ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಲಾಸ್ಮಾ ಥೆರಪಿ; ಪ್ರತ್ಯೇಕಿಸುವ ಪ್ರಕ್ರಿಯೆಗೆ ದರ ನಿಗದಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 04 : ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಪ್ಮಾಸ್ಮಾ ಥೆರಪಿ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪ್ಲಾಸ್ಮಾ ಪ್ರತ್ಯೇಕಿಸುವ ಪ್ರಕ್ರಿಯೆಗೆ ಕರ್ನಾಟಕ ಸರ್ಕಾರ ಶುಲ್ಕವನ್ನು ನಿಗದಿ ಮಾಡಿ ಆದೇಶ ಹೊರಡಿಸಿದೆ.

ಕೋವಿಡ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿ ಪ್ಲಾಸ್ಮಾ ದಾನ ಮಾಡಬಹುದು. ಬೆಂಗಳೂರು ಮಾತ್ರವಲ್ಲದೇ ಜಿಲ್ಲೆಗಳಲ್ಲಿ ಸಹ ಈಗ ಪ್ಮಾಸ್ಮಾ ದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಪ್ಮಾಸ್ಮಾವನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಕೆ ಮಾಡಿಕೊಳ್ಳಲಾಗುತ್ತದೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಪ್ಲಾಸ್ಮಾ ಥೆರಪಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಪ್ಲಾಸ್ಮಾ ಥೆರಪಿ

ಕೋವಿಡ್ ಸೋಂಕಿನಿಂದ ಗುಣಮುಖರಾದವರಿಂದ ಸ್ವಯಂ ಪ್ರೇರಿತ ರಕ್ತದಾನದ ಮೂಲಕ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಿ ಕೋವಿಡ್ ಸೋಂಕು ಹೊಂದಿರುವ ವ್ಯಕ್ತಿಯ ಚಿಕಿತ್ಸೆಗೆ ಬಳಸಲಾಗುತ್ತಿದೆ.

ಪ್ಲಾಸ್ಮಾ ಚಿಕಿತ್ಸೆಯು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿ ಅಲ್ಲ ಪ್ಲಾಸ್ಮಾ ಚಿಕಿತ್ಸೆಯು ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿ ಅಲ್ಲ

Plasma

15/7/2020ರ ಆದೇಶದಂತೆ ಕರ್ನಾಟಕ ಸರ್ಕಾರ ಪ್ಲಾಸ್ಮಾ ದಾನ ಮಾಡಿದ ವ್ಯಕ್ತಿಗೆ ಷೌಷ್ಠಿಕಾಂಶದ ಭತ್ಯೆಯಾಗಿ ರೂ. 5000ಗಳನ್ನು ನೀಡಲಾಗುತ್ತಿದೆ. ದಾನಿಗಳಿಂದ ಪಡೆದ ರಕ್ತದಿಂದ ಪ್ಲಾಸ್ಮಾವನ್ನು ಪ್ರತ್ಯೇಕಿಸಲು ದರವನ್ನು ನಿಗದಿ ಮಾಡಲಾಗಿದೆ.

ಕೋವಿಡ್ ರೋಗಿಗಾಗಿ ಬೆಂಗಳೂರಿನಿಂದ ಶ್ರೀನಗರಕ್ಕೆ ಪ್ಲಾಸ್ಮಾ ರವಾನೆ! ಕೋವಿಡ್ ರೋಗಿಗಾಗಿ ಬೆಂಗಳೂರಿನಿಂದ ಶ್ರೀನಗರಕ್ಕೆ ಪ್ಲಾಸ್ಮಾ ರವಾನೆ!

ಪ್ಲಾಸ್ಮಾವನ್ನು ಪ್ರತ್ಯೇಕಿಸಲು ಬಳಸುವ ಕಿಟ್, ಮಾನವ ಸಂಪನ್ಮೂಲದ ಅಗತ್ಯತೆ ಪರಿಗಣಿಸಿ ಕಾರ್ಯಪಡೆಯ ಅನುಮೋದನೆಯಂತೆ ದರವನ್ನು ನಿಗದಿ ಮಾಡಲಾಗಿದೆ. ಖಾಸಗಿ ಲ್ಯಾಬ್‌ಗಳಲ್ಲಿ ದಾನಿಗಳಿಂದ ಪಡೆದ ರಕ್ತದಿಂದ ಒಂದು ಯುನಿಟ್ ಪ್ಮಾಸ್ಮಾವನ್ನು ಪ್ರತ್ಯೇಕಿಸಲು 7500 ರೂ. ಶುಲ್ಕ ನಿಗದಿ ಮಾಡಲಾಗಿದೆ.

English summary
The Karnataka government fixed rates for plasma processing. Plasma therapy is a medical procedure that uses the blood of a COVID19 recovered patient to create antibodies on those infected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X