ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಬೆಳೆಸಾಲ ಮನ್ನಾ ಆಗಲಿದೆಯೇ,ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 13: ರಾಜ್ಯ ಸರ್ಕಾರ ಮಾಡುತ್ತಿರುವ ಬೆಳೆ ಸಾಲಮನ್ನಾದ ತಾಂತ್ರಿಕ ಅಂಶಗಳ ಬಗ್ಗೆ ರೈತರಿಗೆ ಹಲವು ಅನುಮಾನಗಳು ಉಳಿದುಕೊಂಡಿವೆ.

ಯಾವ ರೀತಿಯ ಸಾಲಮನ್ನಾ ಆಗುತ್ತದೆ, ಚಾಲ್ತಿ ಖಾತೆಯ ಎಷ್ಟು ಸಾಲಮನ್ನಾ ಆಗುತ್ತದೆ. ಸುಸ್ತಿ ಖಾತೆಯ ಎಷ್ಟು ಸಾಲಮನ್ನಾ ಆಗುತ್ತದೆ. ಸಹಕಾರಿ ಬ್ಯಾಂಕಿನ ಎಷ್ಟು ಸಾಲಮನ್ನಾ ಆಗುತ್ತದೆ. ರಾಷ್ಟ್ರೀಕೃತ ಬ್ಯಾಂಕಿನ ಎಷ್ಟು ಮೊತ್ತದ ಬೆಳೆ ಸಾಲಮನ್ನಾ ಆಗುತ್ತದೆ ಹೀಗೆ ಅನುಮಾನುಗಳು ಇನ್ನೂ ಉಳಿದುಕೊಂಡಿವೆ.

ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು ಸಾಲಮನ್ನಾ ಆಗಲು ರೈತರು ಈ ದಾಖಲೆಗಳನ್ನು ಕಡ್ಡಾಯವಾಗಿ ಕೊಡಬೇಕು

ಆದರೆ ಇದಕ್ಕೆಲ್ಲಾ ಪೂರ್ಣ ವಿರಾಮ ಇಡಲೆಂದು ಕೆಲವು ದಿನಗಳ ಹಿಂದೆಯೇ ಕರ್ನಾಟಕ ಸರ್ಕಾರ ವೆಬ್‌ಸೈಟ್ ಒಂದನ್ನು ರೂಪಿಸಿ ಬಿಡುಗಡೆ ಮಾಡಿದೆ. ಇಲ್ಲಿ ರೈತರು ತಮ್ಮ ಬೆಳೆಸಾಲ ಮನ್ನಾ ಆಗುತ್ತದೆಯೇ, ಅಥವಾ ಆಗಿದೆಯೇ ಎಂದು ಸುಲಭವಾಗಿ ತಿಳಿಯಬಹುದು.

ಈ ವೆಬ್‌ಸೈಟ್‌ ನಲ್ಲಿ ದೊರೆಯುತ್ತದೆ ಮಾಹಿತಿ

ಈ ವೆಬ್‌ಸೈಟ್‌ ನಲ್ಲಿ ದೊರೆಯುತ್ತದೆ ಮಾಹಿತಿ

ವೆಬ್‌ಸೈಟ್‌ ನಲ್ಲಿ ರೈತರು ತಮ್ಮ ಬೆಳೆಸಾಲ ಮನ್ನಾ ಆಗಿದೆಯೇ ತಿಳಿಯಬಹುದು. ಈ ವೆಬ್‌ಸೈಟ್‌ನಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಎರಡೂ ಆಯ್ಕೆ ಇದೆ. ವೆಬ್‌ಸೈಟ್‌ನಲ್ಲಿ 'ನಾಗರಿಕ' (citizen) ಆಯ್ಕೆ ಆರಿಸಿಕೊಂಡು. 'CLWS ನಾಗರೀಕ ಸೇವೆಗಳು' ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು.

'ಸಾಲಗಾರರ ಮಾಹಿತಿ ' ಆಯ್ಕೆ ಕ್ಲಿಕ್‌ ಮಾಡಿ

'ಸಾಲಗಾರರ ಮಾಹಿತಿ ' ಆಯ್ಕೆ ಕ್ಲಿಕ್‌ ಮಾಡಿ

ಆ ನಂತರ ತೆರೆದುಕೊಳ್ಳುವ ಪುಟದಲ್ಲಿ 'INDIVIDUAL LOANEE REPORT' ಆಯ್ಕೆಯ ಆರಿಸಿಕೊಳ್ಳಬೇಕು. ಆ ನಂತರ ತೆರೆದುಕೊಳ್ಳುವ ಪುಟದಲ್ಲಿ ಕೇಳಿರುವಂತೆ ರಾಷ್ಟ್ರೀಯ ಬ್ಯಾಂಕು ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಸಾಲಮನ್ನಾ ಆಗಿದೆಯೇ ಎಂಬುದರ ಮಾಹಿತಿ ಪಡೆಯಬಹುದು.

ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ, ರೈತರ ಸಾಲಮನ್ನಾಕ್ಕೆ ಚಿಂತನೆ?ಸೋಲಿನ ಬಳಿಕ ಎಚ್ಚೆತ್ತ ಬಿಜೆಪಿ, ರೈತರ ಸಾಲಮನ್ನಾಕ್ಕೆ ಚಿಂತನೆ?

ಹಲವು ವಿಧದಲ್ಲಿ ಮಾಹಿತಿ ಲಭ್ಯ

ಹಲವು ವಿಧದಲ್ಲಿ ಮಾಹಿತಿ ಲಭ್ಯ

ಆಧಾರ್ ಸಂಖ್ಯೆ, ಸಾಲಪಡೆದಿರುವ ಜಮೀನಿನ ಸರ್ವೆ ಸಂಖ್ಯೆ, ರೇಷನ್ ಕಾರ್ಡ್‌ ಸಂಖ್ಯೆ, ಸಾಲದ ಖಾತೆ ಸಂಖ್ಯೆ, ಬ್ಯಾಂಕ್‌ ಗ್ರಾಹಕ ಮಾಹಿತಿಗಳ ಆಧಾರದ ಮೇಲೆ ಸಾಲಮನ್ನಾ ಆಗಿದೆಯೇ ಅಥವಾ ಆಗಲಿದೆಯೇ ಎಂದು ತಿಳಿದುಕೊಳ್ಳಬಹುದಾಗಿದೆ.

ರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆರೈತರ ಸಾಲಮನ್ನಾಕ್ಕೆ ಚಾಲನೆ, 477 ರೈತರಿಗೆ ಋಣ ಮುಕ್ತ ಪತ್ರ ವಿತರಣೆ

ಕನ್ನಡ, ಇಂಗ್ಲಿಷ್ ಭಾಷೆ ಆಯ್ಕೆ ಇದೆ

ಕನ್ನಡ, ಇಂಗ್ಲಿಷ್ ಭಾಷೆ ಆಯ್ಕೆ ಇದೆ

ವೆಬ್‌ಸೈಟ್‌ ಸರಳವಾಗಿದ್ದು, ಕನ್ನಡ, ಇಂಗ್ಲಿಷ್ ಆಯ್ಕೆ ಎರಡೂ ಇದೆ. ಆದರೆ ಕೆಲವು ಬಾರಿ ಅತಿಯಾದ ಬಳೆಕದಾರರು ಇರುವ ಕಾರಣದಿಂದ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ.

'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು'ಸಾಲಮನ್ನಾ ಮಾಡಿ ಅಂದ್ರೆ ಮಂಚಕ್ಕೆ ಕರೀತಾರೆ', ರೈತ ಮಹಿಳೆ ಕಣ್ಣೀರು

English summary
Karnataka government released a website to help farmers to know about loan wavier. They can check wether there loan is waived off or not. It is a simple website. It is people friendly website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X