ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಸ್ವಾಮಿ ಸರ್ಕಾರದಿಂದ ಮತ್ತೊಂದು ಸಾಲಮನ್ನಾಕ್ಕೆ ಯೋಜನೆ

|
Google Oneindia Kannada News

Recommended Video

ವಿದ್ಯಾರ್ಥಿಗಳ ಶಿಕ್ಷಣ ಸಾಲ ಮನ್ನಾಕ್ಕೆ ಮುಂದಾಗಿದೆ ಎಚ್ ಡಿ ಕುಮಾರಸ್ವಾಮಿ ಸರ್ಕಾರ | Oneindia Kannada

ಬೆಂಗಳೂರು, ಅಕ್ಟೋಬರ್ ೦9: ರೈತರ ಬೆಳೆಸಾಲಮನ್ನಾ ಮಾಡಿರುವ ರಾಜ್ಯದ ಮೈತ್ರಿ ಸರ್ಕಾರ ಮತ್ತೊಂದು ಸಾಲಮನ್ನಾಕ್ಕೆ ಯೋಜನೆ ತಯಾರಿಸುತ್ತಿದೆ.

ಬೆಳೆಸಾಲದ ನಂತರ ಈಗ ಶಿಕ್ಷಣ ಸಾಲಮನ್ನಾ ಮಾಡಲು ಸರ್ಕಾರ ಮುಂದಾಗುತ್ತಿದೆ. ತಮ್ಮ ಶಿಕ್ಷಣಕ್ಕಾಗಿ ರಾಜ್ಯದ ವಿದ್ಯಾರ್ಥಿಗಳು ಪಡೆದ ಸಾಲಮನ್ನಾ ಸರ್ಕಾರ ಮನ್ನಾ ಮಾಡಲಿದೆ. ಆದರೆ ಇದರ ಲಾಭ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರವೇ ದೊರೆಯಲಿದೆ.

ಸಾಲಮನ್ನಾ ಅರ್ಜಿ, ರೈತರು ಆತಂಕ ಪಡಬೇಕಿಲ್ಲ:ಕುಮಾರಸ್ವಾಮಿ ಅಭಯಸಾಲಮನ್ನಾ ಅರ್ಜಿ, ರೈತರು ಆತಂಕ ಪಡಬೇಕಿಲ್ಲ:ಕುಮಾರಸ್ವಾಮಿ ಅಭಯ

ಸಮಾಜ ಕಲ್ಯಾಣ ಇಲಾಖೆ ಎದುರು ಸಂಘಟನೆಯೊಂದು ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಮನ್ನಾ ಮಾಡುವಂತೆ ಮನವಿ ಮಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಕ್ರಮಕ್ಕೆ ಮುಂದಾಗಿದ್ದು ಮುಖ್ಯಮಂತ್ರಿಗಳ ಮುಂದೆಯೂ ಪ್ರಸ್ತಾವನೆಯನ್ನು ಇಟ್ಟಿದೆ.

ಜಿಲ್ಲಾ ಅಧಿಕಾರಿಗಳಿಗೆ ಸೂಚನೆ

ಜಿಲ್ಲಾ ಅಧಿಕಾರಿಗಳಿಗೆ ಸೂಚನೆ

ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಪಡೆದಿರುವ ಶೈಕ್ಷಣಿಕ ಸಾಲಗಳ ಬಗ್ಗೆ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆಯು ಈಗಾಗಲೇ ತನ್ನ ಇಲಾಖೆಯ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ ಕಾರಣಾಂತರಗಳಿಂದ ಮಾಹಿತಿ ವಿಳಂಬವಾಗಿದೆ ಎನ್ನಲಾಗಿದೆ. ತುರ್ತಾಗಿ ಮಾಹಿತಿ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ ಸಾಲಮನ್ನಾ ಯೋಜನೆಗಾಗಿ ಅಭಿವೃದ್ಧಿ ಬಲಿ ಕೊಡಲ್ಲ: ಎಚ್ಡಿಕೆ ಅಭಯ

ಏನೇನು ಮಾಹಿತಿ ಕೇಳಲಾಗಿದೆ?

ಏನೇನು ಮಾಹಿತಿ ಕೇಳಲಾಗಿದೆ?

ಶೈಕ್ಷಣಿಕ ಸಾಲ ಪಡೆದ ಪರಿಶಿಷ್ಟ ಜಾತಿ/ಪಂಗಡ ವಿದ್ಯಾರ್ಥಿಯ ಹೆಸರು, ವಿಳಾಸ, ಬ್ಯಾಂಕ್ ಖಾತೆ, ಶಿಕ್ಷಣ ಸಂಸ್ಥೆ, ಪ್ರಸ್ತುತ ಓದುತ್ತಿರುವ ಅಥವಾ ಮಾಡುತ್ತಿರುವ ಉದ್ಯೋಗದ ಬಗ್ಗೆ ಮಾಹಿತಿ. ಸಾಲದ ಪ್ರಮಾಣ, ಕುಟುಂಬ ಮಾಹಿತಿ, ಇಷ್ಟನ್ನೂ ಇಲಾಖೆಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಬೆಳೆಸಾಲ ಮನ್ನಾ ಪ್ರಯೋಜನ ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯ ಅಲ್ಲಬೆಳೆಸಾಲ ಮನ್ನಾ ಪ್ರಯೋಜನ ಪಡೆಯಲು ಪ್ಯಾನ್ ಕಾರ್ಡ್ ಕಡ್ಡಾಯ ಅಲ್ಲ

ಲ್ಯಾಪ್‌ಟಾಪ್ ಮತ್ತು ಪಾಸ್ ಕೊಡುವಲ್ಲಿ ವಿಫಲ

ಲ್ಯಾಪ್‌ಟಾಪ್ ಮತ್ತು ಪಾಸ್ ಕೊಡುವಲ್ಲಿ ವಿಫಲ

ಕಳೆದ ಬಾರಿ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಮಾತ್ರವೇ ನೀಡಿದ್ದ ಲ್ಯಾಪ್‌ಟಾಪ್ ಅನ್ನು ಎಲ್ಲ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ನೀಡುವುದಾಗಿ ಹೇಳಲಾಗಿತ್ತು. ಆದರೆ ಆ ಯೋಜನೆ ಜಾರಿಗೆ ಬಂದಿಲ್ಲ. ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ನೀಡುವ ಯೋಜನೆಯೂ ಜಾರಿಗೆ ಬಂದಿಲ್ಲ. ಆದರೆ ಅಷ್ಟರಲ್ಲಾಗಲೆ ಶೈಕ್ಷಣಿಕ ಸಾಲಮನ್ನಾ ಯೋಜನೆ ಮಾಡಲಾಗುತ್ತಿದೆ. ಈ ಯೋಜನೆಯೂ ಈ ಮುಂಚಿನ ಯೋಜನೆಗಳಂತೆ ಹಳ್ಳಹಿಡಿಯುತ್ತವೆಯೋ ಕಾದು ನೋಡಬೇಕು.

ಮತ್ತೊಂದು ಸಾಲಮನ್ನಾ ಸಾಧ್ಯವಾ?

ಮತ್ತೊಂದು ಸಾಲಮನ್ನಾ ಸಾಧ್ಯವಾ?

ಈಗಾಗಲೇ ಮೈತ್ರಿ ಸರ್ಕಾರವು 45000 ಕೋಟಿ ರೂಪಾಯಿ ಬೆಳೆ ಸಾಲಮನ್ನಾ ಮಾಡಿ ಆದೇಶ ಹೊರಡಿಸಿದ್ದು, ಹಂತ-ಹಂತವಾಗಿ ಸಾಲಮನ್ನಾ ಆಗುತ್ತಲಿದೆ. ಕೃಷಿ ಸಾಲಮನ್ನಾಕ್ಕೆ ಸಂಪನ್ಮೂಲ ಕ್ರೂಡೀಕರಣ ಕಷ್ಟವಾಗಿದೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮತ್ತೊಂದು ಸಾಲಮನ್ನಾ ರಾಜ್ಯದ ಬೊಕ್ಕಸದ ದೃಷ್ಠಿಯಿಂದ ಸರಿಯೇ ಎಂಬ ಪ್ರಶ್ನೆ ಸಹ ಮೂಡಿಸುತ್ತದೆ.

English summary
Karnataka state government planing to waive off SC/ST students education loan. Social welfare department asked its district officers to collect details of education loans of SC/ST students.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X