ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ದಸರಾ, ದೀಪಾವಳಿ ಆಚರಣೆಗೆ ಮಾರ್ಗಸೂಚಿ!

|
Google Oneindia Kannada News

ಬೆಂಗಳೂರು, ಅಕ್ಟೋಬರ್.07: ಕರ್ನಾಟಕದಲ್ಲಿ ಅಕ್ಟೋಬರ್ ನಿಂದ ಎದುರಾಗುವ ಸಾಲು ಸಾಲು ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಕೊರೊನಾವೈರಸ್ ಸೋಂಕಿತ ಹರಡುವಿಕೆ ಭೀತಿ ನಡುವೆ ಸುರಕ್ಷಿತವಾಗಿ ಹಬ್ಬ ಆಚರಿಸಲು ಪ್ರಮಾಣಿಕ ಕಾರ್ಯವಿಧಾನ ಪ್ರಕ್ರಿಯೆ(SOP)ಗಳನ್ನು ಪಟ್ಟಿ ಮಾಡಿದೆ.

"ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಸಾಲು ಸಾಲು ಹಬ್ಬಗಳು ಬರುತ್ತವೆ. ಈ ವೇಳೆ ನಡೆಯುವ ಉತ್ಸವಗಳು ಧಾರ್ಮಿಕ ಪೂಜೆ, ಜಾತ್ರೆಗಳು, ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯ ಮತ್ತು ಮೆರವಣಿಗೆಗಳಿಗಳಲ್ಲಿ ಸಾವಿರಾರು ಜನರು ಸೇರುತ್ತಾರೆ.

ಪ್ರವಾಸಿಗರಿಂದ ಸೋಂಕು ಹರಡದಂತೆ ಮಾರ್ಗಸೂಚಿ: ಸುಧಾಕರ್ಪ್ರವಾಸಿಗರಿಂದ ಸೋಂಕು ಹರಡದಂತೆ ಮಾರ್ಗಸೂಚಿ: ಸುಧಾಕರ್

ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನರನ್ನು ಒಟ್ಟುಗೂಡಿದ ಸಂದರ್ಭಗಳಲ್ಲಿ ಕೊರೊನಾವೈರಸ್ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ಅದನ್ನು ತಡೆಗಟ್ಟುವ ಉದ್ದೇಶದಿಂದ ಕೆಲವು ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ ಎಂದು ರಾಜ್ಯ ಗೃಹ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಥವರು ಮನೆಯಲ್ಲೇ ಇದ್ದರೆ ಹೆಚ್ಚು ಸುರಕ್ಷಿತ

ಇಂಥವರು ಮನೆಯಲ್ಲೇ ಇದ್ದರೆ ಹೆಚ್ಚು ಸುರಕ್ಷಿತ

ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಹಿರಿಯ ನಾಗರಿಕರು, 65 ವರ್ಷಕ್ಕಿಂತ ಮೇಲ್ಪಟ್ಟವರು, ಆರೋಗ್ಯ ಸಮಸ್ಯೆಯನ್ನು ಹೊಂದಿರುವವರು, ಗರ್ಭಿಣಿಯರು, ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿ ಇರುವುದೇ ಹೆಚ್ಚು ಸುರಕ್ಷಿತ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ

ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಡ್ಡಾಯ

ರಾಜ್ಯದಲ್ಲಿ ಹಬ್ಬದ ಪ್ರಯುಕ್ತ "ಮೇಳಗಳು, ರ್ಯಾಲಿಗಳು, ಪ್ರದರ್ಶನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಉತ್ಸವಗಳಿಗೆ ಸಂಬಂಧಿಸಿದ ನಾಟಕಗಳು / ಸಂಗೀತ ಕಚೇರಿಗಳನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಸಂಘಟಕರು ಮತ್ತು ಭಾಗವಹಿಸುವ ಪ್ರತಿಯೊಬ್ಬರ ದೇಹದ ಉಷ್ಣಾಂಶ ತಪಾಸಣೆ ನಡೆಸಲಾಗುತ್ತದೆ. ದೈಹಿಕ ಅಂತರ ಮತ್ತು ನೈರ್ಮಲ್ಯವನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸಂಖ್ಯೆ ಮತ್ತು ಸಮಯದ ಪೂರ್ವ ನಿಗದಿ ಅಗತ್ಯ

ಸಂಖ್ಯೆ ಮತ್ತು ಸಮಯದ ಪೂರ್ವ ನಿಗದಿ ಅಗತ್ಯ

ದಸರಾ ಮತ್ತು ದೀಪಾವಳಿ ಸೇರಿದಂತೆ ಸಾಲು ಸಾಲು ಹಬ್ಬಗಳ ಸಂದರ್ಭಗಳಲ್ಲಿ "ಪ್ರದರ್ಶನಗಳು, ಜಾತ್ರೆಗಳು, ಪೂಜಾ ಪೆಂಡಾಲ್ ಗಳು, ರಾಮ್‌ಲೀಲಾ ಪೆಂಡಾಲ್ ‌ಅಥವಾ ಸಂಗೀತ ಕಚೇರಿ ಮತ್ತು ನಾಟಕಗಳಂತ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ದಿನವಿಡೀ ಅಥವಾ ವಾರಗಟ್ಟಲೇ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಮಯ ಮತ್ತು ಭಾಗವಹಿಸುವವರ ಸಂಖ್ಯೆಯನ್ನು ಪೂರ್ವನಿಗದಿಗೊಳಿಸಿರಬೇಕು. ಮತ್ತು ಹೆಚ್ಚು ಸಂಖ್ಯೆಯನ್ನು ಜನರು ಸೇರದಂತೆ ನಿರ್ಬಂಧಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ.

ಸಾಲು ಸಾಲು ಹಬ್ಬಕ್ಕಾಗಿ ಕೊರೊನಾವೈರಸ್ ಮಾರ್ಗಸೂಚಿ

ಸಾಲು ಸಾಲು ಹಬ್ಬಕ್ಕಾಗಿ ಕೊರೊನಾವೈರಸ್ ಮಾರ್ಗಸೂಚಿ

- ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಪ್ರದರ್ಶನ ನೀಡುವ ಸಿನಿಮಾ, ಸೀರಿಯಲ್ ನಟ-ನಟಿಯರಿಗೂ ಮಾರ್ಗಸೂಚಿ ನಿಯಮಗಳು ಅನ್ವಯಿಸುತ್ತವೆ

- ಕಾರ್ಯಕ್ರಮಗಳ ಸಂಘಟನಾಕಾರರು ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಿಗಾ ವಹಿಸಬೇಕು

- ಮೆರವಣಿಗೆಗಳಲ್ಲಿ ನಿಯಮಿತ ಸಂಖ್ಯೆಯಲ್ಲಿ ಜನರು ಭಾಗವಹಿಸುವುದಕ್ಕೆ ಮಾತ್ರ ಅವಕಾಶ ನೀಡಲಿದ್ದು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು

- ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸಿದ್ದಾರೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಿಲು ಕ್ಯಾಮರಾಗಳ ಅಳವಡಿಕೆ

- ಸಾರ್ವಜನಿಕ ಪ್ರದೇಶಗಳಲ್ಲಿ ಕೆಮ್ಮುವಾಗ, ಸೀನುವಾಗಿ ಕರ್ಚಿಫ್ ನಿಂದ ಬಾಯಿ ಮುಚ್ಚಿಕೊಳ್ಳುವುದು

- ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿರ್ಬಂಧಿಸಲಾಗಿದೆ

- ಕಂಟೇನ್ಮೆಂಟ್ ವಲಯಗಳಿಂದ ಹೊರಗಿರುವ ಪ್ರದೇಶಗಳಲ್ಲಿ ಮಾತ್ರ ಹಬ್ಬದ ಕಾರ್ಯಕ್ರಮಗಳನ್ನುನ ಆಚರಿಸುವುದಕ್ಕೆ ಅನುಮತಿ ನೀಡಲಾಗುತ್ತದೆ

- ಕಂಟೇನ್ಮೆಂಟ್ ವಲಯಗಳಲ್ಲಿ ವಾಸಿಸುವ ಜನರು ಹಬ್ಬದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ

- ಧಾರ್ಮಿಕ ಸ್ಥಳದಲ್ಲಿ ಪ್ರತಿಮೆಗಳನ್ನು, ಮೂರ್ತಿಗಳನ್ನು, ಧಾರ್ಮಿಕ ಗ್ರಂಥಗಳನ್ನು ಮುಟ್ಟುವುದನ್ನು ನಿರ್ಬಂಧಿಸಲಾಗಿದೆ

- ಸಾರ್ವಜನಿಕವಾಗಿ ಪ್ರಸಾದ ಅಥವಾ ಆಹಾರ ವಿತರಿಸುವ ಮತ್ತು ಸ್ವೀಕರಿಸುವ ಸಂದರ್ಭಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು

Recommended Video

Hathras Case : UP ಅತ್ಯಾಚಾರ ಪ್ರಕರಣದ ವರದಿ ಸಿಗೋದು ಇನ್ನಷ್ಟು ತಡವಾಗಬಹುದು | Oneindia Kannada

English summary
Karnataka Govt Issues Guidelines For Festivals To Contain Spread Of Covid-19. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X