ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈರುಳ್ಳಿ ಖರೀದಿಗೆ ರಾಜ್ಯಸರ್ಕಾರದಿಂದ 50ಕೋಟಿ ರೂ. ಬಿಡುಗಡೆ

By Prithviraj
|
Google Oneindia Kannada News

ಬೆಂಗಳೂರು, ಅಕ್ಟೋಬರ್, 28: ಈರುಳ್ಳಿ ಬೆಲೆ ಕುಸಿತಕ್ಕೆ ಸಿಲುಕಿ ತತ್ತರಿಸಿರುವ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು , 50ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಶುಕ್ರವಾರ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನವೆಂಬರ್ 2ರಿಂದ ಈರುಳ್ಳಿ ಖರೀದಿ ಪ್ರಕ್ರಿಯೆಯನ್ನು ಮಾರುಕಟ್ಟೆ ಫೆಡರೇಶನ್ ವತಿಯಿಂದ ಮಾಡಲಾಗುವುದು, ಕೆ.ಜಿ. ಈರುಳ್ಳಿಗೆ 6.24ರೂ. ಬೆಂಬಲ ಬೆಲೆ ನೀಡಿ ಖರೀದಿಸಲಾಗುವುದು ಎಂದು ಅವರು ತಿಳಿಸಿದರು.[ಕರ್ನಾಟಕದ ಬೆಳೆಗಾರರ ಕಣ್ಣೀರು ಬಸಿದ ಈರುಳ್ಳಿ]

Karnataka Government has released Rs.50cr to purchase onion

ರಾಜ್ಯದಲ್ಲಿ ಮೂರುವರೆ ಲಕ್ಷ ಎಕರೆಯಲ್ಲಿ ಈರುಳ್ಳಿ ಬೆಳೆಯಲಾಗಿದ್ದು, 23ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಖರೀದಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರವು ಕೇವಲ 1ಲಕ್ಷ ಟನ್ ಖರೀದಿಗೆ ಮಾತ್ರ ನೆರವು ನೀಡಲಿದೆ. ಉಳಿದ ಈರುಳ್ಳಿಯನ್ನು ರಾಜ್ಯ ಸರ್ಕಾರವೇ ಖರೀದಿ ಮಾಡಲಿದ್ದು, ದರ ಸ್ಥಿರವಾಗುವವರೆಗೂ ಸರ್ಕಾರ ಖರೀದಿಸಲಇದೆ ಎಂದು ತಿಳಿಸಿದರು.

English summary
Karnataka Government has released Rs.50cr to purchase onion says, T.B. Jayachandra parliamentary affairs and law minister of Government of Karnataka, on Friday (Oct 28
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X