ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿವಿ ಚಾನೆಲ್ ಕಾರ್ಯಕ್ರಮಗಳ ಮೇಲೆ ನಿಗಾ ಇಡಲು ಸಮಿತಿ ರಚನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 13 : ಖಾಸಗಿ ಕನ್ನಡ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತು ನಿಗಾ ಇಡಲು ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಕಾರ್ಯಕ್ರಮಗಳ ಕುರಿತು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆಯಾಗಿದೆ.

ಟಿವಿ ಚಾನೆಲ್‌ಗಳಲ್ಲಿ ಅಸಭ್ಯ ಹಾಗೂ ಕೀಳು ಅಭಿರುಚಿ ಕಾರ್ಯಕ್ರಮ ಪ್ರಸಾರ ನಿಯಂತ್ರಿಸಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲಾಗಿದೆ. ಸರ್ಕಾರ ಈ ಕುರಿತು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಖಾ ನೇತೃತ್ವದ ವಿಭಾಗೀಯ ಪೀಠಕ್ಕೆ ಹೇಳಿಕೆ ನೀಡಿದೆ.

ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್ಕೇಬಲ್ ಟಿವಿ ಶುಲ್ಕ ಇಳಿಕೆ; ಕಡಿಮೆ ಬೆಲೆಗೆ ಹೆಚ್ಚು ಚಾನೆಲ್

ವಕೀಲೆ ಗೀತಾ ಮಿಶ್ರಾ ಎಂಬುವವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಟಿವಿಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಕುರಿತು ನಿಗಾ ಇಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿ ರಚನೆ ಮಾಡಬೇಕು ಎಂದು ಮನವಿ ಮಾಡಿದ್ದರು.

ಕೇಬಲ್ ಟಿವಿ ಕಾರ್ಯಮಗಳ ಬಗ್ಗೆ ದೂರು ಕೊಡಬಹುದುಕೇಬಲ್ ಟಿವಿ ಕಾರ್ಯಮಗಳ ಬಗ್ಗೆ ದೂರು ಕೊಡಬಹುದು

Karnataka Govt Forms Committee To Monitor TV Channel

ಜಿಲ್ಲೆಗಳಲ್ಲಿ ರಚನೆ ಮಾಡಿರುವ ಸಮಿತಿಗಳು ಮಾರ್ಚ್ 31ರ ತನಕ ಎಷ್ಟು ಸಭೆಗಳನ್ನು ನಡೆಸಿವೆ. ಕಾರ್ಯಕ್ರಮಗಳ ಕುರಿತು ಎಷ್ಟು ದೂರು ದಾಖಲಾಗಿದೆ. ಈ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದ್ದು, ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿದೆ.

ಅತ್ಯಾಚಾರ ಹೆಚ್ಚಾಗಲು ಟಿವಿ, ಮೊಬೈಲ್ ಕಾರಣ: ಕಾಂಗ್ರೆಸ್ ಸಚಿವಅತ್ಯಾಚಾರ ಹೆಚ್ಚಾಗಲು ಟಿವಿ, ಮೊಬೈಲ್ ಕಾರಣ: ಕಾಂಗ್ರೆಸ್ ಸಚಿವ

ಕೇಬಲ್ ಟಿವಿ ಮತ್ತು ಸ್ಯಾಟಲೈಟ್ ವಾಹಿನಿಗಳಲ್ಲಿ ಪ್ರಸಾರವಾಗುವ ವಿಷಯಗಳ ಬಗ್ಗೆ ದೂರುಗಳನ್ನು ಸಲ್ಲಿಸಲು 24*7 ಸಹಾಯವಾಣಿಯನ್ನು ಸ್ಥಾಪನೆ ಮಾಡಲಾಗಿದೆ. ಕಾರ್ಯಕ್ರಮಗಳ ಬಗ್ಗೆ ಜನರು ದೂರನ್ನು ಸಹ ಸಲ್ಲಿಸಬಹುದು.

ಸಹಾಯವಾಣಿ ಸಂಖ್ಯೆ 080-22028013 ಮತ್ತು 9480841212. ಈ ಮೇಲ್ ಮೂಲಕ ದೂರು ಸಲ್ಲಿಸುವವರು [email protected] ಐಡಿಯನ್ನು ಬಳಕೆ ಮಾಡಬಹುದಾಗಿದೆ.

ಕೇಬಲ್ ಟೆಲಿವಿಷನ್ ನೆಟ್ ವರ್ಕ್‌ (ರೆಗ್ಯುಲೇಷನ್) ನಿಯಮ 1995ರ ಪರಿಚ್ಛೇಧ 6 ಕಾರ್ಯಕ್ರಮ ಸಂಹಿತೆಯ ಉಲ್ಲಂಘನೆ ಕಂಡು ಬಂದಲ್ಲಿ ಜನರು ದೂರುಗಳನ್ನು ಸಲ್ಲಿಸಬಹುದಾಗಿದೆ.

English summary
In a submission Karnataka government said to high court that committee formed in 30 districts to monitor Kannada tv channel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X