ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಕ್ಕೆ ಒಂದು ವರ್ಷ; ಶಾಸಕರಿಗೆ ಕೊಡುಗೆ ಕೊಟ್ಟ ಬಿಎಸ್‌ವೈ

|
Google Oneindia Kannada News

ಬೆಂಗಳೂರು, ಜುಲೈ 27 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರಿಗೆ ಮುಖ್ಯಮಂತ್ರಿಗಳು ಕೊಡುಗೆಯೊಂದನ್ನು ನೀಡಿದ್ದಾರೆ.

Recommended Video

Sonu Sood gifts tractor for Andhra Pradesh farmer | Oneindia Kannada

ಸೋಮವಾರ 24 ಶಾಸಕರನ್ನು ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಇವರಲ್ಲಿ ಹಲವು ಶಾಸಕರು ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು.

ರಾಜ್ಯ ಸರ್ಕಾರಕ್ಕೆ ಒಂದು ವರ್ಷ; ಯಾರಿಗೂ ಇಲ್ಲ ಹರ್ಷ! ರಾಜ್ಯ ಸರ್ಕಾರಕ್ಕೆ ಒಂದು ವರ್ಷ; ಯಾರಿಗೂ ಇಲ್ಲ ಹರ್ಷ!

ತಕ್ಷಣದಿಂದ ಜಾರಿಗೆ ಬರುವಂತೆ 24 ಶಾಸಕರನ್ನು ನಿಗಮ/ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕೆಎಸ್ಆರ್‌ಟಿಸಿ, ಗೃಹ ಮಂಡಳಿ, ಎಂಎಸ್‌ಐಎಲ್ ಸೇರಿದಂತೆ ಪ್ರಮುಖ ನಿಗಮ/ಮಂಡಳಿಗಳಿಗೆ ನೇಮಕಾತಿ ನಡೆದಿದೆ.

ಬಿಜೆಪಿ ಸರ್ಕಾರಕ್ಕೆ ಒಂದು ವರುಷ: ಡಿಸಿಎಂ ಆತ್ಮಾವಲೋಕನ!ಬಿಜೆಪಿ ಸರ್ಕಾರಕ್ಕೆ ಒಂದು ವರುಷ: ಡಿಸಿಎಂ ಆತ್ಮಾವಲೋಕನ!

ಹಿಂದೆ ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಕೆಲವು ಶಾಸಕರಿಗೆ ಈಗ ನಿಗಮ/ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಶಾಸಕರ ಕ್ಷೇತ್ರ, ಜಿಲ್ಲೆಗಳನ್ನು ನಮೂದಿಸಿ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರಕ್ಕೆ ವರ್ಷ: ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಸಜ್ಜು? ಸರ್ಕಾರಕ್ಕೆ ವರ್ಷ: ಮಹತ್ವದ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಸಜ್ಜು?

ನಿಗಮ/ಮಂಡಳಿ ಅಧ್ಯಕ್ಷರ ನೇಮಕ

ನಿಗಮ/ಮಂಡಳಿ ಅಧ್ಯಕ್ಷರ ನೇಮಕ

* ಆರಗ ಜ್ಞಾನೇಂದ್ರ (ತೀರ್ಥಹಳ್ಳಿ) : ಕರ್ನಾಟಕ ಗೃಹ ಮಂಡಳಿ

* ಎಂ. ಚಂದ್ರಪ್ಪ (ಹೊಳಲ್ಕೆರೆ) : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು

*ನರಸಿಂಹ ನಾಯಕ್ (ಶೋರಾಪುರ) :ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ಬೆಂಗಳೂರು

* ಎಂ. ಪಿ. ಕುಮಾರಸ್ವಾಮಿ (ಮೂಡಿಗೆರೆ) : ಕರ್ನಾಟಕ ಮಾರುಕಟ್ಟೆ ಕನ್ಸಲ್ಟೆಂಟ್ಸ್ ಮತ್ತು ಏಜನ್ಸಿಸ್ ಲಿಮಿಟೆಡ್, ಬೆಂಗಳುರು

* ಎ. ಎಸ್. ಪಾಟೀಲ್ ನಡಹಳ್ಳಿ (ಮುದ್ದೆಬಿಹಾಳ) : ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಬೆಂಗಳೂರು

24 ಶಾಸಕರ ನೇಮಕ

24 ಶಾಸಕರ ನೇಮಕ

(ಸಾಗರ) ಹೆಚ್. ಹಾಲಪ್ಪ, (ಚನ್ನಗಿರಿ) ಕೆ. ಮಾಡಾಳ್ ವಿರೂಪಾಕ್ಷಪ್ಪ, (ಚಿತ್ರದುರ್ಗ) ಜಿ. ಹೆಚ್. ತಿಪ್ಪಾರೆಡ್ಡಿ, (ದೇವದುರ್ಗ) ಕೆ. ಶಿವನಗೌಡ ನಾಯಕ್, (ರೋಣ) ಕಳಕಪ್ಪ ಗುರುಶಾಂತಪ್ಪ ಬಂಡಿ, (ಗಂಗಾವತಿ) ಪರಣ್ಣ ಈಶ್ವರಪ್ಪ ಮುನವಳ್ಳಿ, (ತೇರದಾಳ) ಸಿದ್ದು ಸವದಿ ನೇಮಕಗೊಂಡಿದ್ದಾರೆ.

ಶಾಸಕರಿಗೆ ನಿಗಮ/ಮಂಡಳಿ

ಶಾಸಕರಿಗೆ ನಿಗಮ/ಮಂಡಳಿ

* ಪ್ರೀತಮ್ ಜಿ. ಗೌಡ (ಹಾಸನ) : ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ

* ರಾಜ್ ಕುಮಾರ್ ಪಾಟೀಲ್ ತೇಲ್ಕೂರ್ (ಸೇಡಂ) : ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ. ಕೇಂದ್ರ ಕಚೇರಿ ಕಲಬುರಗಿ

* ದತ್ತಾತ್ರೇಯ ಚಂದ್ರಶೇಖರ್ ಪಾಟೀಲ್ ರೇವೂರ (ಗುಲ್ಬರ್ಗ ದಕ್ಷಿಣ) : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ, ಕಲಬುರಗಿ

* ಶಂಕರ್ ಪಾಟೀಲ್ ಮುನೇನಕೊಪ್ಪ (ನವಲಗುಂದ) : ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ

* ಹೆಚ್. ನಾಗೇಶ್ (ತಿಪಟೂರು) : ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

ಯಾವ-ಯಾವ ಶಾಸಕರು?

ಯಾವ-ಯಾವ ಶಾಸಕರು?

ಎಸ್.‌ ವಿ. ರಾಮಚಂದ್ರ (ಜಗಳೂರು), ಓಲೇಕಾರ್ ನೆಹರು ಚನ್ನಬಸಪ್ಪ (ಹಾವೇರಿ), ಐಹೊಳೆ ದುರ್ಯೋಧನ ಮಹಾಲಿಂಗಪ್ಪ (ರಾಯಭಾಗ), ಲಾಲಾಜಿ ಆರ್. ಮೆಂಡನ್ (ಕಾಪು), ಬಸವರಾಜ್ ದಡೇಸೂರ್ (ಕನಕಗಿರಿ), ಡಾ. ಎಸ್.ಶಿವರಾಜ್ ಪಾಟೀಲ್ (ರಾಯಚೂರು), ಸಿ. ಎಸ್.ನಿರಂಜನ್ ಕುಮಾರ್ (ಗುಂಡ್ಲುಪೇಟೆ).

English summary
Karnataka chief minister B. S. Yediyurappa appointed 24 MLAs for board and corporations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X