ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಖಾಸಗಿ ಆಸ್ಪತ್ರೆ ಕೋವಿಡ್ -19 ಚಿಕಿತ್ಸೆ ನೀಡಲು ದರಪಟ್ಟಿ

|
Google Oneindia Kannada News

ಬೆಂಗಳೂರು, ಜೂನ್ 19 : ಕರ್ನಾಟಕ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ -19 ಚಿಕಿತ್ಸೆ ನೀಡಲು ದರವನ್ನು ನಿಗದಿ ಮಾಡಲಿದೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ಹೆಸರಿನಲ್ಲಿ ಸುಲಿಗೆ ಮಾಡುತ್ತಿವೆ ಎಂಬ ಆರೋಪಗಳಿವೆ.

Recommended Video

ಪಾಕಿಸ್ತಾನದ ಆರಂಭಿಕ ಆಟಗಾರನಿಗೆ ರೋಹಿತ್ ಶರ್ಮ ರೋಲ್ ಮಾಡೆಲ್ | Rohit Sharma | Oneindia Kannada

ಕರ್ನಾಟಕ ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಎಷ್ಟು ದರವಿರಬೇಕು? ಎಂಬ ಬಗ್ಗೆ ವರದಿ ನೀಡಲು ಟಾಸ್ಕ್ ಫೋರ್ಸ್ ರಚನೆ ಮಾಡಿತ್ತು.

ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಯಡಿಯೂರಪ್ಪ ಮನವಿಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಿಗೆ ಯಡಿಯೂರಪ್ಪ ಮನವಿ

ಟಾಸ್ಕ್ ಪೋರ್ಸ್ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಒಂದು ದಿನಕ್ಕೆ ಎಷ್ಟು ದರವಿರಬೇಕು? ಎಂದು ಶಿಫಾರಸು ಮಾಡಿದೆ.

ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ: ಸುಧಾಕರ್ ಸುಲಿಗೆ ಮಾಡುವ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ: ಸುಧಾಕರ್

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಶಿಫಾರಸಿನ ಬಗ್ಗೆ ಚರ್ಚೆ ನಡೆಯಲಿದ್ದು, ಅನುಮೋದನೆ ದೊರೆಯಲಿದೆ. ಜೂನ್ 25ರಂದು ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ.

 ಖಾಸಗಿ ಆಸ್ಪತ್ರೆಯಲ್ಲೂ ಕೊರೊನಾ ಸೋಂಕು ಚಿಕಿತ್ಸೆಗೆ ಮಾರ್ಗಸೂಚಿ ಸಿದ್ಧ; ಸುಧಾಕರ್ ಖಾಸಗಿ ಆಸ್ಪತ್ರೆಯಲ್ಲೂ ಕೊರೊನಾ ಸೋಂಕು ಚಿಕಿತ್ಸೆಗೆ ಮಾರ್ಗಸೂಚಿ ಸಿದ್ಧ; ಸುಧಾಕರ್

ಚಿಕಿತ್ಸೆಯ ದರಪಟ್ಟಿ ಹೀಗಿದೆ

ಚಿಕಿತ್ಸೆಯ ದರಪಟ್ಟಿ ಹೀಗಿದೆ

ಸಾಮಾನ್ಯ ವಾರ್ಡ್, ಆಕ್ಸಿಜನ್ ಸೌಲಭ್ಯ, ಐಸಿಯು, ಐಸಿಯು ಜೊತೆ ವೆಂಟಿಲೇಟರ್‌ ಹೀಗೆ ವಿವಿಧ ವಿಭಾಗಕ್ಕೆ ಬೇರೆ-ಬೇರೆ ದರ ನಿಗದಿಯಾಗಿದೆ. ಆಯುಷ್ಮಾನ್ ಫಲಾನುಭವಿಗಳಿಗೆ, ನಗದು/ವಿಮಾ ಪಾಲಿಸಿದಾರರಿಗೆ ಎಂದು ಎರಡು ದರಗಳನ್ನು ಪಟ್ಟಿ ಮಾಡಲಾಗಿದೆ.

ಎಷ್ಟು ದರವನ್ನು ನೀಡಬೇಕು?

ಎಷ್ಟು ದರವನ್ನು ನೀಡಬೇಕು?

ಕೋವಿಡ್ - 19 ಸೋಂಕಿತರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಫಲಾನುಭವಿ ಆಗಿದ್ದರೆ ಸಾಮಾನ್ಯ ವಾರ್ಡ್‌ಗೆ ದಿನಕ್ಕೆ 5,200 ರೂ. ಪಾವತಿ ಮಾಡಬೇಕು. ಆಕ್ಸಿಜನ್ ಸೌಲಭ್ಯವಿರುವುದಕ್ಕೆ 7000, ಐಸಿಯುನಲ್ಲಿನ ಚಿಕಿತ್ಸೆಗೆ 8,500 ಮತ್ತು ಐಸಿಯು ಜೊತೆ ವೆಂಟಿಲೇಟರ್ ಬೇಕಿದ್ದರೆ 10 ಸಾವಿರ ರೂ. ಪಾವತಿ ಮಾಡಬೇಕು.

ಚಿಕಿತ್ಸೆ ದರಪಟ್ಟಿ ಹೀಗಿದೆ

ಚಿಕಿತ್ಸೆ ದರಪಟ್ಟಿ ಹೀಗಿದೆ

ನಗದು ಪಾವತಿ/ವಿಮಾ ಪಾಲಿಸಿದಾರರು ದಿನವೊಂದಕ್ಕೆ ಸಾಮಾನ್ಯ ವಾರ್ಡ್‌ಗೆ 10 ಸಾವಿರ ರೂ., ಆಕ್ಸಿಜನ್ ವಾರ್ಡ್‌ಗೆ 12,000, ಐಸಿಯುಗೆ 15,000 ಮತ್ತು ಐಸಿಯು ಜತೆ ವೆಂಟಿಲೇಟರ್ ವಾರ್ಡ್‌ಗೆ 25,000 ರೂ. ಪಾವತಿ ಮಾಡಬೇಕು.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವೈರಲ್

ದೆಹಲಿ ಸೇರಿದಂತೆ ಬೇರೆ-ಬೇರೆ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳು ಕೊರೊನಾ ವೈರಸ್ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲು ದುಬಾರಿ ದರವನ್ನು ವಸೂಲಿ ಮಾಡುತ್ತಿವೆ. ಈ ಕುರಿತ ದರಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

English summary
Karnataka government will fix the price for the treatment for coronavirus in all private hospitals of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X