ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರಿಂದ ಹಿಂದಿಯಲ್ಲಿ ಭಾಷಣ

|
Google Oneindia Kannada News

ಬೆಂಗಳೂರು, ಜ.29 : ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ. ಜಯಚಂದ್ರ ಅವರು ಹೇಳಿದ್ದಾರೆ.

ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಫೆಬ್ರವರಿ 2ರಿಂದ ಆರಂಭವಾಗಲಿದ್ದು, ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ರೂಢಿಯಂತೆ ಸರ್ಕಾರ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಭಾಷಣ ಸಿದ್ಧಪಡಿಸಿ ರಾಜಭವನಕ್ಕೆ ಸಲ್ಲಿಸುತ್ತಿತ್ತು. ಆದರೆ, ಈ ಬಾರಿ ಹಿಂದಿಯಲ್ಲಿ ಭಾಷಣ ಸಲ್ಲಿಸಲಾಗುತ್ತದೆ. [ಕರ್ನಾಟಕದ ಪ್ರಥಮ ಪ್ರಜೆಗಳ ಪಟ್ಟಿ 1956-2014]

Vajubhai Vala

ವಿಧಾನಸೌಧದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟಿ.ಬಿ.ಜಯಚಂದ್ರ ಅವರು, ಹಿಂದಿಯಲ್ಲಿ ಭಾಷಣ ಸಿದ್ಧಪಡಿಸಿಕೊಡುವಂತೆ ರಾಜ್ಯಪಾಲರು ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು. ಇದೇ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಸಿದ್ಧಪಡಿಸುವಂತೆ ಸೂಚನೆ ಬಂದಿದೆ. ಹಿಂದಿಗೆ ತರ್ಜುಮೆ ಮಾಡಿಸಿಕೊಡಲು ಸಿದ್ಧತೆ ನಡೆಸಲಾಗಿದೆ ಎಂದರು. [ರಾಜ್ಯಪಾಲ ವಜುಭಾಯಿ ವಾಲಾ ಪರಿಚಯ]

ಮೊದಲ ಬಾರಿ ಹಿಂದಿ ಭಾಷಣ : ಕರ್ನಾಟಕದ ಮೊದಲನೇ ರಾಜ್ಯಪಾಲ ಜಯಚಾಮರಾಜ ಒಡೆಯರ್ ಮಾತ್ರ ಕನ್ನಡಿಗರಾಗಿದ್ದರು. ನಂತರ ಬಂದ ರಾಜ್ಯಪಾಲರು ಕನ್ನಡೇತರರು. ಆದ್ದರಿಂದ ಅವರೆಲ್ಲರೂ ಇಂಗ್ಲಿಷ್‌ನಲ್ಲಿಯೇ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದ್ದರು. ಈ ಬಾರಿ ಹಿಂದಿಯಲ್ಲಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. [ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು]

ಕರ್ನಾಟಕದ ರಾಜ್ಯಪಾಲರಾಗಿದ್ದ ಉತ್ತರ ಭಾರತ ಮೂಲದ ಹಲವರು ಹಿಂದಿಯನ್ನು ಬಳಸದೇ ಇಂಗ್ಲಿಷ್‌ನಲ್ಲಿಯೇ ಭಾಷಣ ಮಾಡಿದ್ದರು. ಇದೇ ಮೊದಲ ಬಾರಿಗೆ ಗುಜರಾತ್ ಮೂಲದವರಾದ ವಜೂಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಲಿದ್ದಾರೆ.

ಅಂದಹಾಗೆ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನ ಫೆಬ್ರವರಿ 2ರಿಂದ ಆರಂಭವಾಗಲಿದ್ದು, ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲಾ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ 13ರ ವರೆಗೂ ಅಧಿವೇಶನ ನಡೆಯಲಿದೆ.

English summary
Governor Vajubhai Vala will address a joint session of the Karnataka Legislature on February 2 in Hindi, said Minister for law, justice TB Jayachandra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X