• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ.18ರಿಂದ ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್ ತೆರಿಗೆ 2 ರುಪಾಯಿ ಇಳಿಕೆ

|

ಬೆಂಗಳೂರು, ಸೆಪ್ಟೆಂಬರ್ 17: ಮಂಗಳವಾರದಿಂದ (ಸೆಪ್ಟೆಂಬರ್ 18, 2018) ಅನ್ವಯ ಆಗುವಂತೆ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 2 ರುಪಾಯಿ ಇಳಿಕೆ ಆಗಲಿದೆ. ತೈಲ ಬೆಲೆಯಲ್ಲಿ ನಿರಂತರ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ ರು.84.80 ಹಾಗೂ ಡೀಸೆಲ್ ದರ ಲೀಟರ್ ಗೆ ರು.76.21 ಇದೆ. ಸದ್ಯಕ್ಕೆ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆ ಶೇ 32ರಷ್ಟು ಹಾಗೂ ಡೀಸೆಲ್ ಮೇಲಿನ ತೆರಿಗೆ ಶೇ 21ರಷ್ಟು ಇದ್ದು, ಅದನ್ನು ಕ್ರಮವಾಗಿ ಶೇ 3.25ರಷ್ಟು ಹಾಗೂ ಶೇ 3.27ರಷ್ಟು ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

35ರಿಂದ 40 ರುಪಾಯಿಗೆ ಲೀಟರ್ ಪೆಟ್ರೋಲ್ ನೀಡುತ್ತೇನೆ: ರಾಮ್ ದೇವ್

ಆ ಕಾರಣಕ್ಕೆ ಸೆಪ್ಟೆಂಬರ್ 18, 2018ರಿಂದ ಅನ್ವಯ ಆಗುವಂತೆ ಪೆಟ್ರೋಲ್ ಮಾರಾಟ ತೆರಿಗೆಯು ಶೇ 28.75 ಹಾಗೂ ಡೀಸೆಲ್ ಮೇಲಿನ ತೆರಿಗೆ ಶೇ 17.73ರಷ್ಟು ಆಗಲಿದೆ. ತೆರಿಗೆ ಇಳಿಕೆ ಆಗುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ನಲ್ಲಿ ತಲಾ ಎರಡು ರುಪಾಯಿ ಇಳಿಕೆ ಕಾಣಲಿದೆ. ಆ ಮೂಲಕ ಪೆಟ್ರೋಲ್ ಲೀಟರ್ ಗೆ ರು. 82.80 ಹಾಗೂ ಡೀಸೆಲ್ ರು.74.21 ಆಗಲಿದೆ.

ಇತರ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್- ಡೀಸೆಲ್ ದರವು ಕರ್ನಾಟಕದಲ್ಲಿ ಕಡಿಮೆ ಇದ್ದರೂ ಗ್ರಾಹಕರ ಮೇಲಿನ ಹೊರೆಯನ್ನು ಇಳಿಸುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ರಾಜ್ಯ ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗಿದ್ದರೆ ಸೆಪ್ಟೆಂಬರ್ 17ಕ್ಕೆ ಅನ್ವಯ ಆಗುವಂತೆ ಯಾವ ರಾಜ್ಯದಲ್ಲಿ ಎಷ್ಟು ದರ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು (ಕರ್ನಾಟಕ)

ಪೆಟ್ರೋಲ್ 84.80

ಡೀಸೆಲ್ 76.21

ಹೊಸೂರು (ತಮಿಳುನಾಡು)

ಪೆಟ್ರೋಲ್ 86.98

ಡೀಸೆಲ್ 79.58

ಕಾಸರಗೋಡು (ಕೇರಳ)

ಪೆಟ್ರೋಲ್ 84.93

ಡೀಸೆಲ್ 78.53

ಅನಂತಪುರ (ಆಂಧ್ರಪ್ರದೇಶ)

ಪೆಟ್ರೋಲ್ 86.47

ಡೀಸೆಲ್ 79.37

ಕಾಗಲ್ (ಮಹಾರಾಷ್ಟ್ರ)

ಪೆಟ್ರೋಲ್ 89.71

ಡೀಸೆಲ್ 77.40

English summary
Karnataka state government reduced 2 rupees sales tax on petrol and diesel. The effective price come in to effect from September 18, 2018. Here is the detailed story and price comparison with other states.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X