ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾ.ಪಂ. ಚುನಾವಣೆ: ಬಿಜೆಪಿ ಪ್ರಾಬಲ್ಯದ ಈ 3 ಜಿಲ್ಲೆಗಳಲ್ಲಿ ಜೆಡಿಎಸ್ ಊಹಿಸಲೂ ಅಸಾಧ್ಯವಾದ ಸಾಧನೆ

|
Google Oneindia Kannada News

ಕೋವಿಡ್ ಕಾರಣದಿಂದ ಮುಂದೂಡಲ್ಪಟ್ಟಿದ್ದ ಹಳ್ಳಿ ಫೈಟ್ ಎಂದೇ ಕರೆಯಲ್ಪಡುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ರಾಜಕೀಯದ ಮೊದಲ ಮೆಟ್ಟಲೆಂದೇ ಕರೆಯಲ್ಪಡುವ ಈ ಚುನಾವಣೆಯಲ್ಲಿ ಪಕ್ಷಗಳ ಚಿಹ್ನೆಯೊಂದು ಇರುವುದಿಲ್ಲ ಅಷ್ಟೇ..

ಹಾಗಾಗಿ, ತೆರೆಮೆರೆಯಲ್ಲಿ ಈ ಚುನಾವಣೆಯನ್ನು ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತು ಜೆಡಿಎಸ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು. ಪಕ್ಷದ ಬೇರನ್ನು ಬಲಪಡಿಸಲು ಗ್ರಾಮ ಪಂಚಾಯಿತಿ ಚುನಾವಣೆ ಮುಖ್ಯವಾಗಿರುವುದರಿಂದ ಮೂರೂ ಪಕ್ಷಗಳಿಗೆ ಈ ಚುನಾವಣೆ ಮುಖ್ಯವಾಗಿದ್ದವು.

ರಾಮನಗರದಲ್ಲಿ ಬಿಜೆಪಿ ಶೂನ್ಯದಿಂದ ಮೂರಂಕಿಗೆ: ಆದರೂ ಜಿಲ್ಲೆಯಲ್ಲಿ ಪಕ್ಷದ ಗುಂಪುಗಾರಿಕೆ, ಆತ್ಮಾವಲೋಕನ ಯಾವಾಗ?ರಾಮನಗರದಲ್ಲಿ ಬಿಜೆಪಿ ಶೂನ್ಯದಿಂದ ಮೂರಂಕಿಗೆ: ಆದರೂ ಜಿಲ್ಲೆಯಲ್ಲಿ ಪಕ್ಷದ ಗುಂಪುಗಾರಿಕೆ, ಆತ್ಮಾವಲೋಕನ ಯಾವಾಗ?

ರಾಜ್ಯದ ಒಟ್ಟಾರೆ ಈ ಚುನಾವಣೆಯ ಫಲಿತಾಂಶವನ್ನು ಅವಲೋಕಿಸುವುದಾದರೆ ಬಿಜೆಪಿ ಮುನ್ನಡೆಯನ್ನು ಸಾಧಿಸಿದೆ. ಈ ಚುನಾವಣಾ ಫಲಿತಾಂಶ ಮೂರೂ ಪಕ್ಷಗಳಿಗೆ ಮತ್ತು ಆಯಾಯ ಪಕ್ಷಗಳ ಮುಖಂಡರಿಗೆ ವಿವಿಧ ಸಂದೇಶವನ್ನು ರವಾನಿಸಿರುವುದಂತೂ ಹೌದು.

ಈ ಚುನಾವಣೆಯ ಫಲಿತಾಂಶವನ್ನು ಗಮನಿಸುವುದಾದರೆ, ಸದ್ಯದ ರಾಜಕೀಯದಲ್ಲಿ ಸತತವಾಗಿ ಹಿನ್ನಡೆಯನ್ನು ಅನುಭವಿಸುತ್ತಿರುವ ಜೆಡಿಎಸ್, ಆರು ಜಿಲ್ಲೆಗಳಲ್ಲಿ, ಅದರಲ್ಲೂ ಪ್ರಮುಖವಾಗಿ ಮೂರು ಜಿಲ್ಲೆಗಳಲ್ಲಿ ತನ್ನ ಸ್ಥಿತಿಯನ್ನು ವೃದ್ದಿಸಿಕೊಂಡಿರುವುದು.

ದೆಹಲಿಯಿಂದ ಬಂದ ಖಚಿತ ಮಾಹಿತಿ ಎಂದು ಸಿದ್ದರಾಮಯ್ಯ ಪದೇಪದೆ ಬಿಎಸ್ವೈ ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ?ದೆಹಲಿಯಿಂದ ಬಂದ ಖಚಿತ ಮಾಹಿತಿ ಎಂದು ಸಿದ್ದರಾಮಯ್ಯ ಪದೇಪದೆ ಬಿಎಸ್ವೈ ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ?

ಜೆಡಿಎಸ್ ವರಿಷ್ಠ ದೇವೇಗೌಡ್ರು ತುಮಕೂರಿನಲ್ಲಿ ಪರಾಭವಗೊಂಡಿದ್ದರು

ಜೆಡಿಎಸ್ ವರಿಷ್ಠ ದೇವೇಗೌಡ್ರು ತುಮಕೂರಿನಲ್ಲಿ ಪರಾಭವಗೊಂಡಿದ್ದರು

ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರು ತುಮಕೂರಿನಲ್ಲಿ ಪರಾಭವಗೊಂಡಿದ್ದರು. ಇದಾದ ನಂತರ ಇತ್ತೀಚೆಗೆ ನಡೆದ ಶಿರಾ ಉಪಚುನಾವಣೆಯಲ್ಲೂ ಜೆಡಿಎಸ್, ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿತ್ತು. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ (ಕಳೆದ ಚುನಾವಣೆಗೆ ಹೋಲಿಸಿದರೆ) ಉತ್ತಮ ಸಾಧನೆಯನ್ನು ಮಾಡಿದೆ. ಕಳೆದ ಬಾರಿ (2015) 1180 ಸದಸ್ಯರನ್ನು ಹೊಂದಿದ್ದ ಜೆಡಿಎಸ್ಸಿನ (ಬೆಂಬಲಿತ) 1,560 ಸದಸ್ಯರು ದಡ ಸೇರಿದ್ದಾರೆ.

ಯಾದಗಿರಿ ಜಿಲ್ಲೆ

ಯಾದಗಿರಿ ಜಿಲ್ಲೆ

ಇನ್ನು ಯಾದಗಿರಿ ಜಿಲ್ಲೆಯಲ್ಲಿ ಕಳೆದ ಬಾರಿ ಕೇವಲ ಎಂಬತ್ತು ಸ್ಥಾನವನ್ನು ಜೆಡಿಎಸ್ ಗೆದ್ದಿತ್ತು. ಒಟ್ಟಾರೆ 1,840 ಸದಸ್ಯರಲ್ಲಿ, 350 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಈ ಬಾರಿ ಜಯ ಸಾಧಿಸಿದ್ದಾರೆ. ಇದೇ ರೀತಿಯಲ್ಲಿ ಬಾಗಲಕೋಟೆಯಲ್ಲೂ ಜೆಡಿಎಸ್ ಕಳೆದ ಬಾರಿಗಿಂತ ಈ ಬಾರಿ ನಾಲ್ಕು ಕ್ಷೇತ್ರವನ್ನು ( 38 ರಿಂದ 42) ಹೆಚ್ಚು ಗೆದ್ದುಕೊಂಡಿದೆ.

ವಿಜಯಪುರ ಜಿಲ್ಲಾ ವ್ಯಾಪ್ತಿ

ವಿಜಯಪುರ ಜಿಲ್ಲಾ ವ್ಯಾಪ್ತಿ

ಬಿಜೆಪಿಯ ಬಲಾಢ್ಯ ಕೋಟೆಯಾಗಿರುವ ಕೊಡಗು ಜಿಲ್ಲೆಯಲ್ಲೂ ತಕ್ಕಮಟ್ಟಿಗೆ ಜೆಡಿಎಸ್ ತನ್ನ ಶಕ್ತಿಯನ್ನು ವೃದ್ದಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಅರವತ್ತು ಬೆಂಬಲಿತರು ಇದ್ದರೆ, ಈ ಬಾರಿ ತೆನೆಹೊತ್ತ ಮಹಿಳೆಯ 79 ಸದಸ್ಯರು ಆಯ್ಕೆಯಾಗಿದ್ದಾರೆ. ಇನ್ನು, ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲೂ ಜೆಡಿಎಸ್ ಉತ್ತಮ ಪ್ರದರ್ಶನ ತೋರಿದೆ. ಕಳೆದ ಬಾರಿ 117 ಬೆಂಬಲಿತರು ಆಯ್ಕೆಯಾಗಿದ್ದರೆ, ಈ ಬಾರಿ 200 ಬೆಂಬಲಿತರು ಚುನಾವಣೆ ಗೆದಿದ್ದಾರೆ.

ಚಾಮರಾಜನಗರ ಜಿಲ್ಲಾ ಪಂಚಾಯಿತಿ ಚುನಾವಣೆ

ಚಾಮರಾಜನಗರ ಜಿಲ್ಲಾ ಪಂಚಾಯಿತಿ ಚುನಾವಣೆ

ಚಾಮರಾಜನಗರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಸ್ಟಡೀ ಪ್ರೊಗ್ರೆಸ್ ತೋರಿದೆ. ಕಳೆದ ಬಾರಿ 144 ಬೆಂಬಲಿತರು ಇದ್ದದ್ದು ಈ ಬಾರಿ ಅದು 170ಕ್ಕೆ ಏರಿದೆ. ಒಟ್ಟಾರೆಯಾಗಿ ಯಾದಗಿರಿ, ವಿಜಯಪುರ ಮತ್ತು ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ಜೆಡಿಎಸ್ ಉತ್ತಮ ಸಾಧನೆಯನ್ನು ಮಾಡಿದೆ ಎನ್ನುತ್ತದೆ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ.

Recommended Video

ಮೂರನೇ ಪಂದ್ಯಕ್ಕೂ ಮುನ್ನ ಭಾರತ ತಂಡ ಅಭ್ಯಾಸದಲ್ಲಿ ತೊಡಗಿದ್ದಾರೆ | Oneindia Kannada

English summary
Karnataka Gram Panchayat Election 2020: JDS Reasonable Good Performance In Three Districts,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X