ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ 6 ಜಿಲ್ಲೆಗಳು ಅನ್‌ಲಾಕ್; ಸರ್ಕಾರದ ಹೊಸ ಆದೇಶ

|
Google Oneindia Kannada News

ಬೆಂಗಳೂರು, ಜೂನ್ 21; ಕರ್ನಾಟಕ ಸರ್ಕಾರ ಅನ್‌ಲಾಕ್ 2.0 ಪಟ್ಟಿಗೆ 6 ಜಿಲ್ಲೆಗಳನ್ನು ಸೇರ್ಪಡೆಗೊಳಿಸಿದ ಆದೇಶ ಹೊರಡಿಸಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ರಾಜ್ಯದಲ್ಲಿ ಅನ್‌ಲಾಕ್ ಜಾರಿಗೆ ಬಂದಿದೆ.

ಸೋಮವಾರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ ಜಿಲ್ಲೆಗಳನ್ನು ಅನ್‌ಲಾಕ್‌ ಪಟ್ಟಿಗೆ ಸೇರಿಸಲಾಗಿದೆ.

ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ! ಕೊರೊನಾ ಅನ್ ಲಾಕ್ 2.0: ರಾಜ್ಯದಲ್ಲಿ ಷರತ್ತು ಬದ್ಧ ಬಸ್ ಸಂಚಾರಕ್ಕೆ ಅವಕಾಶ!

ಜೂನ್ 19ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅನ್‌ಲಾಕ್ ಘೋಷಣೆ ಮಾಡಿದ್ದರು. ಕೋವಿಡ್ ಪಾಸಿಟಿವಿಟಿ ದರ ಶೇ 5ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಜುಲೈ 5ರ ತನಕ ಲಾಕ್‌ಡೌನ್ ನಿಯಮ ಮುಂದುವರೆಯಲಿದೆ ಎಂದು ಹೇಳಿದ್ದರು.

 Karnataka Govt Announced Unlock In 6 Districts

ಆದರೆ ಜನಪ್ರತಿನಿಧಿಗಳ ಒತ್ತಾಯಕ್ಕೆ ಮಣಿದು ಸೋಮವಾರ 6 ಜಿಲ್ಲೆಗಳಲ್ಲಿ ಅನ್‌ಲಾಕ್‌ ಘೋಷಣೆ ಮಾಡಲಾಗಿದೆ. ಸೋಮವಾರದಿಂದ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾಗಿದೆ.

ಕೆಎಸ್ಆರ್‌ಟಿಸಿ ಮಾಸಿಕ ಬಸ್ ಪಾಸ್; ಮಹತ್ವದ ಘೋಷಣೆ ಕೆಎಸ್ಆರ್‌ಟಿಸಿ ಮಾಸಿಕ ಬಸ್ ಪಾಸ್; ಮಹತ್ವದ ಘೋಷಣೆ

ಅನ್‌ಲಾಕ್‌ ಘೋಷಣೆಯಾದ ಜಿಲ್ಲೆಗಳಲ್ಲಿ ಎಲ್ಲಾ ಅಂಗಡಿಗಳನ್ನು ಸಂಜೆ 5 ಗಂಟೆಯ ತನಕ ತೆರೆಯಲು ಅವಕಾಶ ನೀಡಲಾಗಿದೆ. ಎಸಿ ಇಲ್ಲದ ಹೋಟೆಲ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲಿ ಶೇ 50ರಷ್ಟು ಸಾಮರ್ಥ್ಯದೊಂದಿಗೆ ಕುಳಿತು ತಿನ್ನಲು ಅವಕಾಶ ನೀಡಲಾಗಿದೆ.

Recommended Video

ಹಳೆ 25ಪೈಸಾ ನಾಣ್ಯ ಇದ್ಯಾ , ಹಾಗಾದ್ರೆ ನಿಮಗೆ ಸಿಹಿ ಸುದ್ದಿ!! | Oneindia Kannada

ಅನ್‌ಲಾಕ್‌ಗೊಂಡ ಜಿಲ್ಲೆಗಳು; ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ, ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ, ಬೀದರ್, ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ವಿಜಯಪುರ.

English summary
Karnataka government announced unlock in Udupi, Bengaluru Rural, Shivamogga, Ballari, Chitradurga and Vijayapura district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X