ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ದರದಲ್ಲಿ ಬದಲಾವಣೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 9: ಕರ್ನಾಟಕ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ನಡೆಸಲಾಗುವ ಕೋವಿಡ್ ಪರೀಕ್ಷೆಗಳ ದರವನ್ನು ಪರಿಷ್ಕರಿಸಿದೆ. ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸುವ ಆರ್‌ಟಿ ಪಿಸಿಆರ್, ಟ್ರೂ ನ್ಯಾಟ್, ಸಿಬಿ ನ್ಯಾಟ್, ರಾಪಿಡ್ ಆಂಟಿಜೆನ್ ಮತ್ತು ರಾಪಿಡ್ ಆಂಟಿಬಾಡಿ ಪರೀಕ್ಷೆಗಳ ದರದಲ್ಲಿ ಪ್ರಮುಖವಾಗಿ ಬದಲಾವಣೆಗಳನ್ನು ಮಾಡಿ ಬುಧವಾರ ಆದೇಶ ಹೊರಡಿಸಲಾಗಿದೆ.

ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಗಳು ಮತ್ತು ಇತರೆ ಅಗತ್ಯ ವಸ್ತುಗಳ ದರಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಮರುಪರಿಶೀಲಿಸಿ ದರಗಳನ್ನು ಮರುನಿಗದಿ ಮಾಡುತ್ತಿದೆ. ರಾಸಾಯನಿಕ ಮತ್ತು ಇತರೆ ಅಗತ್ಯ ವಸ್ತುಗಳ ದರಗಳು ಕಡಿಮೆಯಾಗಿರುವುದರಿಂದ ಖಾಸಗಿ ಪ್ರಯೋಗಾಲಯಗಳಲ್ಲಿ ದರಗಳನ್ನು ಪರಿಷ್ಕರಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

 Karnataka Govt Revises Covid-19 Testing Costs; Details

ಮೊದಲ ಹಂತದಲ್ಲಿ ಯಾವ ವಯಸ್ಸಿನವರಿಗೆ ಕೊರೊನಾ ಲಸಿಕೆ ಸಿಗಬಹುದು?ಮೊದಲ ಹಂತದಲ್ಲಿ ಯಾವ ವಯಸ್ಸಿನವರಿಗೆ ಕೊರೊನಾ ಲಸಿಕೆ ಸಿಗಬಹುದು?

* ಆರ್‌ಟಿ-ಪಿಸಿಆರ್ ಪರೀಕ್ಷೆಗಳಲ್ಲಿ ಸರ್ಕಾರಿ ಆಸ್ಪತ್ರೆಗಳಿಂದ ಖಾಸಗಿ ಪ್ರಯೋಗಾಲಯಗಳಿಗೆ ಮಾದರಿಗಳನ್ನು ಕಳುಹಿಸಿದಾಗ - 500 ರೂ.

* ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಿದಾಗ- 800 ರೂ.

* ಟ್ರೂ ಸ್ಯಾಟ್ ಪರೀಕ್ಷೆಗಳಲ್ಲಿ ಖಾಸಗಿ ಆಸ್ಪತ್ರೆಗಳಿಂದ ಸ್ವೀಕೃತವಾದ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ- 1,250 ರೂ.

ಕೊರೊನಾ ಸೋಂಕಿತರ ಮನೆ ಮುಂದೆ ಪೋಸ್ಟರ್ ಅಂಟಿಸಬೇಡಿ: ಸುಪ್ರೀಂಕೊರೊನಾ ಸೋಂಕಿತರ ಮನೆ ಮುಂದೆ ಪೋಸ್ಟರ್ ಅಂಟಿಸಬೇಡಿ: ಸುಪ್ರೀಂ

* ಸಿ.ಬಿ ನ್ಯಾಟ್ ಪರೀಕ್ಷೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಸಂಗ್ರಹಿಸಿದ ಮಾದರಿಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದಾಗ- 2,400 ರೂ.

* ರಾಪಿಡ್ ಆಂಟಿಜೆನ್ ಪರೀಕ್ಷೆಗಳಲ್ಲಿ ಖಾಸಗಿ ಪ್ರಯೋಗಾಲಯ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ- 400 ರೂ.

* ರಾಪಿಡ್ ಆಂಡಿಬಾಡಿ ಪರೀಕ್ಷೆಗಳಲ್ಲಿ ಖಾಸಗಿ ಪ್ರಯೋಗಶಾಲೆ ಮತ್ತು ಖಾಸಗಿ ಆಸ್ಪ್ರತ್ರೆಗಳಲ್ಲಿ- 500 ರೂ.

* ಈ ಎಲ್ಲ ಪರೀಕ್ಷೆಗಳಿಗೆ ಮಾದರಿಯನ್ನು ಮನೆಯಿಂದ ಸಂಗ್ರಹಿಸಬೇಕಾದಾಗ ಒಂದು ಮನೆಯ ಸಂಗ್ರಹ ದರ 400 ರೂ. ಅನ್ನು ಮೀರಬಾರದು.

English summary
Karnataka Health Department has Revised Covid-19 Testing Costs in private labs; Here is the Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X