ನೀರಾ ಇಳಿಸಿ ಕುಡಿಯಿರಿ, ಸರ್ಕಾರ ಕೂಡಾ ಚಿಯರ್ಸ್ ಎಂದಿದೆ!

Posted By:
Subscribe to Oneindia Kannada

ಬೆಂಗಳೂರು, ಸೆ. 22: ಕೇರಳ ಮಾದರಿಯಲ್ಲಿ ಕರ್ನಾಟಕದಲ್ಲೂ ನೀರಾ ಇಳಿಸಿ ಕುಡಿಯುವ ಕಾಲ ಬರಲಿದೆ. ನೀರಾ ನೀತಿಗೆ ರಾಜ್ಯ ಸಚಿವ ಸ೦ಪುಟದಲ್ಲಿ ಅನುಮೋದನೆ ನೀಡಿದೆ. ನೀರಾ ಮತ್ತು ಉತ್ಪನ್ನಗಳನ್ನು ಕರ್ನಾಟಕ ಅಬಕಾರಿ ಕಾಯ್ದೆ 1965 ಯಿಂದ ವ್ಯಾಪ್ತಿಯಿ೦ದ ಹೊರಗಿಡಲು ಸಚಿವ ಸ೦ಪುಟ ಒಪ್ಪಿಗೆ ಸೂಚಿಸಿದೆ ಎಂದು ಸಂಸದೀಯ ವ್ಯವಹಾರ ಸಚಿವ ಟಿಬಿ ಜಯಚಂದ್ರ ಘೋಷಿಸಿದರು.

ಸಿಎ೦ ಸಿದ್ದರಾಮಯ್ಯ ಅವರು ಈ ಹಿಂದಿನ ಬಜೆಟ್ ನಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ಇದೀಗ ಅನುಷ್ಠಾನಕ್ಕೆ ತರಲಾಗಿದೆ.ಆದರೆ, ತೆ೦ಗು ಬೆಳೆಗಾರರ ಮ೦ಡಳಿಯ ಮೂಲಕ ಮಿತ ಪ್ರಮಾಣದಲ್ಲಿ ನೀರಾ ಇಳಿಸಲು ಅವಕಾಶ ಮಾಡಿಕೊಡಲಾಗುತ್ತದೆ.[ಬೀರು ತರುವವರ ಮನೆಗೆ ನೀರಾ ತರುವಾ!]

Karnataka Government to allow harvest of Neera

ಅಲ್ಲದೆ, ನೂತನ ನೀತಿ ಪ್ರಕಾರ ಮ೦ಡಳಿಯ ಸದಸ್ಯರಿಗೆ ಮಾತ್ರ ನೀರಾ ಉತ್ಪಾದನೆಯ ಅನುಮತಿ ದೊರೆಯಲಿದೆ. ಮು೦ದಿನ ಅಧಿವೇಶನದಲ್ಲಿ ಅಬಕಾರಿ ಕಾಯ್ದೆಗೆ ಸೂಕ್ತ ತಿದ್ದುಪಡಿಯಾಗಲಿದೆ ಎ೦ದು ಸ೦ಪುಟ ಸಭೆಯ ಬಳಿಕ ಕಾನೂನು ಮತ್ತು ಸ೦ಸದೀಯ ಸಚಿವ ಟಿ.ಬಿ.ಜಯಚ೦ದ್ರ ತಿಳಿಸಿದರು.

ಕೇರಳದ ಮಾದರಿಯನ್ನೇ ರಾಜ್ಯದಲ್ಲೂ ನೀತಿ ಅನುಸರಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ನೀರಾದ ಜತೆಗೆ ಅದರ ಇತರ ಉಪ ಉತ್ಪನ್ನಗಳ ಮಾರುಕಟ್ಟೆಗೂ ಅವಕಾಶ ನೀಡಲಾಗಿದ್ದು, ಲಕ್ಷಾ೦ತರ ತೆ೦ಗು ಬೆಳೆಗಾರರಿಗೆ ಲಾಭವಾಗಲಿದೆ. ಬೆಲೆ ಕುಸಿತದಿ೦ದ ಕ೦ಗೆಟ್ಟವರಿಗೆ ವರದಾನವಾಗಲಿದೆ ಎ೦ದು ಜಯಚ೦ದ್ರ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government has decided to allow harvest of neera, the sweet sap tapped from the coconut tree, by amending the Karnataka Excise Act, 1965.
Please Wait while comments are loading...