ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಲೆಗಳಲ್ಲಿ ನೀರಿನ ಬೆಲ್; ಸರ್ಕಾರದ ಅಧಿಕೃತ ಆದೇಶ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23 : ಕರ್ನಾಟಕದ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ನೀರಿನ ವಿರಾಮ ಕೊಡಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೇರಳದಲ್ಲಿದ್ದ ಈ ನಿಯಮ ಕರ್ನಾಟಕದಲ್ಲಿಯೂ ಇನ್ನು ಮುಂದೆ ಜಾರಿಗೆ ಬರುತ್ತಿದೆ.

ಎಲ್ಲಾ ಶಾಲೆಗಳಲ್ಲೂ ಇನ್ನು ಮುಂದೆ ವಿದ್ಯಾರ್ಥಿಗಳಿಗೆ ಬೆಳಗ್ಗೆ ಮತ್ತು ಮಧ್ಯಾಹ್ನ ಕಡ್ಡಾಯವಾಗಿ ನೀರಿನ ವಿರಾಮ (Water Bell) ನೀಡಲಾಗುತ್ತದೆ. ಸರ್ಕಾರದ ಆದೇಶದ ಪ್ರಕಾರ 10 ನಿಮಿಷಗಳ ಕಾಲ ವಿರಾಮ ಪಡೆಯಲಿದ್ದಾರೆ.

ಹತ್ತಿ ಬಿಡಿಸುತ್ತಿದ್ದವರನ್ನು ಶಾಲೆ ಮೆಟ್ಟಿಲು ಹತ್ತಿಸಿದ ಅಧಿಕಾರಿಗಳು! ಹತ್ತಿ ಬಿಡಿಸುತ್ತಿದ್ದವರನ್ನು ಶಾಲೆ ಮೆಟ್ಟಿಲು ಹತ್ತಿಸಿದ ಅಧಿಕಾರಿಗಳು!

ಸರ್ಕಾರದ ಆದೇಶ ಪ್ರತಿ ಜಿಲ್ಲೆಗೂ ರವಾನೆಯಾಗಲಿದೆ. ಶಾಲೆಗಳಲ್ಲಿ ಬೆಳಗಿನ ಎರಡು ಮತ್ತು ಮೂರನೇ ತರಗತಿಗಳ ನಡುವೆ ನೀರು ಕುಡಿಯಲು ಅವಕಾಶ ನೀಡಲಾಗುತ್ತದೆ. ಕಡಿಮೆ ನೀರಿನ ಸೇವನೆ, ನೀರಿನ ಕೊರತೆಯ ಮಕ್ಕಳಲ್ಲಿ ಬರಬಹುದಾದ ಆರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಜ.17ರಿಂದ ಖಾಸಗಿ ಶಾಲಾ-ಕಾಲೇಜುಗಳು ಅನಿರ್ದಿಷ್ಟಾವಧಿಗೆ ಬಂದ್ಜ.17ರಿಂದ ಖಾಸಗಿ ಶಾಲಾ-ಕಾಲೇಜುಗಳು ಅನಿರ್ದಿಷ್ಟಾವಧಿಗೆ ಬಂದ್

Karnataka Govt Orders For Water Bell In Schools

ಕೇರಳ ರಾಜ್ಯದಲ್ಲಿ ವಾಟರ್ ಬೆಲ್ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಈ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಾಟರ್ ಬೆಲ್ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೆ ತರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ನೀಡಿದ್ದರು.

English summary
Karnataka government ordered for all schools to ring water bell thrice a day to remind students to drink water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X