ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ಲಾಕ್‌ಡೌನ್: ಸರ್ಕಾರಿ ನೌಕರರ ಗಳಿಕೆ ರಜೆಗೆ ಕತ್ತರಿ

|
Google Oneindia Kannada News

ಬೆಂಗಳೂರು, ಮೇ 06: ದೇಶದಲ್ಲಿ ಮೂರನೇ ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಕಳೆದ ಒಂದೂವರೆ ತಿಂಗಳುಗಳಿಂದ ಬಹಳಷ್ಟು ಸರ್ಕಾರಿ ನೌಕರರ ಸಿಬ್ಬಂದಿ ಕೂಡ ಲಾಕ್‌ಡೌನ್‌ನಿಂದ ಮನೆಯಲ್ಲಿದ್ದಾರೆ. ತುರ್ತು ಸೇವೆಗಳಲ್ಲಿರುವ ನೌಕರರಿಗೆ ಲಾಕ್‌ಡೌನ್ ಸಂದರ್ಭದಲ್ಲಿ ಕೆಲಸ ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಗಳಿಕೆ ರಜೆಗೆ ಸರ್ಕಾರ ಕತ್ತರಿಹಾಕಿದೆ. ಸರ್ಕಾರಿ ನೌಕರರು ಗಳಿಕೆ ರಜೆಯನ್ನು ಸಂಬಳವಾಗಿ ಪರಿವರ್ತಿಸಲು ಇರುವ ಅವಕಾಶ ರದ್ದುಪಡಿಸಿದೆ.

ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ 2020ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನು ಬದಲಾಯಿಸಿ ನಗದೀಕರಣ ಪಡೆಯುವ ಸೌಲಭ್ಯವನ್ನು ರದ್ದುಗೊಳಿಸಿ ಆದೇಶಿಸಿದೆ.

Karnataka Govt Cancelled Govt Employees Opportunity to Convert Paid Leaves Into Salary

ಲಾಕ್‌ಡೌನ್‌:ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ತಡೆ ಹಿಡಿದ ಸರ್ಕಾರ ಲಾಕ್‌ಡೌನ್‌:ರಾಜ್ಯ ಸರ್ಕಾರಿ ನೌಕರರ ತುಟ್ಟಿ ಭತ್ಯೆ ತಡೆ ಹಿಡಿದ ಸರ್ಕಾರ

ಆದರೆ, ಜನವರಿ 2020 ರಿಂದ ಡಿಸೆಂಬರ್ 2020 ರಲ್ಲಿ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು, ಅಧಿಕಾರಿಗಳು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ . ಈ ಆದೇಶವು ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರಿಗೂ ಅನ್ವಯಿಸಲಿದೆ ಎಂದು ಆದೇಶದಲ್ಲಿದೆ.

English summary
Coronavrus Lockdown : Karnataka Govt canceled the government employees opportunity to turn into a paid leave in to salary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X