ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್ ಕ್ಲಾಸ್‌ಗೆ ಕರ್ನಾಟಕದ ಒಪ್ಪಿಗೆ; ತರಗತಿಗಳ ವಿವರ

|
Google Oneindia Kannada News

ಬೆಂಗಳೂರು, ಜೂನ್ 29 : ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಮಾರ್ಗಸೂಚಿ ಸೂತ್ರಗಳ ಪ್ರಕಾರ ಎಷ್ಟು ತರಗತಿ ನಡೆಸಬೇಕು ಎಂದು ಈ ಆದೇಶದಲ್ಲಿ ನಿರ್ದೇಶನ ನೀಡಲಾಗಿದೆ.

Recommended Video

Bengaluru Corona Stats : ಇನ್ನೂ ಬೆಂಗಳೂರಲ್ಲಿ ಬದುಕೋದು ತುಂಬಾ ಕಷ್ಟ | Oneindia Kannada

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಡಿಜಿಟಲೀಕರಣ ಮಾರ್ಗಸೂಚಿಗಳ ಪ್ರಕಾರ ಐಸಿಎಸ್‌ಇ, ಸಿಬಿಎಸ್‌ಇ ಹಾಗೂ ಅಂತರಾಷ್ಟ್ರೀಯ ಪಠ್ಯಕ್ರಮ ಬೋಧಿಸುವ ಸಂಸ್ಥೆಗಳು ಆನ್‌ಲೈನ್ ಶಿಕ್ಷಣ ನೀಡಬಹುದು ಎಂದು ಹೇಳಿದೆ.

 ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ ಪುಟ್ಟ ಮಕ್ಕಳಿಗೆ ಆನ್ ಲೈನ್ ಕ್ಲಾಸ್; ಸುತಾರಾಂ ಒಪ್ಪಲ್ಲ ಎಂದ ಶಿಕ್ಷಣ ಸಚಿವ

ಆನ್‌ಲೈನ್ ಶಿಕ್ಷಣದ ಮಾದರಿ ಸಿದ್ಧಪಡಿಸಲು ಕರ್ನಾಟಕ ಸರ್ಕಾರ ತಜ್ಞರ ಸಮಿತಿ ರಚನೆ ಮಾಡಿದೆ. ಈ ಸಮಿತಿಯ ವರದಿ ಸಲ್ಲಿಕೆಯಾಗಿ ಅಂತಿಮ ಆದೇಶ ಹೊರಡಿಸುವ ತನಕ ಸಂಸ್ಥೆಗಳು ಆನ್‌ಲೈನ್ ತರಗತಿ ನಡೆಸಬಹುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ? ಆನ್ ಲೈನ್ ಮೂಲಕ ಬಿಬಿಎಂಪಿಗೆ ಆಸ್ತಿ ತೆರಿಗೆ ಕಟ್ಟುವುದು ಹೇಗೆ?

ಕೊರೊನಾ ವೈರಸ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ಶಾಲೆಗಳು ಮುಚ್ಚಿವೆ. ಜುಲೈ ತಿಂಗಳಿನಲ್ಲಿಯೂ ಶಾಲೆಗಳನ್ನು ತೆರೆಯುವ ಕುರಿತು ಇನ್ನೂ ಸರ್ಕಾರ ತೀರ್ಮಾನ ಕೈಗೊಂಡಿಲ್ಲ. ಆದ್ದರಿಂದ, ಆನ್‌ಲೈನ್ ತರಗತಿಗಳನ್ನು ನಡೆಸಲಾಗುತ್ತದೆ.

ಯೋಗ ಶಿಕ್ಷಣ ಖಡ್ಡಾಯ ಮಾಡಲಾಗುವುದು: ಈಶ್ವರಪ್ಪಯೋಗ ಶಿಕ್ಷಣ ಖಡ್ಡಾಯ ಮಾಡಲಾಗುವುದು: ಈಶ್ವರಪ್ಪ

ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು

ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು

ಪೂರ್ವ ಪ್ರಾಥಮಿಕ ಶಿಕ್ಷಣ ಸಂಸ್ಥೆಗಳು ವಾರಕ್ಕೆ ಒಂದು ದಿನ ಗರಿಷ್ಠ 30 ನಿಮಿಷ ಪೋಷಕರ ಜೊತೆ ಆನ್‌ಲೈನ್ ಸಂವಹನ ಮತ್ತು ಮಾರ್ಗದರ್ಶನ ನೀಡಬಹುದು. 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ (ದಿನ ಬಿಟ್ಟು ದಿನ) ಎರಡು ಅವಧಿ 30 ರಿಂದ 45 ನಿಮಿಷಗಳ ಆನ್‌ಲೈನ್ ಶಿಕ್ಷಣ ನೀಡಬಹುದು.

6 ರಿಂದ 8ನೇ ತರಗತಿ

6 ರಿಂದ 8ನೇ ತರಗತಿ

6 ರಿಂದ 8ನೇ ತರಗತಿಯ ಮಕ್ಕಳಿಗೆ ವಾರದಲ್ಲಿ ಐದು ದಿನ ಗರಿಷ್ಠ ಎರಡು ಅವಧಿ 30 ರಿಂದ 45 ನಿಮಿಷ ಹಾಗೂ 9 ಮತ್ತು 10ನೇ ತರಗತಿ ಮಕ್ಕಳಿಗೆ ವಾರದಲ್ಲಿ 5 ದಿನ 45 ನಿಮಿಷಗಳ ಗರಿಷ್ಠ ನಾಲ್ಕು ಅವಧಿ ಆನ್‌ಲೈನ್ ಶಿಕ್ಷಣ ನೀಡಬಹುದು.

ಹೆಚ್ಚುವರಿ ಶುಲ್ಕ ವಿಧಿಸಬಾರದು

ಹೆಚ್ಚುವರಿ ಶುಲ್ಕ ವಿಧಿಸಬಾರದು

ಕೋವಿಡ್ - 19 ಪರಿಸ್ಥಿತಿ ಹಿನ್ನಲೆಯಲ್ಲಿ ಶಿಕ್ಷಣಕ್ಕೆ ಪೂರಕವಾಗಿ ಆನ್‌ಲೈನ್ ಶಿಕ್ಷಣ ನೀಡಬೇಕು. ಹೀಗಾಗಿ ಶಿಕ್ಷಣ ಸಂಸ್ಥೆಗಳು ಯಾವುದೇ ಹೆಚ್ಚುವರಿ ಶುಲ್ಕ ವಸೂಲಿ ಮಾಡುವಂತಿಲ್ಲ. ಶುಲ್ಕವನ್ನು ಬೋಧನಾ ಶುಲ್ಕದಿಂದಲೇ ಭರಿಸಬೇಕಿದೆ.

ಅಂತಿಮ ಆದೇಶ ಪ್ರಕಟ

ಅಂತಿಮ ಆದೇಶ ಪ್ರಕಟ

ಕರ್ನಾಟಕ ಸರ್ಕಾರ ಆನ್‌ಲೈನ್ ಶಿಕ್ಷಣ ನೀಡುವ ಕುರಿತು ವರದಿ ನೀಡಲು ತಜ್ಞರ ಸಮಿತಿ ರಚನೆ ಮಾಡಿದೆ. ಈ ಸಮಿತಿಯ ವರದಿ ಸಲ್ಲಿಕೆಯಾಗಿ ಅಂತಿಮ ಆದೇಶ ಹೊರಡಿಸುವ ತನಕ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ವೇಳಾಪಟ್ಟಿಯಂತೆ ನಡೆಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

English summary
In a order Karnataka government allowed to conduct online classes. Here are the schedule of classes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X