ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವನಿವರ್ಧಕ ಬಳಸಲು ಅನುಮತಿ ಕಡ್ಡಾಯ: ಹೊಸ ಮಾರ್ಗಸೂಚಿ ಹೊರಡಿಸಿದ ಸರ್ಕಾರ

|
Google Oneindia Kannada News

ಬೆಂಗಳೂರು, ಮೇ 10: ಆಜಾನ್ ಮತ್ತು ಸುಪ್ರಭಾತ ವಿವಾದಕ್ಕೆ ತೆರೆ ಎಳೆಯಲು ಧ್ವನಿವರ್ಧಕ ವಿಚಾರದಲ್ಲಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ 2002ರ ಆದೇಶದಂತೆ ಯಾವ ಪ್ರದೇಶದಲ್ಲಿ ಎಷ್ಟು ಡೆಸಿಬಲ್ ಧ್ವನಿವರ್ಧಕ ಬಳಸಬೇಕೆಂದು ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯಲ್ಲಿ ತಿಳಿಸಿದೆ

ಕರ್ನಾಟಕ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 6ವರೆಗೆ ಇಂತಿಷ್ಟೇ ಡೆಸಿಬಲ್ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರಗೆ ಇಂತಿಷ್ಟೇ ಎಂದು ನಿಗದಿ ಪಡಿಸಲಾಗಿದೆ. ಅದರನ್ವಯ ಶಬ್ದದ ಪ್ರಮಾಣ ಮಿತಿಗೊಳಿಸಿ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ.

ಎಲ್ಲಿ ಎಷ್ಟು ಡೆಸಿಬಲ್ ಇರಬೇಕು?

* ಕೈಗಾರಿಕಾ ವಲಯ ಬೆಳಗ್ಗೆ- 75 ಡೆಸಿಬಲ್, ರಾತ್ರಿ- 70 ಡೆಸಿಬಲ್

* ವಾಣಿಜ್ಯ ವಲಯ ಬೆಳಗ್ಗೆ 65 ಡೆಸಿಬಲ್, ರಾತ್ರಿ- 55 ಡೆಸಿಬಲ್

* ನಿಶ್ಯಬ್ಧ ವಲಯ ಬೆಳಗ್ಗೆ 50 ಡೆಸಿಬಲ್, ರಾತ್ರಿ- 40 ಡೆಸಿಬಲ್

* ವಸತಿ ವಲಯ ಬೆಳಗ್ಗೆ 55 ಡೆಸಿಬಲ್, ರಾತ್ರಿ- 45 ಡೆಸಿಬಲ್

* ನಿಶ್ಯಬ್ದ ವಲಯ ಬೆಳಗ್ಗೆ 50 ಡೆಸಿಬಲ್, ರಾತ್ರಿ- 40 ಡೆಸಿಬಲ್

ಒಂದೊಂದು ರೀತಿಯಲ್ಲಿ ನಿಗದಿತ ಡೆಸಿಬಲ್ ನಷ್ಟು ಪ್ರಮಾಣದಲ್ಲಿ ಶಬ್ಧ ಮಾಡುವಂತ ಅವಕಾಶವನ್ನು ನೀಡಲಾಗಿದೆ. ಇದರ ಅನ್ವಯ ಶಬ್ಧವನ್ನು ಮಾಡಬಹುದಾಗಿದೆ ಎಂದು ಸರ್ಕಾರ ತನ್ನ ಮಾರ್ಗ ಸೂಚಿಯಲ್ಲಿ ತಿಳಿಸಿದೆ.

Karnataka Governament Release New Guidline for Loudspeakers


ಧ್ವನಿವರ್ಧಕ ಬಳಕೆಗೆ ಪೊಲೀಸರ ಅನುಮತಿ ಕಡ್ಡಾಯ

ಧ್ವನಿವರ್ಧಕವನ್ನು ಬಳಸಬೇಕಾದರೆ ಸರ್ಕಾರದ ಆದೇಶ 13.08.2002 ಪೊಲೀಸ್ ರ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ನಿರ್ಧಿಷ್ಟ ಪ್ರಮಾಣದ ಧ್ವನಿವರ್ಧಕವನ್ನು ಹೊರತುಪಡಿಸಿ ಶಬ್ಧ ಮಾಲಿನ್ಯವನ್ನು ಉಂಟು ಮಾಡುವ ಧ್ವನಿವರ್ಧಕವನ್ನು ಮತ್ತು ಧ್ವನಿವರ್ಧಕ ಭಲಸಿದ ವ್ಯಕ್ತಿಯನ್ನು ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳಬಹುದಾಗಿದೆ.

* ಧ್ವನಿವರ್ಧಕವನ್ನು ಪೊಲೀಸರ ಅನುಮತಿ ಬಳಿಕವೇ ಬಳಸಬೇಕು.

* ಧ್ವನಿವರ್ಧಕವನ್ನು ರಾತ್ರಿ ಅಂದರೆ 10ರಿಂದ ಬೆಳಗ್ಗೆ 6ರ ವೆರೆಗೂ ಬಳಸುವಂತಿಲ್ಲ.

* ರಾತ್ರಿ 10 ರಿಂದ 6ರವೆರೆಗೂ ಧ್ವನಿವರ್ಧಕವನ್ನು ಬಳಸಬೇಕಾದರೆ ಅನುಮತಿ ಇರುವುದು ಕ್ಲೋಸ್ ಏರಿಯಾದಲ್ಲಿ ಮಾತ್ರವೇ. ಅಂದರೆ, ಆಡಿಟೋರಿಯಂ, ಕಾನ್ಫರೆನ್ಸ್ ರೂಂ, ಇತರೆ ಹಾಲ್ ಗಳಲ್ಲಿ ಮಾತ್ರ.

ಈಗಾಗಲೇ ಅಳವಡಿಸಿರುವ ಧ್ವನಿವರ್ಧಕಗಳನ್ನು ಏನು ಮಾಡಬೇಕು..?

* ಈಗಾಗಲೇ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಅಳವಡಿಸಿದ್ದರೇ ಅರ್ಜಿಯೊಂದಿಗೆ 15 ದಿನಗಳಲ್ಲಿ ಅನುಮತಿ ಪಡೆಯಬೇಕು.

Karnataka Governament Release New Guidline for Loudspeakers

* ಯಾರು ಧ್ವನಿವರ್ಧಕ ಅಳವಡಿಸಲು ಅನುಮತಿ ಪಡೆದಿಲ್ಲವೋ ಅವರು ಸ್ವಯಂ ಪ್ರೇರಿತವಾಗಿ ಧ್ವನಿವರ್ಧಕ ತೆರವು ಮಾಡಬೇಕು. 15 ದಿನಗಳಲ್ಲಿಯೇ ತೆರವನ್ನು ಮಾಡಬೇಕು.

* ಸರ್ಕಾರ ನೇಮಿಸುವ ಸಮಿತಿಯು ಲೌಡ್ ಸ್ಪೀಕರ್ ಅಳವಡಿಕೆಯ ಅನುಮತಿ ಬಗ್ಗೆ ತೀರ್ಮಾನವನ್ನು ಕೈಗೊಳ್ಳುತ್ತದೆ. (ಸಮಿತಿಯಲ್ಲಿ ಕಮಿಷನರೇಟ್ ಪ್ರದೇಶದಲ್ಲಿ ಎಸಿಪಿ , ಕಾರ್ಯಪಾಲಕ ಇಂಜಿನಿಯರ್ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರು ಮತ್ತು ಜಿಲ್ಲೆಗಳಲ್ಲಿ ಡಿವೈಎಸ್ಪಿ, ತಹಸೀಲ್ದಾರ್, ಸದಸ್ಯರಾಗಿರುತ್ತಾರೆ)

* ಧ್ವನಿವರ್ಧಕ ವಿಚಾರದಲ್ಲಿ ಸಿಕ್ಕಿಬಿದ್ದರೆ ದಂಡ ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯಡಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

English summary
Azaan vs Hanuman chalisa row: Karnataka govt issued guidelines for loudspeakers. Here is details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X