ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ರಾಜ್ಯಪಾಲ ಭ್ರಷ್ಟ: ಹಿರಿಯ ವಕೀಲ ರಾಮ್‌ಜೇಠ್‌ಮಲಾನಿ

By Manjunatha
|
Google Oneindia Kannada News

ನವ ದೆಹಲಿ, ಮೇ 17: ಕರ್ನಾಟಕದ ರಾಜ್ಯಪಾಲರು ಭ್ರಷ್ಟರಾಗಿದ್ದಾರೆ ಹಾಗಾಗಿ ಅವರೇ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ನೀಡಿದ್ದಾರೆ ಎಂದು ದೇಶದ ಹಿರಿಯ ವಕೀಲ ರಾಮ್‌ ಜೇಠ್‌ಮಲಾನಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯಪಾಲರು ಯಾವ ಆಧಾರದ ಮೇಲೆ ಸರ್ಕಾರ ರಚನೆಗೆ ಅವಕಾಶ ನೀಡಿದ್ದಾರೆ ಮತ್ತು ಅಷ್ಟು ಸಮಯ ನೀಡಿರುವ ಉದ್ದೇಶವನ್ನು ರಾಜ್ಯಪಾಲರು ಜನರ ಮುಂದಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಜೇಠ್ಮಲಾನಿರಾಜ್ಯಪಾಲರ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದ ಜೇಠ್ಮಲಾನಿ

ರಾಜ್ಯಪಾಲರ ಈ ನಿರ್ಣಯ ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿ ಎಂದು ಹೇಳಿದ ಅವರು, ಯಾವುದು ಏನೇ ಆಗಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರಬಾರದು ಆದರೆ ಇದು ಪ್ರಜಾಪ್ರಭುತ್ವವನ್ನು ತಿದ್ದುವ ಅದಕ್ಕೆ ಅಡ್ಡಗಾಲು ಹಾಕುವ ಯತ್ನ ಎಂದು ಜೇಠ್‌ಮಲಾನಿ ಹೇಳಿದ್ದಾರೆ.

Karnataka Governor is also corrupt: Ram Jethmalani

ಬಹುಮತ ಸಾಬೀತು ಪಡಿಸಲು ಇಷ್ಟು ದಿನಗಳ ಅವಕಾಶ ನೀಡುವ ಮೂಲಕ ರಾಜ್ಯಪಾಲರೇ ಭ್ರಷ್ಟಾಚಾರಕ್ಕೆ, 'ಕುದುರೆ ವ್ಯಾಪಾರ'ಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆಂದರೆ ರಾಜ್ಯಪಾಲರೂ ಭ್ರಷ್ಟರೇ ಆಗಿರಬೇಕು ಅಷ್ಟೆ ಎಂದು ರಾಮ್‌ ಜೇಠ್‌ಮಲಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಮ್ ಜೇಠ್‌ಮಲಾನಿ ಅವರು ರಾಜ್ಯಪಾಲರ ನಿರ್ಣಯದ ವಿರುದ್ಧ ಸುಪ್ರೀಂ ಕೋರ್ಟ್‌ ಬಾಗಿಲು ಬಡಿದಿದ್ದು, ತುರ್ತಾಗಿ ತಮ್ಮ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

English summary
Senior lawyer Ram Jethmalani says Karnataka Governor also may corrupt so he gave time to BJP to prove majority by buying MLA's with corrupt money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X