ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದುಳಿದವರ ಉನ್ನತ ಶಿಕ್ಷಣ ಕನಸು ನನಸು

|
Google Oneindia Kannada News

ಬೆಂಗಳೂರು, ಸೆ. 3: ಉನ್ನತ ವ್ಯಾಸಂಗ ಮಾಡಲು ವಿದೇಶಕ್ಕೆ ತೆರಳಲು ಆಯ್ಕೆಯಾಗುವ ಎಸ್‌ಸಿ, ಎಸ್ಟಿ ವರ್ಗದ 24 ವಿದ್ಯಾರ್ಥಿಗಳಿಗೆ 5.6 ಕೋಟಿ ರೂ. ಮೀಸಲಿಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ತಿಳಿಸಿದ್ದಾರೆ.

ತರಕಾರಿ ಮಾರುವವರ ಮಕ್ಕಳು, ಮೆಕ್ಯಾನಿಕಲ್‌ ಮಕ್ಕಳು ಮತ್ತು ಆಟೊ ಹಾಗೂ ಬಸ್‌ ಚಾಲಕರ ಮಕ್ಕಳು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೇ ನಿವೃತ್ತ ಸೈನಿಕರ ಮಕ್ಕಳಿಗೂ ಸವಲತ್ತು ದೊರೆಯಲಿದೆ ಎಂದು ತಿಳಿಸಿದರು.('ವಿಶ್ವ' ತೋರಿಸಿದ್ದ ಸೈಬರ್‌ ಕೆಫೆಗಳಿಗೆ ಬೀಗ?)

anjaneya

ಬಡ ವರ್ಗದ ಮಕ್ಕಳ ವಿದೇಶಿ ಶಿಕ್ಷಣದ ಕನಸಿನ ಸಾಕಾರಕ್ಕೆ ಸರ್ಕಾರ ಈ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ. ವಿದ್ಯಾರ್ಥಿಗಳ ವ್ಯಾಸಂಗದ ಶುಲ್ಕ, ಸಾರಿಗೆ ವೆಚ್ಚ, ವಿಸಾ ವೆಚ್ಚ, ಪಠ್ಯ ಸಾಮಗ್ರಿಗಳು ಮುಂತಾದ ಎಲ್ಲವನ್ನೂ ಸರ್ಕಾರವೇ ಭರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

17 ಜನ ಇಂಜಿನಿಯರಿಂಗ್‌ ವಿದ್ಯಾರ್ಥಿಗಳು, ಮೂವರು ಎಂಬಿಎ ವಿದ್ಯಾರ್ಥಿಗಳು, ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಒಬ್ಬ ಎಲ್‌ಎಲ್‌ಎಂ ವಿದ್ಯಾರ್ಥಿಗೆ ಸಹಾಯಧನ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಸುರೇಶ್‌ ಜೈನ್‌ ಎಂಬುವರಿಗೆ ಆಸ್ಟ್ರೇಲಿಯಾದ ವುಲೋನ್‌ಗಾಂಗ್‌ ವಿಶ್ವವಿದ್ಯಾಯದಲ್ಲಿ ಅವಕಾಶ ದೊರೆತಿದೆ. ಆತನ ವ್ಯಾಸಂಗ ಮುಂದುವರಿಸಲು 43 ಲಕ್ಷ ರೂ. ಅಗತ್ಯವಿದೆ. ಕಾರ್ಮಿಕರೊಬ್ಬರ ಮಗಳು ಅನುಷಾ ಮೂರ್ತಿ ಅವರಿಗೆ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಅವಕಾಶ ಸಿಕ್ಕಿದ್ದು 39.47 ಲಕ್ಷ ರೂ. ಬೇಕಿದೆ. ಶೇ. 60ಕ್ಕಿಂತ ಹೆಚ್ಚು ಅಂಕ ಗಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದರು.

2001ರಲ್ಲಿ ಯೋಜನೆ ಜಾರಿ ಮಾಡಲಾಗಿತ್ತು. ಇಲ್ಲಿಯವರೆಗೆ 67 ಜನ ಎಸ್‌ಸಿ, 18 ಎಸ್‌ಟಿ ವಿದ್ಯಾರ್ಥಿಗಳು ಸೌಲಭ್ಯ ಪಡೆದಿದ್ದಾರೆ. 9.85 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ವಿವರಿಸಿದರು.

English summary
The Department of Social Welfare, Karnataka is spending Rs 5.6 crore to help 24 poor SC/ST students who are opting to go study abroad for higher education. Social Welfare Minister, H Anjaneya said to the media, that children of vegetable vendors, mechanics, auto and bus drivers and ex-servicemen would be beneficiaries of this scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X