ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲಾಟ್ ಖರೀದಿದಾರರಿಗೆ ಶುಭ ಸುದ್ದಿ ಕೊಡುವ ಗೆಜೆಟ್ ಅಧಿಸೂಚನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 06: ಬೆಂಗಳೂರಿನಲ್ಲಿ ಫ್ಲಾಟ್ ಖರೀದಿದಾರರಿಗೆ ಬಸವರಾಜ ಬೊಮ್ಮಾಯಿ ಸರ್ಕಾರ ಶುಭ ಸುದ್ದಿ ಕೊಟ್ಟಿದೆ. ಮುದ್ರಾಂಕ ಶುಲ್ಕ ಕಾಯ್ದೆ 1957ಕ್ಕೆ ತಿದ್ದುಪಡಿ ತರಲಾಗಿದ್ದು, ವಿಧಾನಸಭೆ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾಗಿ, ಸಮ್ಮತಿ ಸಿಕ್ಕಿತ್ತು. ಈಗ ಈ ಕುರಿತಂತೆ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.

''ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ಮುದ್ರಾಂಕ ಶುಲ್ಕ ತಗ್ಗಿಸಲಾಗಿದೆ, 2021-22ನೇ ಸಾಲಿನ ಬಜೆಟ್‌ ವೇಳೆ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ವೇಳೆಯೂ ಮುದ್ರಾಂಕ ಶುಲ್ಕವನ್ನು 5ರಿಂದ ಶೇ.3ಕ್ಕೆ ಇಳಿಕೆ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಅದರಂತೆ, ಮೊದಲ ಬಾರಿ ನೋಂದಣಿಯ ಮುದ್ರಾಂಕ ಶುಲ್ಕ ಕಡಿತಗೊಳಿಸಲಾಗಿದೆ,'' ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ.

ಬಿಲ್ಡರ್ ಅಪಾರ್ಟ್ಮೆಂಟ್ ಹರಾಜಿಗಿಟ್ಟರೆ ಕೊಳ್ಳುವವರೇ ಇಲ್ಲ!ಬಿಲ್ಡರ್ ಅಪಾರ್ಟ್ಮೆಂಟ್ ಹರಾಜಿಗಿಟ್ಟರೆ ಕೊಳ್ಳುವವರೇ ಇಲ್ಲ!

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ನಗರದ ಹೊರ ವಲಯದಲ್ಲಿ ವಸತಿ ಸಮುಚ್ಚಯ, ಫ್ಲಾಟ್, ಅಪಾರ್ಟ್ಮೆಂಟ್ ಹೆಚ್ಚಾಗುತ್ತಿದ್ದು, ಕೊರೊನಾ ವೈರಸ್ ನಿಂದ ಉಂಟಾಗಿರುವ ಆರ್ಥಿಕ ಮುಗ್ಗಟ್ಟಿನ ನಡುವೆಯೂ ಕೈಗೆಟುಕುವ ದರದಲ್ಲಿ ಮನೆ ಖರೀದಿ ಮಾಡಲು ಗ್ರಾಹಕರು ಮುಂದಾಗುತ್ತಿದ್ದಾರೆ. ಕೇಂದ್ರ/ರಾಜ್ಯ ಆವಾಸ್ ಯೋಜನೆಯಡಿ ಸಾವಿರಾರು ಫ್ಲಾಟ್ ಗಳನ್ನು ಕೆಳ ಮಧ್ಯಮ, ಆರ್ಥಿಕವಾಗಿ ಹಿಂದುಳಿದವರಿಗೆ ಹಂಚಲಾಗುತ್ತಿದೆ. ಈಗ ರಾಜ್ಯ ಸರ್ಕಾರದ ಸದರಿ ಅಧಿಸೂಚನೆಯಂತೆ ಬಿಲ್ಡರ್ ನಿಂದ ನೇರವಾಗಿ ಖರೀದಿ ಮಾಡುವ ಮೊದಲ ನೋಂದಣಿ ವೇಳೆಯಲ್ಲಿ ಮುದ್ರಾಂಕ ಶುಲ್ಕ ತಗ್ಗಲಿದೆ.

 ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ

ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು 20 ಲಕ್ಷ ರು.ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲನೇ ನೋಂದಣಿ ವೇಳೆ ಶೇ.5ರಷ್ಟಿರುವ ಮುದ್ರಾಂಕ ಶುಲ್ಕವನ್ನು ಶೇ.2ಕ್ಕೆ ಹಾಗೂ 20ರಿಂದ 35 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಇಳಿಕೆ ಮಾಡಿತ್ತು. ಕಳೆದ ಮಾರ್ಚಲ್ಲಿ ಮಂಡಿಸಿದ 2021-22ನೇ ಸಾಲಿನ ಬಜೆಟ್‌ ವೇಳೆ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ವೇಳೆಯೂ ಮುದ್ರಾಂಕ ಶುಲ್ಕವನ್ನು 5ರಿಂದ ಶೇ.3ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿತ್ತು. ಈಗ ಅದನ್ನು ಅನುಷ್ಠಾನಕ್ಕೆ ತಂದಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.

 ಮಾರಾಟವಾಗದೆ ಉಳಿದ ಫ್ಲಾಟ್‌ಗಳು

ಮಾರಾಟವಾಗದೆ ಉಳಿದ ಫ್ಲಾಟ್‌ಗಳು

ಕೊರೊನಾ ಸಾಂಕ್ರಾಮಿಕದ ದೆಸೆಯಿಂದ ಬೆಂಗಳೂರಿನಲ್ಲಿ ಲಕ್ಷಾಂತರ ಫ್ಲಾಟ್‌ಗಳು ಮಾರಾಟವಾಗದೆ ಉಳಿದಿವೆ. ಮುದ್ರಾಂಕ ಶುಲ್ಕ ತಗ್ಗಿಸಿರುವುದರಿಂದ, ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನತೆ ಕಡಿಮೆ ಬಜೆಟ್‌ನಲ್ಲಿ ಫ್ಲಾಟ್ ಖರೀದಿಸಲು ಮುಂದಾಗುವ ಅವಕಾಶ ಹೆಚ್ಚಾಗುವ ಸಾಧ್ಯತೆಯಿದೆ.

ಕೋವಿಡ್-19 ಪರಿಣಾಮ: ಬೆಂಗಳೂರಿನ ವಸತಿ ಬೆಲೆ 3% ಇಳಿಕೆಕೋವಿಡ್-19 ಪರಿಣಾಮ: ಬೆಂಗಳೂರಿನ ವಸತಿ ಬೆಲೆ 3% ಇಳಿಕೆ

ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ 20 ಲಕ್ಷ ರು. ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲನೇ ನೋಂದಣಿ ವೇಳೆ ಶೇ.5ರಷ್ಟಿರುವ ಮುದ್ರಾಂಕ ಶುಲ್ಕವನ್ನು ಶೇ.2ಕ್ಕೆ ಹಾಗೂ 20 ರಿಂದ 35 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಇಳಿಕೆ ಮಾಡಲು ನಿರ್ಧರಿಸಲಾಗಿತ್ತು.

ಕ್ರೆಡಾಯ್ ಪ್ರತಿಕ್ರಿಯೆ

ಕ್ರೆಡಾಯ್ ಪ್ರತಿಕ್ರಿಯೆ

ಆಸ್ತಿ ನೋಂದಣಿಯ ಸ್ಟಾಂಪ್ ಡ್ಯೂಟಿ ಈಗಿರುವ ಶೇ.5ರಿಂದ ಶೇ. 2-1ಕ್ಕೆ ಇಳಿದರೆ ಖರೀದಿದಾರರಿಗೆ ಅನುಕೂಲ ಎಂದು ಕ್ರೆಡಾಯ್, ಬೆಂಗಳೂರಿನ ಕಾರ್ಯದರ್ಶಿ ಸುರೇಶ್ ಹರಿ ಪ್ರತಿಪಾದಿಸಿದ್ದಾರೆ.

ಸಾಮಾನ್ಯವಾಗಿ ಶೇ.70ರಷ್ಟು ಮಾರುಕಟ್ಟೆ ಮೌಲ್ಯದಲ್ಲಿ ಮಾರ್ಗದರ್ಶಿ ಮೌಲ್ಯವನ್ನು ಥಂಬ್ ರೂಲ್‍ನಡಿ ಲೆಕ್ಕಾಚಾರ ಹಾಕಲಾಗುತ್ತದೆ. ಈ ಲೆಕ್ಕಾಚಾರದಲ್ಲೇ ಕೆಲವು ಅಸಮಂಜಸ ಸಂಗತಿಗಳಿವೆ. ಇದು ಕೃತಕ ಭ್ರಾಂತಿ ಹುಟ್ಟಿಸುತ್ತದೆ ಮತ್ತು ಹಾಗಾಗಿ ರಿಯಲ್ ಎಸ್ಟೇಲ್ ಮಾರುಕಟ್ಟೆಯಲ್ಲಿ ಹಣದುಬ್ಬರದ ಒಂದು ಟ್ರೆಂಡ್ ಇರುತ್ತದೆ.

ಹಣದುಬ್ಬರದ ಟ್ರೆಂಡ್ ಮತ್ತು ಹೆಚ್ಚಿನ ಸ್ಟಾಂಪ್ ಡ್ಯೂಟಿ ಶುಲ್ಕ ಇದೆಲ್ಲದರ ಪರಿಣಾಮವಾಗಿ ಖರೀದಿದಾರರು ರಿಜಿಸ್ಟ್ರೇಶನ್ ಗೆ ಮುಂದೆ ಬರುವುದಿಲ್ಲ.

 ಆಸ್ತಿಯ ಮೌಲ್ಯದೊಂದಿಗೆ ನೋಂದಣಿ ಶುಲ್ಕ ಜೋಡಣೆ ಏಕೆ?

ಆಸ್ತಿಯ ಮೌಲ್ಯದೊಂದಿಗೆ ನೋಂದಣಿ ಶುಲ್ಕ ಜೋಡಣೆ ಏಕೆ?

ಆಸ್ತಿಯ ಮೌಲ್ಯದೊಂದಿಗೆ ನೋಂದಣಿ ಶುಲ್ಕ ಜೋಡಿಸುವುದನ್ನು ತಪ್ಪಿಸಬೇಕು. ನೋಂದಣಿ ಶುಲ್ಕವನ್ನು ಸಾಮಾನ್ಯವಾಗಿ ಡಾಕ್ಯುಮೆಂಟೇಶಶನ್ ಗಾಗಿ ವಿಧಿಸಲಾಗುತ್ತದೆ. ಇದು ಎಲ್ಲಾ ರೀತಿಯ ಆಸ್ತಿಯ ವಿಧ, ಮೌಲ್ಯ ಹಾಗೂ ಗಾತ್ರಕ್ಕೂ ಒಂದೇ ಆಗಿರುತ್ತದೆ. ಹಾಗಿದ್ದ ಮೇಲೆ ಯಾಕಾಗಿ ನೋಂದಣಿ ಶುಲ್ಕವನ್ನು ಆಸ್ತಿಯ ಮೌಲ್ಯದ ಶೇಕಡಾವಾರು ಲೆಕ್ಕಾಚಾರ ಹಾಕಲಾಗುತ್ತದೆ'' ಎಂದು ಸುರೇಶ್ ಹರಿ ಪ್ರಶ್ನಿಸಿದ್ದಾರೆ.

Recommended Video

ಮೊಣಕಾಲು ನೋವಿನಿಂದ ಬಳಲ್ಲುತ್ತಿರುವ ವರುಣ್ ಚಕ್ರವರ್ತಿ! | Oneindia Kannada
 ಮಹಾರಾಷ್ಟ್ರ ಮಾದರಿ ಅನುಸರಿಸಲು ಕಾಂಗ್ರೆಸ್ಸಿಗರ ಒತ್ತಾಯ

ಮಹಾರಾಷ್ಟ್ರ ಮಾದರಿ ಅನುಸರಿಸಲು ಕಾಂಗ್ರೆಸ್ಸಿಗರ ಒತ್ತಾಯ

ಮುದ್ರಾಂಕ ಶುಲ್ಕ ಕಾಯ್ದೆ ತಿದ್ದುಪಡಿ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಂಬಿ ಪಾಟೀಲ್, ಇದಕ್ಕಿಂತ ಇನ್ನೂ ಹೆಚ್ಚಿನ ಕೊಡುಗೆ ಜನತೆಗೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮಾದರಿ ಅನುಸರಿಸುವುದು ಉತ್ತಮ, ಬೆಲೆ ಸಮರದ ನಡುವೆ ಮುದ್ರಾಂಕ ಶುಲ್ಕ ತಗ್ಗಿಸಿ, ಖರೀದಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದಿದ್ದಾರೆ.

''ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ, ಮಾರ್ಗದರ್ಶಿ ಮೌಲ್ಯಕ್ಕನುಗುಣವಾಗಿ ಮುದ್ರಾಂಕ ಶುಲ್ಕ ತಗ್ಗಿಸಲಾಗಿದೆ'' ಎಂದು ಸಚಿವ ಅಶೋಕ್ ಹೇಳಿದರು. ಜನರು ತಮ್ಮದೇ ಸ್ವಂತ ಜಮೀನಿನಲ್ಲಿ ಕಡಿಮೆ ವೆಚ್ಚದಲ್ಲಿ ಮನೆ ನಿರ್ಮಿಸಿಕೊಳ್ಳಲು ಬೇಕಾದ ಅನುಕೂಲವನ್ನು ಕಲ್ಪಿಸುವಂತೆ ಕಾಂಗ್ರೆಸ್ ಮುಖಂಡರಾದ ಡಿಕೆ ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಆಗ್ರಹಿಸಿದರು.

English summary
Karnataka Government has released gazette notification on an amendment to the Stamp Act, 1957, slashing the stamp duty payable on flats priced between Rs 35 lakh and Rs 45 lakh to 3%. The 2% reduction, however, is applicable only on first-time registration, primary sales in other words.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X