ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪರಿಸ್ಥಿತಿ; ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಹೆಚ್ಚಳ

|
Google Oneindia Kannada News

ಬೆಂಗಳೂರು, ಮೇ 14; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ವಿವಿಧ ವರ್ಗದ ಜನರಿಗೆ ಈ ಸಂದರ್ಭದಲ್ಲಿ ತೊಂದರೆಯಾಗುತ್ತಿದೆ. ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ.

ಆಹಾರ, ನಾಗರಿಕ ಸರಬರಾಜು ಇಲಾಖೆ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಧಾವಿಸಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ನೀಡುವ ಅಕ್ಕಿ ಪ್ರಮಾಣವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ.

ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ ಗಂಗಾವತಿಯಿಂದ ಅಕ್ಕಿ ಸಾಗಾಣೆಗೆ ಪ್ರತ್ಯೇಕ ರೈಲು ಮಾರ್ಗ

ಕೋವಿಡ್ ಸಂಕಷ್ಟದ ಸಮಯದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರಾಜ್ಯದ ಬಡವರಿಗೆ ಹಂಚುವ ಪಡಿತರ ವಿತರಣೆಯಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಸಚಿವ ಉಮೇಶ್ ಕತ್ತಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ದೆಹಲಿಯಲ್ಲಿ 2 ತಿಂಗಳು ಉಚಿತ ಪಡಿತರ ಘೋಷಿಸಿದ ಸರ್ಕಾರದೆಹಲಿಯಲ್ಲಿ 2 ತಿಂಗಳು ಉಚಿತ ಪಡಿತರ ಘೋಷಿಸಿದ ಸರ್ಕಾರ

Karnataka Govt Increase Quantity of Rice to BPL Card Holders for May and June Month

ರಾಜ್ಯದಲ್ಲಿ ಪಡಿತರ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದು, ಇಲಾಖೆಯಿಂದ ಪಡಿತರ ಚೀಟಿಯನ್ನು ವಿತರಿಸಲು ಪರಿಶೀಲನೆ ಹಂತದಲ್ಲಿ ಇದ್ದಲ್ಲಿ ಅವರಿಗೆ ಸಹ ಈ ಪ್ರಯೋಜನ ಸಿಗಲಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ: 600 ಕ್ವಿಂಟಾಲ್ ಗೂ ಅಧಿಕ ಅಕ್ಕಿ ವಶಅಕ್ರಮ ಪಡಿತರ ದಾಸ್ತಾನು ಮೇಲೆ ದಾಳಿ: 600 ಕ್ವಿಂಟಾಲ್ ಗೂ ಅಧಿಕ ಅಕ್ಕಿ ವಶ

ಮೇ ಮತ್ತು ಜೂನ್ ತಿಂಗಳಿಗೆ ಪ್ರತಿ ಮಾಹೆಗೆ ಉಚಿತವಾಗಿ 10 ಕೆ. ಜಿ. ಬಿಪಿಎಲ್ ಅರ್ಜಿದಾರರಿಗೆ ಮತ್ತು 10 ಕೆ. ಜಿ. (ಪ್ರತಿ ಕೆ. ಜಿ. ಗೆ ರೂ. 15ರಂತೆ ಸಬ್ಸಿಡಿ ದರದಲ್ಲಿ) ಎ. ಪಿ. ಎಲ್ ಅರ್ಜಿದಾರರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿ ಮೇ ಮತ್ತು ಜೂನ್ ತಿಂಗಳಿಗೆ ಬಿ. ಪಿ. ಎಲ್. ಪಡಿತರ ಚೀಟಿ ಹೊಂದಿರುವ ಪ್ರತಿ ಫಲಾನುಭವಿಗೆ ಪ್ರತಿ ತಿಂಗಳಿಗೆ ರಾಜ್ಯದಿಂದ ನೀಡಲಾಗುತ್ತಿರುವ 5 ಕೆ. ಜಿ. ಆಹಾರ ಧಾನ್ಯದ ಜೊತೆಗೆ 5 ಕೆ. ಜಿ. ಅಕ್ಕಿ ಸೇರಿಸಿ ಒಟ್ಟು 10 ಕೆ. ಜಿ. ಆಹಾರ ಧಾನ್ಯ ನೀಡಲಾಗುತ್ತದೆ.

Recommended Video

ಸಿದ್ದರಾಮಯ್ಯನನ್ನು ಕಿಂಡಲ್ ಮಾಡಿದ ಸಚಿವ ಆರ್ ಅಶೋಕ್ | Oneindia Kannada

ಪ್ರತಿ ಪಡಿತರ ಚೀಟಿಗೆ 2 ಕೆ. ಜಿ. ಗೋಧಿ ಮತ್ತು ಅಂತ್ಯೋದರ ಪಡಿತರ ಚೀಟಿ ಹೊಂದಿರುವವರಿಗೆ ಪ್ರತಿ ಪಡಿತರ ಚೀಟಿಗೆ 35 ಕೆ. ಜಿ. ಆಹಾರ ಧಾನ್ಯದ ಜೊತೆಗೆ 5 ಕೆ. ಜಿ. ಅಕ್ಕಿ ಸೇರಿಸಿ ವಿತರಣೆ ಮಾಡಲು ಸೂಚನೆ ನೀಡಲಾಗಿದೆ.

English summary
Karnataka Govt Increase Quantity of Rice to BPL Card Holders from 5kg to 10kg for May and June Month. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X