• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದಲ್ಲಿ ಶುರುವಾಗಲಿವೆ 900 ಹೊಸ ಮದ್ಯ ಮಾರಾಟ ಮಳಿಗೆಗಳು

|

ಬೆಂಗಳೂರು, ಆಗಸ್ಟ್ 27: ರಾಜ್ಯ ಪ್ರಸ್ತುತ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ಪರಿಹಾರದ ಮಾರ್ಗವಾಗಿ ಕರ್ನಾಟಕ ಸರ್ಕಾರವು 900 ಹೊಸ ಮದ್ಯದಂಗಡಿಗಳನ್ನು ಪ್ರಾರಂಭಕ್ಕೆ ಅನುಮತಿ ನೀಡಲು ನಿರ್ಧರಿಸಿದೆ.

ಎಂಎಸ್‌ಐಎಲ್‌ನ ಹೊಸ ಮದ್ಯದಂಗಡಿಗಳನ್ನು ತೆರೆಯಲು ನಿರ್ಧರಿಸಿರುವ ಜತೆಗೆ, ಪ್ರಸ್ತು ಇರುವ 463 ಎಂಎಸ್‌ಐಎಲ್ ಮಳಿಗೆಗಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಒಂದು ಗ್ರಾಮ ಪಂಚಾಯ್ತಿಯಿಂದ ಮತ್ತೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸ್ಥಳಾಂತರ ಮಾಡಲು ಅವಕಾಶ ನೀಡುವ ಅಬಕಾರಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಕರ್ನಾಟಕದ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಮಾರಾಟ ಯಾವಾಗ?

2016ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ 900 ಹೊಸ ಮದ್ಯ ಮಾರಾಟ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಲು ಮುಂದಾಗಿತ್ತು. ಆಗ ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿಯ ತೀವ್ರ ವಿರೋಧದ ಕಾರಣದಿಂದಾಗಿ ಈ ಪ್ರಸ್ತಾವವನ್ನು ಕೈಬಿಡಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಸರ್ಕಾರವೇ ಆರ್ಥಿಕ ಬಿಕ್ಕಟ್ಟಿನ ಕಾರಣಗಳಿಂದಾಗಿ ಲಿಕ್ಕರ್ ಶಾಪ್‌ಗಳನ್ನು ಹೊಸದಾಗಿ ಆರಂಭಿಸಲು ನಿರ್ಧಾರ ಮಾಡಿದೆ.

ನಿರ್ಧರಿಸುವವರು ಯಾರು?

ನಿರ್ಧರಿಸುವವರು ಯಾರು?

ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್‌ಗೆ ಈ ಹೊಸ ಲಿಕ್ಕರ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ. ಸ್ಥಳೀಯ ಶಾಸಕರು ಬೇಡಿಕೆಗೆ ಅನುಗುಣವಾಗಿ ಯಾವ ಸ್ಥಳದಲ್ಲಿ ಮದ್ಯದಂಗಡಿ ತೆರೆಯಬೇಕು ಎಂಬುದನ್ನು ಅಂತಿಮಗೊಳಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಹೊಸ ನಿಯಮ ಸೇರ್ಪಡೆ

ಎರಡು ಹೊಸ ನಿಯಮ ಸೇರ್ಪಡೆ

ಕರ್ನಾಟಕ ಅಬಕಾರಿ ನಿಯಮ-2020ಕ್ಕೆ ತಿದ್ದುಪಡಿ ತರಲು ಮೇ ತಿಂಗಳಲ್ಲಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿ ಆಕ್ಷೇಪಣೆಗಳಿಗೆ ಕಾಲಾವಕಾಶ ನೀಡಿತ್ತು. ಇದುವರೆಗೂ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ 1967ರ ಕರ್ನಾಟಕ ಅಬಕಾರಿ ನಿಯಮಗಳ ಕಾಯ್ದೆಗೆ ತಿದ್ದುಪಡಿ ತಂದು ನಿಯಮ 23ಕ್ಕೆ ಎರಡು ಹೊಸ ನಿಯಮಗಳನ್ನು ಸೇರ್ಪಡೆ ಮಾಡಿದೆ.

ಕೋವಿಡ್ ತೆರಿಗೆಯಿಂದ ಕುಸಿದ ಮದ್ಯದ ಬೇಡಿಕೆ: ಈ ರಾಜ್ಯದಲ್ಲಿ ಕಡಿಮೆ ಬೆಲೆಯಲ್ಲಿ ಮಾರಾಟ ಸಿದ್ಧತೆ

ಯಾರಿಗೆ ಅನುಕೂಲ?

ಯಾರಿಗೆ ಅನುಕೂಲ?

ರಾಜ್ಯ ಹಣಕಾಸು (ಅಬಕಾರಿ) ಇಲಾಖೆಯು ಬುಧವಾರ ಹೊರಡಿಸಿರುವ ಆದೇಶವು ಮುಂದಿನ ಗೆಜೆಟ್ ಅಧಿಸೂಚನೆ ಪ್ರಕಟವಾಗುವ ದಿನದಿಂದ ಅನ್ವಯವಾಗಲಿದೆ. ಎಂಎಸ್‌ಐಎಲ್ ಮದ್ಯದಂಗಡಿ ಹಂಚಿಕೆಯಾಗಿ ಇದುವರೆಗೂ ತೆರೆಯದೆ ಇದ್ದರೆ, ಈಗಾಗಲೇ ಅಂಗಡಿ ತೆರೆದು ಸ್ಥಳೀಯರಿಂದ ವಿರೋಧ ಎದುರಿಸುತ್ತಿದ್ದರೆ ಅಥವಾ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಮತ್ತೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸ್ಥಳಾಂತರದ ಅವಕಾಶದಿಂದ ಅನುಕೂಲವಾಗಲಿದೆ.

ಆರ್ಥಿಕ ನಷ್ಟ ಭರಿಸಲು ಈ ನಿರ್ಧಾರ

ಆರ್ಥಿಕ ನಷ್ಟ ಭರಿಸಲು ಈ ನಿರ್ಧಾರ

2016ರಲ್ಲಿ ಕಾಂಗ್ರೆಸ್ ಸರ್ಕಾರ ಎಂಎಸ್‌ಐಎಲ್‌ನ ಸಿಎಲ್-11 (ಸಿ) (ಸರ್ಕಾರಿ ಮದ್ಯ ಮಾರಾಟ ಮಳಿಗೆ) ತೆರೆಯಲು ಆದೇಶ ಹೊರಡಿಸಿದ್ದಾಗ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. 900 ಮದ್ಯ ಮಾರಾಟ ಮಳಿಗೆಗಳ ಸ್ಥಾಪನೆಯ ವಿಚಾರವನ್ನು ಸರ್ಕಾರ ಕೈಬಿಟ್ಟಿತ್ತು. ಈಗ ಕೊರೊನಾ ವೈರಸ್ ಕಾರಣದಿಂದ ರಾಜ್ಯ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಈ ನಷ್ಟವನ್ನು ತುಂಬಿಕೊಳ್ಳುವ ಮಾರ್ಗವಾಗಿ ಮದ್ಯ ಮಾರಾಟ ಮಳಿಗೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಮದ್ಯ ಪ್ರಿಯರಿಗೆ ಖುಷಿ ಸುದ್ದಿ: ಇನ್ನು ಫ್ಲಿಪ್ ಕಾರ್ಟ್‌ನಲ್ಲಿಯೂ ಸಿಗುತ್ತೆ ಎಣ್ಣೆ!

English summary
Karnataka govt permits MSIL to open 900 new liquor shops in state to find a solution to the economic crisis
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X