಯಸ್ಥಿಕೆ ವಹಿಸಿದ ನಂತರ ಮತದಾನ ಪ್ರಕ್ರಿಯೆ ಪುನರಾರಂಭಗೊಂಡಿದೆ.
1:44 PM, 22 Dec

ಮಾಜಿ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಕುಟುಂಬ ಸದಸ್ಯರ ಜೊತೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸ್ವಗ್ರಾಮ ಅಡ್ಡಗಲ್‌ನಲ್ಲಿ ಮತದಾನ ಮಾಡಿದರು.
1:31 PM, 22 Dec

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಪತ್ನಿ ಉಷಾ ಶಿವಕುಮಾರ್ ಅವರ ಜೊತೆ ಕನಕಪುರದ ಸಾತನೂರಿನ ದೊಡ್ಡಾಲಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮತದಾನ ಮಾಡಿದರು.
1:14 PM, 22 Dec

ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಯ ಮತದಾನ. ಬೆಳಗ್ಗೆ 11 ಗಂಟೆ ವೇಳೆಗೆ ಶೇ. 29 ರಷ್ಟು ಮತದಾನವಾಗಿದೆ ಮೈಸೂರಿನಲ್ಲಿ ಆಗಿದೆ. ಸುಂಟಿಕೊಪ್ಪ, ಕೆದಕಲ್ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದಾರೆ.
12:53 PM, 22 Dec

ಮತದಾರರಿಗೆ ಹಂಚಲು ಸಿದ್ಧಪಡಿಸಿದ್ದ ಪಲಾವ್‌ ಅನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪದ ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 200 ಜನರಿಗೆ ಪಲಾವ್ ಮತ್ತು ಮೊಸರು ಬಜ್ಜಿಯನ್ನು ಪಂಚಾಯಿತಿ ಚುನಾವಣೆ ಅಭ್ಯರ್ಥಿಯೊಬ್ಬ ಮಾಡಿಸಿದ್ದ.
12:33 PM, 22 Dec

ಮತಪತ್ರದಲ್ಲಿನ ದೋಷದ ಕಾರಣ ತೊಲಮಾಮಡಿ ಮತಗಟ್ಟೆಯಲ್ಲಿ ಮತದಾನ ಸ್ಥಗಿತವಾಗಿದೆ. ಇನ್ನೊಂದು ದಿನ ಮತದಾನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದ್ದು, ರಿಟರ್ನಿಂಗ್ ಅಧಿಕಾರಿಗೆ ನೋಟಿಸ್ ನೀಡುವುದಾಗ ಹೇಳಿದ್ದಾರೆ.
12:23 PM, 22 Dec

ಮೈಸೂರು ಜಿಲ್ಲೆಯಲ್ಲಿ ಚುರುಕುಗೊಂಡ ಗ್ರಾಮ ಪಂಚಾಯತಿ ಚುನಾವಣೆಯ ಮತದಾನ. ಕೆ. ಆರ್. ನಗರ ತಾಲೂಕಿನಲ್ಲಿ ಮತದಾನಕ್ಕೆ ಜನರಿಂದ ಹೆಚ್ಚಿನ ಉತ್ಸಾಹ. ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿರುವ ಜನ.
12:08 PM, 22 Dec

ಬಳ್ಳಾರಿ ಜಿಲ್ಲೆಯ ಶಂಕರಬಂಡೆ ಗ್ರಾಮ ಪಂಚಾಯತಿಯ ತೊಲಮಾಮಡಿ ಗ್ರಾಮದಲ್ಲಿ ಮತದಾನ ಸ್ಥಗಿತವಾಗಿದೆ. ಚಿಹ್ನೆ ಮುದ್ರಣ ದೋಷದಿಂದಾಗಿ ಮತದಾನ ನಿಲ್ಲಿಸಲಾಗಿದ್ದು, ತೊಲಮಾಮಡಿ ಮತಗಟ್ಟೆಗೆ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಭೇಟಿ ನೀಡಿದ್ದಾರೆ.
11:55 AM, 22 Dec

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ‌ಕಂಬೀಪುರ ಗ್ರಾಮಸ್ಥರು ಮತದಾವನ್ನು ಬಹಿಷ್ಕಾರ ಮಾಡಿದ್ದಾರೆ.
11:55 AM, 22 Dec

ಗ್ರಾಮ ಪಂಚಾಯಿತಿ ಚುನಾವಣೆ, ಜೆಡಿಎಸ್ ಪಕ್ಷದ ಟ್ವೀಟ್
11:37 AM, 22 Dec

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ವ್ಯಕ್ತಿಯೊಬ್ಬರ ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕಿಳಿದಿದ್ದಾನೆ. 'ಆಟೋ' ವನ್ನು ಅಭ್ಯರ್ಥಿಗೆ ಚುನಾವಣಾ ಚಿನ್ಹೆಯಾಗಿ ನೀಡಲಾಗಿದೆ. ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ 1ನೇ ವಾರ್ಡ್‌ನಿಂದ ಸ್ಪರ್ಧೆ ಪರುಶರಾಮ್ ಭರಮಾ ಪಾಕರೆ (37) ಎಂಬ ಆರೋಪಿ ಚುನಾವಣಾ ಕಣಕ್ಕಿಳಿದಿದ್ದಾರೆ.
11:11 AM, 22 Dec

ಗ್ರಾಮ ಪಂಚಾಯಿತಿ ಚುನಾವಣೆ ಕುರಿತು ಜಗದೀಶ್ ಶೆಟ್ಟರ್ ಟ್ವೀಟ್
11:05 AM, 22 Dec

ಮಾಜಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ತುಮಕೂರು ತಾಲೂಕು ಹೆಗ್ಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ಧಾರ್ಥನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದರು.
10:57 AM, 22 Dec

ಬೆಳಗ್ಗೆ 9 ಗಂಟೆಯ ಮಾಹಿತಿಯಂತೆ ಶಿವಮೊಗ್ಗ ಶೇ 7.85, ಭದ್ರಾವತಿ ಶೇ 8.48, ತೀರ್ಥಹಳ್ಳಿ ಶೇ 12.19 ಸೇರಿ ಶಿವಮೊಗ್ಗ ಜಿಲ್ಲೆಯಲ್ಲಿ ಶೇ 9.33ರಷ್ಟು ಮತದಾನ ವಾಗಿತ್ತು.
10:55 AM, 22 Dec

ಆಗುಂಬೆಯಲ್ಲಿ ಮತದಾನ ಮಾಡಿದ 105 ವರ್ಷದ ಅಜ್ಜಿ
10:41 AM, 22 Dec

ಡಾ. ಶಿವಮೂರ್ತಿ ಮುರುಘಾ ಶರಣರು ಗ್ರಾಮ ಪಂಚಾಯಿತಿ ಚುನಾವಣೆಗೆ ಚಿತ್ರದುರ್ಗ ತಾಲೂಕಿನ ಮಠದ‌ ಕುರುಬರಹಟ್ಟಿ ಗ್ರಾಮದ ಮತಗಟ್ಟೆ ಸಂಖ್ಯೆ 180ರಲ್ಲಿ ಮತದಾನ ಮಾಡಿದರು.
10:30 AM, 22 Dec

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯ ಉಳವಿ ಮಂಜಮ್ಮ (101) ಮಂಡಗದ್ದೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಿಂಗಪುರ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.
10:09 AM, 22 Dec

ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಕುಂಬೂರು ಗ್ರಾಮದಲ್ಲಿ ಪತ್ನಿಯೊಂದಿಗೆ ಮತ ಚಲಾವಣೆ ಮಾಡಿದರು.
READ MORE

English summary
Karnataka Gram Panchayat Election 2020 Phase 1 Voting Live Updates in Kannada: Check out the live updates, breaking news, videos and images here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X