• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ತೆಗೆದುಹಾಕಲು ಮುಂದಾದ ಬಿಜೆಪಿ ಸರ್ಕಾರ

|
   Karnataka Education Minister to Seeks report on Proposal to write off Tipu Sultan from Text Books

   ಬೆಂಗಳೂರು, ಅಕ್ಟೋಬರ್ 30: ಟಿಪ್ಪು ಜಯಂತಿ ಆಚರಣೆ ಬಗ್ಗೆ ಅನೇಕ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿ, ಸರ್ಕಾರದಿಂದ ಯಾವುದೇ ಅಧಿಕೃತ ಆಚರಣೆ ಇಲ್ಲ ಎಂಬ ಸಂದೇಶ ಹೊರ ಬಂದ ಬೆನ್ನಲ್ಲೇ ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದು ಹಾಕಲು ಸರ್ಕಾರ ಮುಂದಾಗಿರುವ ಬಗ್ಗೆ ಸುದ್ದಿ ಬಂದಿದೆ.

   ಟಿಪ್ಪು ಸುಲ್ತಾನ್ ಕುರಿತ ಪಾಠವನ್ನು ತೆಗೆದುಹಾಕುವ ಬಗ್ಗೆ ಇತಿಹಾಸ ಪಠ್ಯಪುಸ್ತಕ ರಚನಾ ಸಮಿತಿ ಸಭೆ ಕರೆದು ಮೂರು ದಿನದೊಳಗೆ ವರದಿ ಸಲ್ಲಿಸುವಂತೆ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಪ್ರಾಥಮಿಕ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಆದೇಶಿಸಿದ್ದಾರೆ.

   ಅಪ್ರತಿಮ ದೇಶಭಕ್ತ ಹುತಾತ್ಮ ಹಜರತ್ ಟಿಪ್ಪು ಸುಲ್ತಾನ್

   ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಇದಕ್ಕೂ ಮುನ್ನ ಈ ಕುರಿತಂತೆ ಮನವಿ ಸಲ್ಲಿಸಿದ್ದರು. ಟಿಪ್ಪು ಸುಲ್ತಾನ್ ಕುರಿತಂತೆ ಪಾಠಗಳನ್ನು ಪಠ್ಯದಿಂದ ತೆಗೆದು ಹಾಕುವಂತೆ ಕೋರಿದ್ದರು. ಇದಾದ ಬಳಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಗೆ ಈ ಸೂಚನೆ ನೀಡಿದ್ದಾರೆ.

   ಪಠ್ಯಪುಸ್ತಕ ರಚನಾ ಸಮಿತಿ ಸಭೆಗೆ ಈ ಶಾಸಕರನ್ನೂ ಆಹ್ವಾನಿಸಿ. ಈ ಪಠ್ಯದ ಅಗತ್ಯ ಹಾಗೂ ಅದನ್ನು ಉಳಿಸಿಕೊಳ್ಳುವ ಇಲ್ಲವೇ ತೆಗೆದು ಹಾಕುವ ಕುರಿತು ಸಾಧಕ ಬಾಧಕಗಳ ಕುರಿತಂತೆ ಚರ್ಚಿಸಬೇಕು ಎಂದು ಸಚಿವ ಸುರೇಶ್ ಸೂಚಿಸಿದ್ದಾರೆ

   ಪಠ್ಯದಲ್ಲಿ ಟಿಪ್ಪು ಬದಲಿಗೆ ಮುಂದಿನ ಪೀಳಿಗೆಗೆ ದೇಶಪ್ರೇಮ, ರಾಷ್ಟ್ರಭಕ್ತಿ ಮೂಡಿಸುವ ಪಠ್ಯವನ್ನು ಅಳವಡಿಸಬೇಕು ಎಂದು ಶಾಸಕ ಅಪ್ಪಚ್ಚು ರಂಜನ್ ಮನವಿ ಸಲ್ಲಿಸಿದ್ದರು. ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಈ ಬಾರಿ ಆಚರಣೆಯನ್ನು ಸರ್ಕಾರ ಕೈಬಿಟ್ಟಿದೆ. ಅದರ ಬೆನ್ನಲ್ಲೇ ಪಠ್ಯದಿಂದಲೂ ಟಿಪ್ಪು ಸುಲ್ತಾನ್ ಚರಿತ್ರೆಯನ್ನು ತೆಗೆಯಬೇಕೆಂಬ ಒತ್ತಾಯ ಕೇಳಿ ಬಂದಿದೆ.

   ಕೊಡವರು ಟಿಪ್ಪುವನ್ನು ವಿರೋಧಿಸುವುದೇಕೆ?

   ಹಜರತ್ ಟಿಪ್ಪು ಸುಲ್ತಾನ ಅವರು 1750 ನವೆಂಬರ 10 ರಂದು ಬೆಂಗಳೂರು ಬಳಿಯ ದೇವನಹಳ್ಳಿಯಲ್ಲಿ ಜನಿಸಿದರು. ತಂದೆ ಹೈದರಾಲಿ, ತಾಯಿ ಪಾತೀಮಾ ಫಕರುನ್ನೀಸಾ. ಅವರು ಬಾಲ್ಯದಲ್ಲಿಯೇ ಅನೇಕ ಯುದ್ಧ ಕೌಶಲ್ಯಗಳನ್ನು ತಮ್ಮ ತಂದೆ ಹೈದರಾಲಿ ಅವರೊಂದಿಗಿದ್ದ ಫ್ರೆಂಚ್ ಅಧಿಕಾರಿಗಳು ಹಾಗೂ ಅವರ ಗುರು ಮೊಹ್ಮದ ಫಲಕ್ಅಲಿ ಅವರಿಂದ ಕಲಿತಿದ್ದರು. 1799ರಲ್ಲಿ ಟಿಪ್ಪು ಸುಲ್ತಾನ್ ಮೃತರಾಗಿದ್ದು, ಶ್ರೀರಂಗಪಟ್ಟಣದಲ್ಲಿ ಸಮಾಧಿ ಇದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Karnataka's primary and secondary education minister Suresh Kumar has written to the Text Book Society to give report on Proposal to take back Tipu Sultan from History text books
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more