ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್‌ ಫಂಗಸ್‌ ಚಿಕಿತ್ಸೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

|
Google Oneindia Kannada News

ಬೆಂಗಳೂರು, ಮೇ 18: ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ರಾಜ್ಯ ಸರ್ಕಾರವು ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಜತೆಗೆ ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದೆ ಎನ್ನುವ ಮಾಹಿತಿಯನ್ನೂ ನೀಡಿದೆ.

ಬ್ಲ್ಯಾಕ್ ಫಂಗಸ್ ಇರುವವರಿಗೆ 12-14ದಿನ ಚಿಕಿತ್ಸೆ ನೀಡಬೇಕು, ರಾಜ್ಯದ ಪ್ರಮುಖ 6 ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ ನೀಡಲಾಗಿದೆ, ಈ ನಿಗದಿತ ಆಸ್ಪತ್ರೆಗಳನ್ನೇ ಚಿಕಿತ್ಸೆ ಪಡೆಯಬೇಕು.

ಹುಬ್ಬಳ್ಳಿಯ ಕಿಮ್ಸ್, ಬೆಂಗಳೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆ, ಶಿವಮೊಗ್ಗದ ಮೆಡಿಕಲ್ ಕಾಲೇಜು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆ, ಕಲಬುರಗಿ ಮೆಡಿಕಲ್ ಕಾಲೇಜಿನಲ್ಲಿ ಮಾತ್ರ ಚಿಕಿತ್ಸೆ ಅವಕಾಶ ಮಾಡಿಕೊಡಲಾಗಿದೆ.

Black Fungus

ಹಾಗೆಯೇ ನಗರದಲ್ಲಿ ವಿಕ್ಟೋರಿಯಾ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.ಬ್ಲ್ಯಾಕ್ ಫಂಗಸ್ ಎನ್ನುವುದು ಒಬ್ಬರಿಂದ ಒಬ್ಬರಿಗೆ ಹರಡು ಸೋಂಕಲ್ಲ, ಫಂಗಸ್ ಎಂಬುದು ಗಾಳಿಯಲ್ಲಿ ಇರುತ್ತದೆ, ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ ದಾಳಿ ನಡೆಸುತ್ತದೆ.

ಇದು ಮೊದಲಿಗೆ ಕಣ್ಣಿನ ಮೇಲೆ ಪ್ರಭಾವ ಬೀರುತ್ತದೆ, ಬಳಿಕ ಮೂಗಿನ ಮೂಲಕ ಮೆದುಳನ್ನು ಸೇರುತ್ತದೆ. ಹೀಗಾಗಿ ಆರಂಭದಿಂದಲೇ ಎಚ್ಚರವಹಿಸಬೇಕಿದೆ. ವೆಂಟಿಲೇಟರ್‌ಗಳು ಸ್ವಚ್ಛವಾಗಿಲ್ಲದೆ ಇದ್ದರೂ ಹರಡುತ್ತದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಿ ವರದಿ ನೀಡಲು ತಿಳಿಸಲಾಗಿದೆ.

ಎಚ್‌ಐವಿ, ಕ್ಯಾನ್ಸರ್ ಪೀಡಿತರು, ಅಂಗಾಂಗ ಕಸಿ ಮಾಡಿಸಿಕೊಂಡವರಿಗೆ ಸೋಂಕು ತಗುಲುವ ಸಾಧ್ಯತೆ ಇದೆ, ಕೊರೊನಾದಿಂದ ಗುಣಮುಖರಾದ ಬಳಿಕ ಕಿವಿ, ಮೂಗು, ಕಣ್ಣು ತಪಾಸಣೆ ಮಾಡಿಸಿಕೊಳ್ಳುವುದನ್ನು ಮರೆಯಬೇಡಿ, ತಪಾಸಣೆ ಮಾಡಿಸಿಕೊಂಡ ಬಳಿಕವೇ ಆಸ್ಪತ್ರಯಿಂದ ಡಿಸ್ಚಾರ್ಜ್ ಆಗಿ ಎಂದು ಸಲಹೆ ನೀಡಲಾಗಿದೆ.

Recommended Video

ಬ್ಲಾಕ್ ಫಂಗಸ್ ಬಗ್ಗೆ ಎಲ್ಲರೂ ಭಯ ಪಡಬೇಕಾಗಿಲ್ಲ | Oneindia Kannada

ಕೊರೊನಾದಷ್ಟೇ ಬ್ಲ್ಯಾಕ್ ಫಂಗಸ್ ಹರಡುತ್ತಿಲ್ಲ, ಅನ್ ಕಂಟ್ರೋಲ್ಡ್ ಡಯಾಬಿಟಿಸ್ ಇರುವವರಿಗೆ ಸೀಮಕು ಬಂದಾಗ ಸ್ಟೀರಾಯ್ಡ್ ಬಳಸಿದರೆ ಸ್ವಾಭಾವಿಕವಾಗಿ ಶುಗರ್ ಹೆಚ್ಚಾಗುತ್ತದೆ, ಇಂತವರು ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಬೇಕಿದೆ.

English summary
Karnataka Government Released Black Fungus Treatment Guidelines and hospital names also
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X