ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ ಕರ್ಫ್ಯೂ ಸಮಯದಲ್ಲಿ ಬಸ್, ಆಟೋ,ಕ್ಯಾಬ್ ಓಡಾಟಕ್ಕೆ ಅನುಮತಿ

|
Google Oneindia Kannada News

ಬೆಂಗಳೂರು, ಜೂನ್ 5: ಕರ್ಫ್ಯೂ ಇದ್ದಾಗಲೂ ಬಸ್,ಆಟೋ, ಕ್ಯಾಬ್ ಓಡಾಟಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.

Recommended Video

ಶಾಲೆ ಆರಂಭವಾದ ಒಂದೇ ವಾರದಲ್ಲಿ 70 ಮಕ್ಕಳಿಗೆ ಕೊರೊನಾ ಸೋಂಕು | Oneindia Kannada

ಕೊರೊನಾ ವೈರಸ್ ದೇಶಾದ್ಯಂತ ಹಬ್ಬುತ್ತಿದ್ದಂತೆ ಲಾಕ್‌ಡೌನ್ ಜಾರಿಮಾಡಲಾಗಿತ್ತು. ಇದೀಗ ಹಂತ ಹಂತವಾಗಿ ಲಾಕ್‌ಡೌನ್ ಸ್ಥಗಿತಗೊಳಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಸಂಜೆ 7 ಗಂಟೆಯ ನಂತರ ಕರ್ಫ್ಯೂ ಜಾರಿಮಾಡಲಾಗಿತ್ತು. ಹಾಗೆಯೇ ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್‌ಡೌನ್ ಘೋಷಿಸಲಾಗಿತ್ತು.

ಲಾಕ್ ಡೌನ್ 5.0; 9 ರಿಂದ 5 ಗಂಟೆ ತನಕ ದೇಶಾದ್ಯಂತ ಕರ್ಫ್ಯೂಲಾಕ್ ಡೌನ್ 5.0; 9 ರಿಂದ 5 ಗಂಟೆ ತನಕ ದೇಶಾದ್ಯಂತ ಕರ್ಫ್ಯೂ

ಸಂಜೆ 7 ಗಂಟೆಯ ಬಳಿಕ ಬಸ್ ಆಗಲಿ, ಕ್ಯಾಬ್ ಆಗಲಿ, ಸ್ವಂತ ವಾಹನಗಳಲ್ಲಿಯೂ ಸಂಚರಿಸುವಂತಿರಲಿಲ್ಲ, ಭಾನುವಾರ ಕೂಡ ಅಗತ್ಯ ವಸ್ತುಗಳ ಖರೀದಿ ಹೊರತುಪಡಿಸಿ ಇನ್ಯಾವ ಕೆಲಸಗಳಿಗೂ ತೆರಳುವಂತಿರಲಿಲ್ಲ.

Karnataka Govt Allows Buses Autos Cabs To Operate During Night Curfew Hours

ಆದರೆ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಕರ್ಫ್ಯೂ ಸಂದರ್ಭದಲ್ಲಿ ಕೂಡ ಬಸ್, ಕ್ಯಾಬ್, ಆಟೋಗಳು ಸಂಚರಿಸಬಹುದು ಎಂದು ತಿಳಿಸಿದೆ. ಭಾನುವಾರ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿತ್ತು. ಬಸ್ ಸಂಚಾರ ಇರಲಿಲ್ಲ. ನಗರದ ಪ್ರಮುಖ ರಸ್ತೆಗಳನ್ನು ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಿದ್ದರು.

ಬ್ಯೂಟಿ ಪಾರ್ಲರ್ ಸಲೂನ್, ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿ, ಗಾರ್ಮೆಂಟ್ಸ್ , ಆಟೋ, ಟ್ಯಾಕ್ಸಿ, ಕ್ಯಾಬ್, ಖಾಸಗಿ ವಾಹನಗಳ ಸಂಚಾರ, ಬೇರೆ ಜಿಲ್ಲೆಗಳಿಗೂ ಸಂಚಾರಕ್ಕೆ ಸಮ್ಮತಿ ಇರಲಿಲ್ಲ. ಈಗ ಕ್ರಮೇಣವಾಗಿ ಒಂದೊಂದಕ್ಕೆ ಅನುಮತಿ ನೀಡಲಾಗುತ್ತಿದೆ.

ಕರ್ನಾಟಕದಲ್ಲಿ 4,063 ಕೊರೊನಾ ಸೋಂಕಿತ ಪ್ರಕರಣಗಳಿವೆ, 1514 ಮಂದಿ ಗುಣಮುಖರಾಗಿದ್ದಾರೆ, 53 ಮಂದಿ ಇದುವರೆಗೂ ಮೃತಪಟ್ಟಿದ್ದಾರೆ.

English summary
During Curfew Hours Karnataka Government allows Buses, autos, cabs to Operate in Bengaluru and Many other places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X