ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ನೌಕರರ ವಿಶೇಷ ಭತ್ಯೆ ಹೆಚ್ಚಳ ಮಾಡಿದ ಕರ್ನಾಟಕ ಸರ್ಕಾರ!

|
Google Oneindia Kannada News

Recommended Video

ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಶುಭ ಸುದ್ದಿ | Oneindia Kannada

ಬೆಂಗಳೂರು, ಜನವರಿ 11: 6ನೇ ವೇತನ ಆಯೋಗದ ಶಿಫಾರಸಿನ ಅನ್ವಯ ವಿವಿಧ ಸಿಬ್ಬಂದಿಗಳು ಅಧಿಕಾರಿಗಳ ವಿಶೇಷ ಭತ್ಯೆಯನ್ನು ಪರಿಷ್ಕರಣೆ ಮಾಡಿ ಕರ್ನಾಟಕ ಸರ್ಕಾರವು ಶುಕ್ರವಾರ ಸಂಜೆ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರಿ ನೌಕರರ ಕಾರ್ಯನಿರ್ವಹಿಸುವ ಸ್ಥಳಗಳ ಸ್ಥಿತಿಯ ಆಧಾರದ ಮೇಲೆ ನಿರ್ದಿಷ್ಟ ಹುದ್ದೆಗಳಿಗೆ ಮಂಜೂರು ಮಾಡಲಾದ ವಿಶೇಷ ಭತ್ಯೆಯ ದರಗಳನ್ನು ಸರ್ಕಾರವು ಕಾಲಕಾಲಕ್ಕೆ ರಚಿಸುವ ವೇತನ ಆಯೋಗ/ಅಧಿಕಾರಿ ವೇತನ ಸಮಿತಿಯಂತಹ ತಜ್ಞ ಸಮಿತಿಗಳ ಶಿಫಾರಸ್ಸಿಗನುಗುಣವಾಗಿ ಕಾಲದಿಂದ ಕಾಲಕ್ಕೆ ಸಂದರ್ಭದ ಮಾನದಂಡಕ್ಕನುಗುಣವಗಿ ಪರಿಷ್ಕರಿಸಿಕೊಂಡು ಬರಲಾಗುತ್ತಿದೆ.

ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಲಿದೆ ಮೋದಿ ಸರ್ಕಾರ ಡಿಎ ಹೆಚ್ಚಿಸಿ ಸರ್ಕಾರಿ ನೌಕರರಿಗೆ ಶುಭ ಸುದ್ದಿ ನೀಡಲಿದೆ ಮೋದಿ ಸರ್ಕಾರ

ವಿಶೇಷ ಭತ್ಯೆ ಮಂಜೂರಾತಿ ಮತ್ತು ಪರಿಷ್ಕರಣೆ ಕುರಿತಂತ್ 2011ರ ಅಧಿಕಾರಿ ವೇತನ ಸಮಿತಿಯು ಅನುಸರಿಸಿದ ಮಾನದಂಡಗಳನ್ನು 6ನೇ ರಾಜ್ಯ ವೇತನ ಆಯೋಗವು ಮಾನ್ಯ ಮಾಡಿರುತ್ತದೆ.

ಈ ಭತ್ಯೆಗಳನ್ನು ಪಡೆಯುವ ನೌಕರರು ನಿರ್ವಹಿಸುವ ಕಾರ್ಯ ಸ್ವರೂಪ ಹಾಗೂ ಹುದ್ದೆಗಳ ವರ್ಗೀಕರಣದ ಆಧಾರದ ಮೇಲೆ ವಿಶೇಷ ಭತ್ಯೆಯ ದರಗಳನ್ನು ಒಂದು ನಿಗದಿತ ಪರಿಮಿತಿಯಲ್ಲಿ ಪರಿಷ್ಕರಿಸಲು 6ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುತ್ತದೆ.

ಸರಕಾರೀ ನೌಕರರಿಗೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಎಚ್ಡಿಕೆಸರಕಾರೀ ನೌಕರರಿಗೆ ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಎಚ್ಡಿಕೆ

ವಿಶೇಷ ಭತ್ಯೆ ಮಂಜೂರಾತಿ ಕುರಿತಂತೆ ಹೊರಡಿಸಲಾದ, ಹಿಂದಿನ ಎಲ್ಲಾ ಆದೇಶಗಳು ಜನವರಿ 01, 2019ರಿಂದ ಜಾರಿಗೆ ಬರಲಿವೆ.

ವಿವಿಧ ಗ್ರೂಪ್ ನಲ್ಲಿರುವ ಅಧಿಕಾರಿಗಳಿಗೆ ಭತ್ಯೆ

ವಿವಿಧ ಗ್ರೂಪ್ ನಲ್ಲಿರುವ ಅಧಿಕಾರಿಗಳಿಗೆ ಭತ್ಯೆ

ಯಾರಿಗೆ ಎಷ್ಟು?
* ಗ್ರೂಪ್ ಬಿ ಹುದ್ದೆಗಳಲ್ಲಿರುವವರಿಗೆ 200 ರು ನಿಂದ 400ರು ತನಕ ಪ್ರತಿ ತಿಂಗಳಿಗೆ ವಿಶೇಷ ಭತ್ಯೆ ಸಿಗಲಿದೆ.
* ಮುಖ್ಯಮಂತ್ರಿಗಳು, ವಿವಿಐಪಿಗಳ ಕಾರು ಚಾಲಕರಿಗೆ 400ರು
* ಸಿಎಂ, ಸಚಿವರ ಆಪ್ತ ಕಾರ್ಯದರ್ಶಿಗಳಿಗೆ 400 ರಿಂದ 600 ರು
* ತರಬೇತಿ ಕೇಂದ್ರಗಳ ಬೋಧಕ ಸಿಬ್ಬಂದಿಗಳಿಗೆ 4000 ರಿಂದ 8000 ರು
* ಅಗ್ನಿ ಶಾಮಕದಳದ ವಿವಿಧ ಗುಂಪಿನವರಿಗೆ 300 ರು ನಿಂದ 600 ರು ತನಕ ಸಿಗಲಿದೆ.
* ಅರಣ್ಯ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಇರುವವರಿಗೆ 500 ರು ಪ್ರತಿ ತಿಂಗಳು
* ಆರೋಗ್ಯ ಇಲಾಖೆಯಲ್ಲಿನ ಸಿಬ್ಬಂದಿಗಳಿಗೆ 300 ರು ನಿಂದ 500 ರು ತನಕ.
* ಪೊಲೀಸ್ ಇಲಾಖೆ 200 ರು ನಿಂದ 1000 ರು ತನಕ
* ಎಸಿಬಿ ಸಿಬ್ಬಂದಿ 1700 ರು ನಿಂದ 4800 ರು ತನಕ

ಹೆಚ್ಚಿನ ದರದಲ್ಲಿ ವಿಶೇಷ ಭತ್ಯೆ ಮಂಜೂರು

ಹೆಚ್ಚಿನ ದರದಲ್ಲಿ ವಿಶೇಷ ಭತ್ಯೆ ಮಂಜೂರು

6ನೇ ರಾಜ್ಯ ವೇತನ ಆಯೋಗವು, ರಾಜಭವನ ಮತ್ತು ಮುಖ್ಯಮಂತ್ರಿಗಳ ಕಚೇರಿಯಲ್ಲಿನ ಭದ್ರತಾ ಅಧಿಕಾರಿ (ಐಪಿಎಸ್ ಅಲ್ಲದ ಪೋಲೀಸ್ ಅಧೀಕ್ಷಕ), ಪೋಲೀಸ್ ಇಲಾಖೆಯ ವಿಶೇಷ ವಿಭಾಗಗಳು, ಅರಣ್ಯ ಇಲಾಖೆ, ಮುಖ್ಯಮಂತ್ರಿ/ಮಂತ್ರಿಗಳ ಆಪ್ತ ಶಾಖೆಯಲ್ಲಿನ ಕೆಲವು ಹುದ್ದೆಗಳು ಇತ್ಯಾದಿಗಳಿಗೆ ವಿಶೇಷ ಕರ್ತವ್ಯದ ಸ್ವರೂಪ, ಹೆಚ್ಚಿನ ಜವಾಬ್ದಾರಿ, ಹೆಚ್ಚಿನ ಕಾರ್ಯ ನಿರ್ವಹಣಾವಧಿ, ವಿಶೇಷ ಅತಿಥಿಗಳ ಶಿಷ್ಟಾಚಾರ ಕಾರ್ಯ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಹುದ್ದೆಗಳಿಗೆ ಹೆಚ್ಚಿನ ದರದಲ್ಲಿ ವಿಶೇಷ ಭತ್ಯೆಯನ್ನು ಮಂಜೂರು ಮಾಡಲು ಸಹ ಶಿಫಾರಸ್ಸು ಮಾಡಿರುತ್ತದೆ.

ಕೆಲವು ಹುದ್ದೆಗಳ ಭತ್ಯೆ ರದ್ದುಪಡಿಸಲು ಆಯೋಗ ಶಿಫಾರಸ್ಸು

ಕೆಲವು ಹುದ್ದೆಗಳ ಭತ್ಯೆ ರದ್ದುಪಡಿಸಲು ಆಯೋಗ ಶಿಫಾರಸ್ಸು

ರಾಜ್ಯ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ಹಾಗೂ ಪೋಲೀಸ್ ಇಲಾಖೆಯ ಹಲವಾರು ವೃಂದಗಳಿಗೆ 2012ರ ನಂತರ ಪರಿಷ್ಕರಿಸಿರುವ ವಿಶೇಷ ಭತ್ಯೆಯ ದರಗಳನ್ನು ಪ್ರಸಕ್ತ ದರದಲ್ಲಿಯೇ ಮುಂದುವರೆಸಲು ಹಾಗೂ ಈ ರೀತಿ ಪರಿಷ್ಕರಣೆಯಾಗದ ಕೆಲವು ಇಲಾಖೆಗಳ ವಿಶೇಷ ಭತ್ಯೆ, ಸಮವಸ್ತ್ರ ಭತ್ಯೆ ಇತ್ಯಾದಿಗಳ ದರಗಳನ್ನು ಪರಿಷ್ಕರಿಸಲು ಹಾಗೂ ಕೆಲವೊಂದು ಹುದ್ದೆಗಳಿಗೆ ನೀಡಲಾಗುತ್ತಿರುವ ವಿಶೇಷ ಭತ್ಯೆಯನ್ನು ರದ್ದುಪಡಿಸುವಂತೆ ಆಯೋಗವು ಶಿಫಾರಸ್ಸು ಮಾಡಿರುತ್ತದೆ.

ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ

ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ

ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರು ಇವರುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸರ್ಕಾರಿ ನೌಕರರು ಒಂದಕ್ಕಿಂತ ಹೆಚ್ಚಿನ ವಿಶೇಷ ಭತ್ಯೆಗೆ ಅರ್ಹರಾಗತಕ್ಕದ್ದಲ್ಲ. ಆದರೆ, ಸಚಿವರು/ಸರ್ಕಾರದ ಕಾರ್ಯದರ್ಶಿಗಳ ವೈಯಕ್ತಿಕ ಶಾಖೆಗೆ ನಿಯುಕ್ತಿಗೊಳಿಸಲಾಗಿರುವ ಶೀಘ್ರಲಿಪಿಗಾರರು, ಹಿರಿಯ ಶೀಘ್ರಲಿಪಿಗಾರರು, ಪತ್ರಾಂಕಿತ ಆಪ್ತ ಸಹಾಯಕರು, ಬೆರಳಚ್ಚುಗಾರರು, ಹಿರಿಯ ಬೆರಳಚ್ಚುಗಾರರಿಗೆ ವೈಯಕ್ತಿಕ ಶಾಖೆಗೆ ಲಭ್ಯವಿರುವ ವಿಶೇಷ ಭತ್ಯೆಯ ಜೊತೆಗೆ ಅವರು ಹೊಂದಿರುವ ಹುದ್ದೆಗಳಿಗೆ ಲಭ್ಯವಿರುವ ವಿಶೇಷ ಭತ್ಯೆಯನ್ನು ನೀಡಬಹುದು.

English summary
Karnataka Government revises the rates of Special Allowance for all Government Employees as per the 6th Pay Commission recommendations. All orders issued in connection with the payment of Special Allowance shall stand rescinded with effect from 1st January 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X