ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್ಡೌನ್ : ಕಾರ್ಮಿಕ, ಪ್ರವಾಸಿಗ, ವಿದ್ಯಾರ್ಥಿಗಳ ನೆರವಿಗೆ ಸೇವಾ ಸಿಂಧು

|
Google Oneindia Kannada News

ಬೆಂಗಳೂರು, ಮೇ 3: ಅನ್ಯರಾಜ್ಯದ ವಲಸೆ ಕಾರ್ಮಿಕರು,ಪ್ರವಾಸಿಗರು,ವಿದ್ಯಾರ್ಥಿಗಳಿಗೆ ತಮ್ಮ ಊರುಗಳಿಗೆ ತೆರಳಬೇಕೇ? ಸೇವಾ ಸಿಂಧು ವೆಬ್ ಪೋರ್ಟಲ್ ನಲ್ಲಿ ನಿಮ್ಮ ವಿವರ ನೋಂದಾಯಿಸಿ, ಆಪ್ ಬಳಸಿ ಸರ್ಕಾರದ ನೆರವು ಪಡೆದುಕೊಳ್ಳಿ. ಕರ್ನಾಟಕದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಇತರೇ ರಾಜ್ಯಗಳಿಗೆ ತೆರಳಬೇಕು ಎನ್ನುವವರು ಹಾಗೂ ಇತರೇ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ತಮ್ಮ ಊರುಗಳಿಗೆ ಮರುಳುವುದಕ್ಕಾಗಿ ರಾಜ್ಯ ಸರಕಾರ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕರ್ನಾಟಕದಿಂದ ಭಾರತದ ಇತರೆ ರಾಜ್ಯಗಳಿಗೆ ತೆರಳಲು, ಇತರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲಿಚ್ಛಿಸುವವರು ಅಲ್ಲದೆ ವಿದೇಶದಿಂದ ಕರ್ನಾಟಕಕ್ಕೆ ಬರಲು ಬಯಸುವವರಿಗೆಲ್ಲರಿಗೂ ಸೇವಾ ಸಿಂಧು ಏಕೈಕ ವೇದಿಕೆಯಾಗಿದೆ. ವಲಸೆ ಕಾರ್ಮಿಕರು,ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ತಮ್ಮ ವಿವರವನ್ನು ಈ ಆನ್‍ಲೈನ್‍ನಲ್ಲಿನ ನಮೂದಿಸಬೇಕು ಮತ್ತು ಅದನ್ನು ಪರಿಶೀಲಿಸಿ ತಮ್ಮ ಸ್ಥಳಗಳಿಗೆ ತೆರಳುವುದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಏನಾದರೂ ಗೊಂದಲಗಳು ಮತ್ತು ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಕಂಟ್ರೋಲ್ ರೂಂ: 08392-277100 ಸಂಪರ್ಕಿಸಬೇಕು ಎಂದು ಸಚಿವ ಸುರೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ಮೂಲಕ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಹೊಣೆ ನೀಡಲಾಗಿದೆ.

Karnataka Govt launches Web portal Seva Sindhu for stranded Citizen

ಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿಸ್ವಂತ ಊರಿಗೆ ತೆರಳಲು ಬಸ್ ನಿಲ್ದಾಣದ ಕಡೆ ಕಾರ್ಮಿಕರ ದಾಂಗುಡಿ

* ಕರ್ನಾಟಕದಿಂದ ಇತರ ಭಾರತೀಯ ರಾಜ್ಯಗಳಿಗೆ ಪ್ರಯಾಣಿಸಲು ಇಲ್ಲಿ ಅರ್ಜಿ ಸಲ್ಲಿಸಿ

* ಇತರ ದೇಶಗಳಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಇಲ್ಲಿ ಅರ್ಜಿ ಸಲ್ಲಿಸಿ

* ಭಾರತದ ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಇಲ್ಲಿ ಅರ್ಜಿ ಸಲ್ಲಿಸಿ

ಅರ್ಜಿದಾರರಿಗೆ ಎಸ್ಎಂಎಸ್, ಇಮೇಲ್ ಹಾಗೂ ಫೋನ್ ಕರೆ ಮೂಲಕ ಅರ್ಜಿ ಬಗ್ಗೆ ಅಪ್ಡೇಟ್ ನೀಡಲಾಗುತ್ತದೆ.

ಕರ್ನಾಟಕ ಸರ್ಕಾರವು "ಸೇವಾ ಸಿಂಧು" ಯೋಜನೆಯನ್ನು ಪ್ರಾರಂಭಿಸಿದ್ದು, ಸರ್ಕಾರದ ಸೇವೆಗಳು ನಾಗರೀಕರ ಮನೆ ಬಾಗಿಲಿಗೆ ತಲುಪುವ ಹಾಗೆ ಕಾರ್ಯ ನಿರ್ವಹಿಸುತ್ತಿದೆ. "ಸೇವಾ ಸಿಂಧು" ಯೋಜನೆಯು ಕರ್ನಾಟಕ ಸರ್ಕಾರದ ಸಮಗ್ರ ಸರ್ಕಾರಿ ಇಲಾಖೆಗಳ ಸೇವೆಗಳನ್ನು ವಿವಿಧ ಮಾರ್ಗಗಳಿಂದ ಸಮಸ್ತ ನಾಗರೀಕರಿಗೆ ತಲುಪಿಸಲು, ಸಮಗ್ರ ನಾಗರೀಕರ ಸೇವೆಗಳ ಕೇಂದ್ರಗಳಾದ ಬೆಂಗಳೂರು ಒನ್, ಸಿಎಸ್ ಸಿ ಸೇವಾ ಕೇಂದ್ರಗಳು, ಕರ್ನಾಟಕ ಒನ್, ಅಟಲ್ ಜೀ ಜನ ಸ್ನೇಹಿ ಕೇಂದ್ರ ಮತ್ತು ಬಾಪೂಜಿ ಕೇಂದ್ರಗಳಿಗೆ ನೀಡಿರುತ್ತದೆ. ಈ ಕೇಂದ್ರಗಳು ಎಲ್ಲಾ ಸರ್ಕಾರಿ ಇಲಾಖೆಗಳ ಸೇವೆಗಳನ್ನು ನಾಗರೀಕರಿಗೆ ಒಂದೇ ವೇದಿಕೆಯಲ್ಲಿ ಒದಗಿಸಲು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಸರ್ಕಾರದ ಸೇವೆಗಳು ನಗದು ರಹಿತ , ಕಾಗದ ರಹಿತ ವಿಧಾನವನ್ನು ಜಾರಿಗೊಳಿಸಲು ಈ ಯೋಜನೆಯ ,ಮುಖ್ಯ ಗುರಿಯಾಗಿರುತ್ತದೆ. ಈ ಯೋಜನೆಯು ನಾಗರೀಕರಿಗೆ ಸರ್ಕಾರಿ ಸೇವೆಗಳನ್ನು ವಾಸ್ತವಿಕವಾಗಿ, ಪಾರದರ್ಶಕವಾಗಿ, ಒದಗಿಸುತ್ತಿದೆ ಮತ್ತು ಉತ್ತಮ ಹೊಣೆಗಾರಿಕೆಯನ್ನು ನಿರ್ಮಿಸುತ್ತಿದೆ.

English summary
The Karnataka Government has launched an online web portal "Seva Sindhu" to facilitate the movement of the stranded citizen amid the nationwide novel coronavirus lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X