ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಮಂದಿರಗಳಿಗೆ ರಾಜ್ಯ ಸರ್ಕಾರದಿಂದ ಹೊಸ ಗೈಡ್‌ಲೈನ್ಸ್

|
Google Oneindia Kannada News

ಬೆಂಗಳೂರು,ಫೆಬ್ರವರಿ 04: ಚಿತ್ರಮಂದಿರಗಳಿಗೆ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಕೊನೆಗೂ ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ ನೀಡಿದ್ದು, ಹೌಸ್​ಫುಲ್ ಪ್ರದರ್ಶನಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದು ಥಿಯೇಟರ್​ ಮತ್ತು ಮಲ್ಟಿಪ್ಲೆಕ್ಸ್ ಗೂ ಅನ್ವಯವಾಗುತ್ತದೆ.

ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಭಾರತವೇ ನಂ.01ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಭಾರತವೇ ನಂ.01

ಗ್ರಾಹಕರು ಟಿಕೆಟ್ ಪಡೆಯುವಾಗ ಹಾಗೂ ಸಿನಿಮಾ ನೋಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಟಿಕೆಟ್ ಬುಕಿಂಗ್ ಸಮಯದಲ್ಲಿ ಹೆಸರು ಮತ್ತು ಮೊಬೈಲ್ ನಂಬರ್ ನೀಡುವುದು ಕಡ್ಡಾಯ. ಏರ್ ಕೂಲರ್ ವ್ಯವಸ್ಥೆಯಲ್ಲಿ ಸಿನಿಮಾ ಪ್ರದರ್ಶನ ಮಾಡುವಾಗ CPWD ಮಾರ್ಗಸೂಚಿ ಪಾಲಿಸಬೇಕು. ವೆಂಟಿಲೇಷನ್ ವ್ಯವಸ್ಥೆ ಉತ್ತಮಗೊಳಿಸಲು ಪ್ರತಿ ಶೋನಲ್ಲೂ ಎರಡು ಇಂಟರ್​ವಲ್ ಕಡ್ಡಾಯ.

Karnataka Government Released New Guidelines For Cinema Theatres

ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರಮಾತ್ರ ಇದಕ್ಕೆ ನಿರ್ಬಂಧ ವಿಧಿಸಿತ್ತು. ಕೊರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಚಿತ್ರ ಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕು ಎಂದು ಆದೇಶಿಸಿತ್ತು.

ಸರ್ಕಾರದ ಈ ನಡೆಗೆ ಆಕ್ರೋಶಗೊಂಡ ಸ್ಯಾಂಡಲ್​ವುಡ್​ನ ದಿಗ್ಗಜ್ಜರು, ಎಲ್ಲರಿಗೂ ಶೇ.100 ಅಕ್ಯುಪೆನ್ಸಿ ಕೊಟ್ಟಿರುವಾಗ, ನಮಗೆ ಮಾತ್ರ ಶೇ.50 ಏಕೆ? ಎಲ್ಲರಿಗೂ ನಾರ್ಮಲ್, ನಮಗ್ಯಾಕೆ ಅಬ್ ನಾರ್ಮಲ್? 'ಬಸ್​ನಲ್ಲಿ ಫುಲ್ ರಶ್, ಮಾರ್ಕೆಟ್​ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ?' ಎಂದು ಕಟುವಾಗಿಯೇ ಪ್ರಶ್ನಿಸಿದ್ದರು.

ಪ್ರಮುಖ ಸ್ಥಳದಲ್ಲಿ ಕೋವಿಡ್ ನಿಯಂತ್ರಣ ಕುರಿತ ಜಾಗೃತಿ ಪ್ರದರ್ಶನ ಕಡ್ಡಾಯ. ಪ್ರೇಕ್ಷಕರು ಕೋವಿಡ್ ನಿಯಮ ಪಾಲಿಸಿಯೇ ಸಿನಿಮಾ ನೋಡಬೇಕು ಎಂದು ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

Recommended Video

ರಾಹುಲ್ ತೆವಾಟಿಯ ಅವರು ಹೊಸ ಇನ್ನಿಂಗ್ಸ್ ಗೆ ಕಾಲಿಟ್ಟರು | Oneindia Kannada

ಸ್ಯಾಂಡಲ್​ವುಡ್​ ಸಿಡಿದೇಳುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಿನ್ನೆ(ಬುಧವಾರ) ಸಂಜೆ ಚಿತ್ರೋದ್ಯಮದ ಎಲ್ಲ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು. ಇದೀಗ ಚಿತ್ರಮಂದಿರ ಹೌಸ್​ಫುಲ್​ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

English summary
It what has come as a piece of unexpected news, the state government of Karnataka has announced that the cinema halls in the state will be permitted to function with 100 percent seating capacity.New Strict Guidelines Released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X