ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಭಾಷೆ ಕಲಿಕೆ ಹಾದಿಯಲ್ಲಿ ಹೊರಟ ರಾಜ್ಯಪಾಲ ಥಾವರ್‌ಚಂದ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಭಾರತದ ಯಾವುದೇ ರಾಜ್ಯವಿರಲಿ ಅಲ್ಲಿನ ಸ್ಥಳೀಯ ಭಾಷೆಗೆ ನೀಡಬೇಕಾದ ಪ್ರಾಮುಖ್ಯತೆ ನೀಡಲೇಬೇಕು ಎಂದು ಹೇಳುವ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇದೀಗ ಕನ್ನಡ ಭಾಷೆ ಕಲಿಯುತ್ತಿದ್ದಾರೆ.

ರಾಜ್ಯದ ರಾಜ್ಯಪಾಲರಾಗಿ ಭಾಷೆಯ ಅನುಷ್ಠಾನದ ಪ್ರಸ್ತಾಪ ಬಂದರೆ ಯಾವುದೇ ಸಂಶಯವಿಲ್ಲದೇ ಕನ್ನಡವೇ ಸಾರ್ವಭೌಮ ಎಂಬ ನಿಲುವು ನನಗಿದೆ ಎಂದು ಗೆಹ್ಲೋಟ್ ಹೇಳಿದ್ದರು.

ಇದೇ ವರ್ಷ ಜುಲೈ ತಿಂಗಳಿನಲ್ಲಿ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿ ಗೆಹ್ಲೋಟ್ ಕನ್ನಡ ಕಲಿಕೆ ಆಸಕ್ತಿ ತೋರಿದ್ದಾರೆ, ಅದಕ್ಕಾಗಿ ಕನ್ನಡ ನಿಘಂಟನ್ನು ಕೂಡ ಖರೀದಿಸಿದ್ದಾರೆ.

Karnataka Governor Thawarchand Gehlot Started Learning Kannada Language

ಕರ್ನಾಟಕದಲ್ಲಿ ಟ್ವಿಟ್ಟರ್ ಖಾತೆ ಹೊಂದಿರುವ ಮೊದಲ ರಾಜ್ಯಪಾಲರು ಇವರಾಗಿದ್ದು, ಹಾಗೆಯೇ ಅವರು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಕನ್ನಡದಲ್ಲೇ ಟ್ವೀಟ್ ಮಾಡುತ್ತಿರುವುದು ಸಂತಸದ ವಿಷಯ.

ರಾಜಭವನದ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿತ್ಯ ಅವರಿಗೆ ಹೊಸ ಶಬ್ದಗಳು ಮತ್ತು ವಾಕ್ಯ ರಚನೆ ಕುರಿತು ಕನ್ನಡ ಕಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಕರ್ನಾಟಕದ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನದಲ್ಲಿ ನಮ್ಮ ಸಹಕಾರ ಮತ್ತು ಕನ್ನಡಿಗರ ತಾರ್ಕಿಕ ಸಮಸ್ಯೆಗಳಾಗಿ ಉಳಿದಿರುವ ಉದ್ಯೋಗದಲ್ಲಿ ಸ್ಥಳೀಯ ಕನ್ನಡಿಗರಿಗೆ ಆದ್ಯತೆ, ಶಿಕ್ಷಣ ವಲಯದಲ್ಲಿ ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮದ ಸಂಪೂರ್ಣ ಅನುಷ್ಠಾನ, ತಂತ್ರಜ್ಞಾನದಲ್ಲಿ ಕನ್ನಡ ತಂತ್ರಾಂಶಗಳ ಆಶವಿಷ್ಕಾರ ಹಾಗೂ ಬಳಕೆ ಇನ್ನೂ ಮುಂತಾದ ಮೂಲಭೂತ ಬೇಡಿಕೆಗಳುಳ್ಳ ಮನವಿಯನ್ನು ಸಲ್ಲಿಸಿ, ಕನ್ನಡದ ಅಸ್ಮಿತೆಯ ಉಳಿವಿಗೆ ಪ್ರಾಧಿಕಾರದ ಕಾರ್ಯಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಲ್ಲಬೇಕೆಂದು ಮನವಿ ಸಲ್ಲಿಸಲಾಗಿತ್ತು ಅದಕ್ಕೆ ಮನಃಪೂರ್ತಿಯಾಗಿ ಗೆಹ್ಲೋಟ್ ಒಪ್ಪಿಕೊಂಡಿದ್ದರು.

ಈ ಮೊದಲು ರಾಜ್ಯಪಾಲರಾಗಿದ್ದ ವಜುಭಾಯಿ ವಾಲಾ ಅವರು ಅಧಿವೇಶನದಲ್ಲಿ ಭಾಷಣ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಹಿಂದಿಯಲ್ಲೇ ಭಾಷಣ ಮಾಡುತ್ತಿದ್ದರು. ಅಲ್ಲದೇ, ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾಡುತ್ತಿದ್ದ ಭಾಷಣ ಮೊದಲು ಇಂಗ್ಲಿಷ್ ಹಾಗೂ ಕನ್ನಡದಲ್ಲಿರುತ್ತಿತ್ತು. ವಾಲಾ ಬಂದ ಬಳಿಕ ಹಿಂದಿಯಲ್ಲಿ ಮುದ್ರಿತವಾದ ಭಾಷಣದ ಪ್ರತಿ ನೀಡುವ ಪದ್ಧತಿ ಜಾರಿಗೆ ಬಂದಿತ್ತು.

ಅದಕ್ಕೂ ಮೊದಲು ರಾಜ್ಯಪಾಲರಾಗಿದ್ದ ಎಚ್‌ಆರ್ ಭಾರದ್ವಾಜ್ ಅವರು, ಕನ್ನಡ ಕಲಿಯುವುದಾಗಿ ಹೇಳಿದ್ದರು, ಆದರೆ ಕಲಿತಿರಲಿಲ್ಲ. ರಾಜ್ಯಪಾಲರಾಗಿದ್ದ ವಿಎಸ್ ರಮಾದೇವಿ ಕನ್ನಡದಲ್ಲಿ ಮಾತನಾಡುತ್ತಿದ್ದರು.

ಕನ್ನಡ-ಹಿಂದಿ, ಇಂಗ್ಲಿಷ್ -ಕನ್ನಡ ನಿಘಂಟುಗಳ ಜತೆಗೆ ಕಲಿಕೆಗೆ ಅನುಕೂಲವಾಗುವ ಪುಸ್ತಕಗಳನ್ನು ರಾಜ್ಯಪಾಲರು ಖರೀದಿ ಮಾಡಿದ್ದಾರೆ.

Recommended Video

ಬ್ರಹ್ಮ -ವಿಷ್ಣು-ಮಹೇಶ್ವರ, ಮೂವರಲ್ಲಿ ಯಾರು ಶ್ರೇಷ್ಠ? | Oneindia Kannada

ಈ ನಿಘಂಟುಗಳ ಸಹಾಯದಿಂದ ಹಲವು ಶಬ್ದಗಳನ್ನು ನಿತ್ಯ ಕಲಿಯುತ್ತಿದ್ದಾರೆ. ಮಧ್ಯಪ್ರದೇಶದ ಮೂಲದ ಗೆಹ್ಲೋಟ್ ಕನ್ನಡ ಕಲಿಯುವ ಮೂಲಕ ರಾಜ್ಯ ಭಾಷೆಯ ಬಗ್ಗೆ ತಮ್ಮ ಪ್ರೇಮ ವ್ಯಕ್ತಪಡಿಸಿದ್ದಾರೆ.

English summary
Karnataka Governor Thawarchand Gehlot Started Learning Kannada Language from Jnanamurthy on September 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X