ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲನಚಿತ್ರ, ಟಿವಿ ಕಾರ್ಯಕ್ರಮಗಳಲ್ಲಿ ಸರ್ಕಾರಿ ನೌಕರರು ಇನ್ಮುಂದೆ ನಟಿಸುವಂತಿಲ್ಲ!

|
Google Oneindia Kannada News

ಬೆಂಗಳೂರು, ಅ. 30: ಸರ್ಕಾರಿ ನೌಕರರು ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ನಟಿಸುವುದನ್ನು ನಿಷೇಧಿಸುವುದಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಬಗ್ಗೆ ಕಳೆದ ಅಕ್ಟೋಬರ್ 27 ರಂದು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ (ನಡವಳಿಕೆ) ನಿಯಮಗಳು 2020ರ ಕರಡು ಪ್ರತಿಯನ್ನು ಪ್ರಕಟಿಸಿದೆ. ಈ ಕರಡು ಪ್ರತಿಯಲ್ಲಿ ಸರ್ಕಾರಿ ನೌಕರರು ಯಾವುದನ್ನು ಮಾಡಬೇಕು? ಯಾವುದನ್ನು ಮಾಡಬಾರದು ಎಂಬುದರ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಕರಡು ನಿಯಮಾವಳಿಗಳನ್ನು ಪ್ರಕಟ ಮಾಡಿದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯ ತಿಳಿಸುವಂತೆ ಮನವಿ ಮಾಡಿದೆ.

ಕರಡು ಗೆಜೆಟ್ ಅಧಿಸೂಚನೆಯಲ್ಲಿ ಜನರು ತಮ್ಮ ಸಲಹೆಗಳನ್ನು ಮತ್ತು ಆಕ್ಷೇಪಣೆಯನ್ನು ಸಲ್ಲಿಸಲು ಸರ್ಕಾರ 15 ದಿನಗಳ ಕಾಲಾವಕಾಶ ನೀಡಿದೆ. ಸರ್ಕಾರಿ ನೌಕರರು ಪತ್ರಿಕೆ, ರೇಡಿಯೋ, ದೂರದರ್ಶನ ಅಥವಾ ಯಾವುದೇ ರೀತಿಯ ಪ್ರದರ್ಶನ ಕಲೆಗಳು, ಸಮೂಹ ಮಾಧ್ಯಮಗಳ ಚರ್ಚೆಯಲ್ಲಿ ಭಾಗವಹಿಸುವುದು ಅಥವಾ ಪುಸ್ತಕಗಳನ್ನು ಬರೆಯುವುದು, ಲೇಖನಗಳು ಪ್ರಕಟಿಸುವುದು ಸೆರಿದಂತೆ ಹಲವು ನಿಯಮಗಳನ್ನು ಹೊರಡಿಸಿದೆ. ಸಾರ್ವಜನಿಕರ ಅಭಿಪ್ರಾಯ ಪಡೆದ ಬಳಿಕ ನಿಯಮಾವಳಿಗಳನ್ನು ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅಂತಿಗೊಳಿಸಲಿದೆ.

ಸರ್ಕಾರಿ ನೌಕರರು ಪೂರ್ವಾನುಮತಿ ಪಡೆಯದೇ ಯಾವುದೇ ಪತ್ರಿಕೆ ಅಥವಾ ನಿಯತಕಾಲಿಕದಲ್ಲಿ ಬರೆಯುವುದು, ಲೇಖನ ಪ್ರಕಟಿಸುವುದಕ್ಕೆ ನಿಯಂತ್ರಣ ಹೇರುತ್ತದೆ. ಜೊತೆಗೆ ಯಾವುದೇ ಸರ್ಕಾರಿ ನೌಕರರು ಅನುಮತಿ ಪಡೆಯದೇ ಚಲನಚಿತ್ರಗಳು ಮತ್ತು ಟೆಲಿವಿಷನ್ ಧಾರಾವಾಹಿಗಳಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಚಟುವಟಿಕೆಯೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂಬುದು ಕರಡು ನಿಯಮದಲ್ಲಿದೆ.

Karnataka govt proposed ban on govt servants acting in films television programmes

ಸರ್ಕಾರಿ ನೌಕರರರು ರೇಡಿಯೋ, ಟೆಲಿವಿಷನ್ ಸೇರಿದಂತೆ ಪ್ರಾಯೋಜಿತ ಮಾಧ್ಯಮ ಕಾರ್ಯಕ್ರಮದಲ್ಲಿ ಅಥವಾ ಸರ್ಕಾರದ ಮಾಧ್ಯಮದ ಕಾರ್ಯಕ್ರಮದಲ್ಲಿಯೂ ಭಾಗವಹಿಸುವಂತಿಲ್ಲ. ಕರಡು ನಿಯಮ ಕಾಯ್ದೆಯಾಗಿ ಜಾರಿಯಾದ ಬಳಿಕ ಸರ್ಕಾರಿ ನೌಕರರು ಯಾವುದೇ ಪುಸ್ತಕವನ್ನು ಪ್ರಕಟಿಸುವುದು ಅಥವಾ ಯಾವುದೇ ರೀತಿಯ ಸಾಹಿತ್ಯಿಕ ಅಥವಾ ಕಲಾತ್ಮಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ನಿಯಮಾವಳಿ ನಿಷೇಧಿಸಿದೆ.

Recommended Video

ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada

ಆದಾಗ್ಯೂ, ಸಾಹಿತ್ಯ, ನಾಟಕ, ಪ್ರಬಂಧಗಳು, ಕವನ, ಸಣ್ಣ ಕಥೆಗಳು, ಕಾದಂಬರಿಗಳು ಅಥವಾ ಕಾದಂಬರಿಗಳ ಪುಸ್ತಕಗಳನ್ನು ಪ್ರಕಟಿಸಲು ಸರ್ಕಾರಿ ನೌಕರನಿಗೆ ಅವಕಾಶವಿದೆ. ಆದರೆ ಅಂತಹ ಸಾಹಿತ್ಯ ಕೃತಿಗಳನ್ನು ಪ್ರಕಟಿಸುವಾಗ ಆ ಅಧಿಕಾರಿ ತನ್ನ ಸಮಯ ಮತ್ತು ತಾನು ಹೊಂದಿರುವ ಹುದ್ದೆಯ ಪ್ರಭಾವವನ್ನು ತನ್ನ ಪುಸ್ತಕಗಳ ಮಾರಾಟದ ಪ್ರಚಾರದ ಮೇಲೆ ಪ್ರಭಾವ ಬೀರಲು ಬಳಸಬಾರದು ಎಂಬುದನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಅಂತಹ ಪ್ರಕಟಣೆಯಲ್ಲಿ ಯಾವುದೇ ಆಕ್ಷೇಪಾರ್ಹ ವಿಷಯ ಮತ್ತು ನೀತಿಗಳನ್ನು ಟೀಕಿಸುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.

English summary
The Karnataka government has proposed a ban on government servants acting in films and television programmes. In the draft Karnataka State Civil Services (Conduct) Rules 2020, which was published on Tuesday, the Karnataka government has laid down a set of dos and don'ts for government servants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X