ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರವಿ ಡಿ. ಚನ್ನಣ್ಣನವರ್ ಸೇರಿ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ

|
Google Oneindia Kannada News

ಬೆಂಗಳೂರು, ಜೂನ್ 09: ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿದ್ದ ರವಿ ಡಿ ಚನ್ನಣ್ಣನವರ್ ಸೇರಿದಂತೆ ಒಟ್ಟು 12 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ರವಿ ಡಿ ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‌ಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಮೈಸೂರು ಎಸ್‌ಪಿಯಾಗಿದ್ದ ಸಿ.ಬಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡಿರುವ 12 ಅಧಿಕಾರಿಗಳ ವಿವರ ಇಲ್ಲಿದೆ...

 Karnataka Government Transfers 12 IPS Officers; Here Is List

1. ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನು ಸಿಐಡಿ ಎಸ್‌ಪಿ, ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

2. ಕರಾವಳಿ ಭದ್ರತಾ ಪಡೆ ಎಸ್‌ಪಿ ಆರ್ ಚೇತನ್ ಅವರನ್ನು ಮೈಸೂರು ಎಸ್‌ಪಿ ಆಗಿ ವರ್ಗಾವಣೆ ಮಾಡಲಾಗಿದೆ.

3. ಕೋಲಾರ ಜಿಲ್ಲೆಯ ಎಸ್‌ಪಿ ಕಾರ್ತಿಕ್ ರೆಡ್ಡಿ ಅವರನ್ನು ಬೆಂಗಳೂರು ಎಸ್‌ಪಿಯಾಗಿ (ವೈರ್‌ಲೆಸ್) ವರ್ಗಾವಣೆ ಮಾಡಲಾಗಿದೆ.

4. ಬೆಂಗಳೂರಿನ ಅಪರಾಧ ತನಿಖಾ ಇಲಾಖೆಯ ರಾಹುಲ್ ಕುಮಾರ್ ಶಹಾಪೂರ್ವದ್ ಅವರನ್ನು ತುಮಕೂರು ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

5. ದಾವಣಗೆರೆ ಜಿಲ್ಲೆಯ ಎಸ್‌ಪಿ ಹನುಮಂತರಾಯ ಅವರನ್ನು ಹಾವೇರಿ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

6. ಮೈಸೂರಿನ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್. ಪ್ರಕಾಶ್ ಗೌಡ ಅವರನ್ನು ಬೆಂಗಳೂರು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.

7. ಹಾವೇರಿ ಜಿಲ್ಲೆಯ ಎಸ್‌ಪಿ ಕೆ.ಜಿ. ದೇವರಾಜು ಅವರನ್ನು ಬೆಂಗಳೂರಿನ ಸಿಐಡಿ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

8. ಮೈಸೂರಿನ ಎಸ್‌ಪಿ ಸಿ.ಬಿ. ರಿಷ್ಯಂತ್ ಅವರನ್ನು ದಾವಣಗೆರೆ ಜಿಲ್ಲೆಗೆ ವರ್ಗಾವಣೆ ಮಾಡಲಾಗಿದೆ.

9. ಕಲಬುರಗಿ ಜಿಲ್ಲೆಯ ಡಿಸಿಪಿ ಡೆಕ್ಕ ಕಿಶೋರ್ ಬಾಬು ಅವರನ್ನು ಕೋಲಾರ ಜಿಲ್ಲೆಯ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

10. ತುಮಕೂರಿನ ಎಸ್‌ಪಿ ಡಾ. ಕೋನಾ ವಂಶಿ ಕೃಷ್ಣ ಅವರನ್ನು ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.

11. ಬೆಂಗಳೂರಿನ ಆಂತರಿಕ ಭದ್ರತಾ ಇಲಾಖೆಯ ಎಸ್ಪಿ ಪ್ರದೀಪ್ ಗುಂಟಿ ಅವರನ್ನು ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

Recommended Video

SSLC ವಿದ್ಯಾರ್ಥಿಗಳಿಗೆ High ALERT! | Oneindia Kannada

12. ಬೆಂಗಳೂರಿನ (ವೈರ್‌ಲೆಸ್‌) ಎಸ್‌ಪಿ ಅಡ್ಡೂರು ಶ್ರೀನಿವಾಸುಲು ಅವರನ್ನು ಕಲಬುರಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

English summary
Karnataka government on wednesday issued transfer order of 12 IPS officers. Here is the list
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X