• search

ಪಂಜಾಬ್ ಮಾದರಿಯಲ್ಲಿ ರೈತ ಸಾಲಮನ್ನಾ: ಏನಿದು ಪಂಜಾಬ್ ಮಾದರಿ?

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಕರ್ನಾಟಕ ಸರ್ಕಾರ ಪಂಜಾಬ್ ಮಾದರಿಯಲ್ಲಿ ರೈತರ ಸಾಲ ಮನ್ನಾ ಮಾಡಲು ಪ್ಲಾನ್

    ಬೆಂಗಳೂರು, ಜೂನ್ 21: ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಬದ್ಧ ಎಂದಿದ್ದು, ರಾಜ್ಯಕ್ಕೆ ಆರ್ಥಿಕ ಹೊರೆ ಆಗದಂತೆ ಸಾಲಮನ್ನಾ ಮಾಡುವ ಸವಾಲು ಸರ್ಕಾರಕ್ಕಿದೆ. ಆರ್ಥಿಕ ಹೊರೆ ತಗ್ಗಿಸಲು ಸರ್ಕಾರವು ಪಂಜಾಬ್ ಮಾದರಿಯ ಮೋರೆ ಹೋಗಲಿದೆ.

    ಕಳೆದ ವರ್ಷವಷ್ಟೆ ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರವು ರೈತರ ಸಾಲ ಮನ್ನಾ ಮಾಡಿತ್ತು. ರಾಜ್ಯದ ಮೈತ್ರಿ ಸರ್ಕಾರ ಕೂಡ ಪಂಜಾಬ್ ಮಾದರಿಯನ್ನು ಅನುಸರಿಸಲು ಚಿಂತಿಸಿದ್ದು, ಅದೇ ಮಾದರಿಯಲ್ಲಿ ಕರಡು ರಚನೆಯನ್ನೂ ಮಾಡಿದೆ.

    ಪಂಜಾಬ್ ಮಾದರಿಯಲ್ಲಿ ಸಾಲಮನ್ನಾ, ಕರಡು ಪ್ರತಿ ಸಿದ್ಧ: ಮೊಯಿಲಿ

    ಹಾಗಿದ್ದರೆ ಏನಿದು ಪಂಜಾಬ್ ಮಾದರಿ. ಪಂಜಾಬ್‌ನಲ್ಲಿ ಸಾಲ ಮನ್ನಾ ಮಾಡಿದ್ದು ಹೇಗೆ? ಎಂಬ ಪ್ರಶ್ನೆಗಳು ಸಹಜ ಅವಕ್ಕೆಲ್ಲಾ ಉತ್ತರ ನೀಡುವ ಪ್ರಯತ್ನ ಮಾಡುತ್ತದೆ ಈ ಲೇಖನ.

    ಪಂಜಾಬ್ ಸರ್ಕಾರ ಸಾಲಮನ್ನಾ

    ಪಂಜಾಬ್ ಸರ್ಕಾರ ಸಾಲಮನ್ನಾ

    ಪಂಜಾಬ್‌ನಲ್ಲಿ ಕಳೆದ ವರ್ಷ ಜೂನ್ 19ರಂದು ರೈತರ ಸಾಲಮನ್ನಾದ ಅಧಿಕೃತ ಘೋಷಣೆ ಮಾಡಿದರು ಅಲ್ಲಿನ ಮುಖ್ಯಮಂತ್ರಿ ಕ್ಯಾ.ಅಮರೀಂದರ್ ಸಿಂಗ್. ಪಂಜಾಬ್ ಸರ್ಕಾರ 3 ಹಂತಗಳಲ್ಲಿ ರೈತರ ಸಾಲ ಮನ್ನಾ ಮಾಡಿತು. ಹಂತ ಹಂತವಾಗಿ ಮಾಡಿದ ಸಾಲಮನ್ನಾ ಸರ್ಕಾರದ ಮೇಲೆ ಹೆಚ್ಚಿನ ಹೊರೆ ಹಾಕಲಿಲ್ಲ.

    ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ

    ರೈತರ ವರ್ಗೀಕರಣ ಮಾಡಿ ಸಾಲಮನ್ನಾ

    ರೈತರ ವರ್ಗೀಕರಣ ಮಾಡಿ ಸಾಲಮನ್ನಾ

    ರೈತರನ್ನೂ ಸಹ ಅವರ ಸಾಲ ಮತ್ತು ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವರ್ಗೀಕರಣ ಮಾಡಿ ಸಾಲಮನ್ನಾ ಮಾಡಲಾಗಿತ್ತು. ಸಣ್ಣ ಪ್ರಮಾಣದ ರೈತನ ಸಂಪೂರ್ಣ ಸಾಲ ಮನ್ನಾ ಆದರೆ ಮಧ್ಯಮದವನ ಅಸಲು ಮಾತ್ರವೇ ಮನ್ನಾ ಆಗಿತ್ತು. ಹೆಚ್ಚು ಜಮೀನು ಹೊಂದಿದ ರೈತನಿಗೆ ಬಡ್ಡಿ ಮಾತ್ರವೇ ಮನ್ನಾ ಆಗಿತ್ತು.

    ಹಂತಗಳಲ್ಲಿ ಸಾಲಮನ್ನಾ

    ಹಂತಗಳಲ್ಲಿ ಸಾಲಮನ್ನಾ

    ಹಂತಗಳಲ್ಲಿ ಸಾಲ ಮನ್ನಾ ಆದ್ದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಆಗಲಿಲ್ಲ. ವಿರೋಧ ಪಕ್ಷ ಮಾಮೂಲಿನಂತೆ ವಿರೋಧ ವ್ಯಕ್ತಪಡಿಸಿದವಾದರೂ ರೈತರು ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದರಲ್ಲದೇ ಯೋಜನೆ ಯಶಸ್ವಿಯೂ ಆಯಿತು. ರೈತರೂ ಸಹ ಸರ್ಕಾರದ ನಿರ್ಣಯವನ್ನು ಸ್ವಾಗತಿಸಿದ್ದರು.

    ಕೇಂದ್ರದಿಂದ ದೊಡ್ಡ ಮಟ್ಟದ ನೆರವು ನಿರೀಕ್ಷಿಸುವಂತಿಲ್ಲ

    ಕೇಂದ್ರದಿಂದ ದೊಡ್ಡ ಮಟ್ಟದ ನೆರವು ನಿರೀಕ್ಷಿಸುವಂತಿಲ್ಲ

    ಉತ್ತರ ಪ್ರದೇಶ ಸರ್ಕಾರ, ಮಹಾರಾಷ್ಟ್ರ ಸರ್ಕಾರಗಳು ಕೂಡಾ ರೈತರ ಸಾಲ ಮನ್ನಾ ಮಾಡಿದ್ದವು ರಾಜಸ್ಥಾನ ಕೂಡಾ ರೈತರ ಸಾಲ ಮನ್ನಾ ಮಾಡುವ ಪ್ರಯತ್ನದಲ್ಲಿದೆ. ಉತ್ತರ ಪ್ರದೇಶಕ್ಕೆ ಕೇಂದ್ರದ ದೊಡ್ಡ ನೆರವು ಸಿಕ್ಕಿತ್ತು. ಆದರೆ ಕರ್ನಾಟಕದಲ್ಲಿ ರಾಜಕೀಯ ಕಾರಣಕ್ಕಾಗಿ ದೊಡ್ಡ ನೆರವನ್ನು ನಿರೀಕ್ಷಿಸುವಂತಿಲ್ಲ.

    ಸಮನ್ವಯ ಸಮಿತಿಯಲ್ಲಿ ನಿರ್ಧಾರ

    ಸಮನ್ವಯ ಸಮಿತಿಯಲ್ಲಿ ನಿರ್ಧಾರ

    ಹಾಗಾಗಿ ಸರ್ಕಾರವು ಆರ್ಥಿಕ ಹೊರೆಯಾಗದ ಪಂಜಾಬ್ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಸಮನ್ವಯ ಸಮಿತಿ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿಯೂ ಪಂಜಾಬ್‌ ಮಾದರಿಯಲ್ಲೇ ಸಾಲಮನ್ನಾ ಮಾಡಲು ಒಕ್ಕೂರಲ ಒಮ್ಮತ ವ್ಯಕ್ತವಾಗಿದೆ.

    ಶ್ರೀಮಂತ ರೈತರ ಸಾಲಮನ್ನಾ ಇಲ್ಲ

    ಶ್ರೀಮಂತ ರೈತರ ಸಾಲಮನ್ನಾ ಇಲ್ಲ

    ರೈತರ ಸಾಲ ಮನ್ನಾ ಎಂದ ಕೂಡಲೇ ಎಕರೆಗಟ್ಟಲೆ ಜಮೀನು ಹೊಂದಿರುವ, ಭಾರಿ ಕಾರು, ಆಳು-ಕಾಳು ಹೊಂದಿರುವ ಶ್ರೀಮಂತ ರೈತನ ಸಾಲವನ್ನೂ ಮನ್ನಾ ಮಾಡಬೇಕೆ ಎಂಬ ಪ್ರಶ್ನೆ ಏಳುತ್ತದೆ. ಪಂಜಾಬ್ ಮಾದರಿ ಅನುಸರಿಸಿದಲ್ಲಿ ಶ್ರೀಮಂತ ರೈತನ ಸಾಲಮನ್ನಾ ವಾಗದೆ ಕೇವಲ ಬಡ ರೈತನ ಸಾಲ ಮಾತ್ರವೇ ಮನ್ನಾ ಆಗುತ್ತದೆ.

    ಪಂಜಾಬ್ ಮಾದರಿಯಲ್ಲಿ ಹೊರೆ ಕಡಿಮೆ

    ಪಂಜಾಬ್ ಮಾದರಿಯಲ್ಲಿ ಹೊರೆ ಕಡಿಮೆ

    ಹಂತ ಹಂತವಾಗಿ ಸಾಲ ಮನ್ನಾ ಆಗುವ ಕಾರಣ ಸರ್ಕಾರಕ್ಕೆ ಹೆಚ್ಚು ಆರ್ಥಿಕ ಹೊರೆ ಆಗುವುದಿಲ್ಲ, ಹಾಗೂ ರೈತನಿಗೆ ಗೊಂದಲವಾಗದ ರೀತಿಯಲ್ಲಿ ನೇರವಾಗಿ ಮನೆ ಬಾಗಿಲಿಗೆ ಸಾಲಮನ್ನಾ ಪತ್ರ ರವಾನೆ ಆಗುತ್ತದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Karnataka state government planing to follow Punjab government way in farmers loan waive off. Punjab government last year waive off farmers loan periodic wise.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more