ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಕೋವಿಡ್ ರೋಗಿಯ ಚಿಕಿತ್ಸೆಗೆ 3 ಹೊಸ ಔಷಧಿ ಬಳಕೆ

|
Google Oneindia Kannada News

ಬೆಂಗಳೂರು, ಮೇ 12; ಕರ್ನಾಟಕದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರ್ಕಾರ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಹೊಸ ಔಷಧಿಗಳನ್ನು ಬಳಕೆ ಮಾಡಲು ಅನುಮತಿ ನೀಡಿದೆ. ಈಗ ಬಳಕೆ ಮಾಡುತ್ತಿರುವ ಔಷಧಗಳ ಜೊತೆ ಇವುಗಳನ್ನು ಬಳಸಲಾಗುತ್ತದೆ.

ಸರ್ಕಾರ ಈಗಾಗಲೇ ಸಿಡಿಎಸ್‌ಸಿಓ ಅನುಮತಿ ನೀಡಿರುವ ಹೊಸ ಔಷಧಗಳನ್ನು ಬಳಕೆ ಮಾಡಲು ಒಪ್ಪಿಗೆ ಕೊಟ್ಟಿದೆ. ಇದರಲ್ಲಿ ಬಾರಿಸಿಟಿನಿಬ್ 1 ಎಂಜಿ, 2 ಎಂಜಿ ಮತ್ತು 4 ಎಂಜಿ ಔಷಧಿ ಸಹ ಸೇರಿದೆ.

ಕೋವಿಡ್; ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಕೋವಿಡ್; ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ

ಈಗಾಗಲೇ ಬಳಕೆ ಮಾಡುತ್ತಿರುವ ರೆಮ್ಡೆಸಿವಿರ್ ಜೊತೆಗೆ ಬಾರಿಸಿಟಿನಿಬ್ ಬಳಕೆ ಮಾಡಲಾಗುತ್ತದೆ. ಇದನ್ನು ನೇರವಾಗಿ ಬಳಕೆ ಮಾಡಬಹುದು ಇಂಜೆಕ್ಷನ್ ರೂಪದಲ್ಲಿ ನೀಡಲಾಗುವುದಿಲ್ಲ. ಮೂರು ದಿನಗಳ ಹಿಂದೆ ಆಕ್ಸಿಜನ್ ಬೆಡ್‌ನಲ್ಲಿರುವ ರೋಗಿಗಳಿಗೆ ಇದನ್ನು ನೀಡಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೊನಾ ಸೋಂಕಿಗೆ ಉಚಿತ ಚಿಕಿತ್ಸೆ ನೀಡಿಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೊನಾ ಸೋಂಕಿಗೆ ಉಚಿತ ಚಿಕಿತ್ಸೆ ನೀಡಿ

Karnataka Govt Adds New Medicines To The Covid-19 Treatment Protocol

ಕೋವಿಡ್ ಸೋಂಕಿತ ರೋಗಿಗಳಿಗೆ ಬಾರಿಸಿಟಿನಿಬ್ ಅನ್ನು ದಿನಕ್ಕೆ ಒಂದರಂತೆ 14 ದಿನಗಳ ಕಾಲ ನೀಡಲಾಗುತ್ತದೆ. ಇದರಿಂದ ಆಕ್ಸಿಜನ್ ಮೇಲಿನ ಅವಲಂಬನೆ ಕಡಿಮೆಯಾಗಲಿದೆ ಎಂದು ಪ್ರಾಥಮಿಕವಾಗಿ ತಿಳಿದುಬಂದಿದೆ. ಇದರ ಜೊತೆಗೆ ರಿಜೆನೆರೊನ್ ಬಳಕೆಗೂ ಒಪ್ಪಿಗೆ ಕೊಡಲಾಗಿದೆ.

ಕೋವಿಡ್ 19ಕ್ಕೆ ಚಿಕಿತ್ಸೆ ಪ್ಲಾಸ್ಮಾ ಹುಡುಕಾಟ ಇಲ್ಲಿವೆ Helplines ಕೋವಿಡ್ 19ಕ್ಕೆ ಚಿಕಿತ್ಸೆ ಪ್ಲಾಸ್ಮಾ ಹುಡುಕಾಟ ಇಲ್ಲಿವೆ Helplines

ಡಿಆರ್‌ಡಿಓ ಔಷಧ; ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಕೆ ಮಾಡಲು ಅನುಮತಿ ನೀಡಲಾಗಿದೆ. 2-ಡಯಾಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಬಳಕೆಗೆ ಈಗಾಗಲೇ ಭಾರತೀಯ ಔಷಧ ಮಹಾನಿಯಂತ್ರಕರು ಅನುಮತಿ ಕೊಟ್ಟಿದ್ದಾರೆ.

2-ಡಿಜಿ ಔಷಧಿ ಬಳಕೆಯಿಂದ ಸೋಂಕಿತರು ವೇಗವಾಗಿ ಗುಣಮುಖರಾಗಿರುವುದು ಕ್ಲಿನಿಕಲ್ ಟ್ರಯಲ್‌ಗಳಲ್ಲಿ ಸಾಬೀತಾಗಿದೆ. ಇದರಿಂದ ವೈದ್ಯಕೀಯ ಆಮ್ಲಜನಕ ಬಳಕೆಯೂ ಕಡಿಮೆಯಾಗಲಿದೆ ಎಂದು ಡಿಜಿಸಿಎ ಹೇಳಿದೆ.

Recommended Video

ಕೊರೊನಾದಿಂದ ಗುಣಮುಖರಾದ ಮೇಲೆ ಟೂತ್ ಬ್ರಶ್ ಬದಲಿಸಲೇಬೇಕು,ಯಾಕೆ ಗೊತ್ತಾ? | Oneindia Kannada

ಪುಡಿಯ ರೂಪದಲ್ಲಿರುವ 2-ಡಿಜಿ ಔಷಧವನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದಾಗಿದೆ. ಈ ಔಷಧಿ ಸೋಂಕು ತಗುಲಿ ಆಸ್ಪತ್ರೆ ಸೇರಿದ ರೋಗಿಗಳು ಶೀಘ್ರವಾಗಿ ಗುಣಮುಖರಾಗಲು ಸಹಾಯ ಮಾಡುತ್ತದೆ.

English summary
Karnataka government added new medicines to the COVID treatment protocol. Inducing Baricitinib tablets and 2-deoxy-D-glucose (2-DG).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X