ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿ-ಫೋರ್ ಸಮೀಕ್ಷೆ : ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಹೇಳುವುದೇನು?

|
Google Oneindia Kannada News

ಬೆಂಗಳೂರು, ಮಾರ್ಚ್ 26 : ಸಿ-ಫೋರ್ ಸಂಸ್ಥೆ 2018ರ ಕರ್ನಾಟಕ ವಿಧಾನಸಭೆ ಚುನಾವಣೆ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಶೇ 21ರಷ್ಟು ಜನರು ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿ ತಂದಿದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮಾರ್ಚ್ 1 ರಿಂದ 25ರ ತನಕ ಸಿ-ಫೋರ್ ಸಂಸ್ಥೆ ರಾಜ್ಯದಲ್ಲಿ ಸಮೀಕ್ಷೆ ನಡೆಸಿದ್ದು, ಸಮೀಕ್ಷಾ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ರಾಜ್ಯದ 154 ವಿಧಾನಸಭಾ ಕ್ಷೇತ್ರಗಳಲ್ಲಿ 22,357 ಜನರನ್ನು ಸಂದರ್ಶನ ಮಾಡಿ ಸಮೀಕ್ಷೆ ಮಾಡಲಾಗಿದೆ.

ಸಿ-ಫೋರ್ ಹೊಸ ಸಮೀಕ್ಷೆ: ಕಾಂಗ್ರೆಸಿಗೆ 2013ಕ್ಕಿಂತ ದೊಡ್ಡ ಜಯಸಿ-ಫೋರ್ ಹೊಸ ಸಮೀಕ್ಷೆ: ಕಾಂಗ್ರೆಸಿಗೆ 2013ಕ್ಕಿಂತ ದೊಡ್ಡ ಜಯ

326 ನಗರ, 977 ಗ್ರಾಮೀಣ ಪ್ರದೇಶಗಳನ್ನು ಸಮೀಕ್ಷೆ ಒಳಗೊಂಡಿದೆ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ 126 ಕ್ಷೇತ್ರಗಳಲ್ಲಿ ಜಯಗಳಿಸಿದಲಿದೆ ಎಂದು ಸಮೀಕ್ಷೆ ಹೇಳಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆಡಳಿತ ತೃಪ್ತಿ ತಂದಿದೆಯೇ? ಎಂದು ಸಮೀಕ್ಷೆಯಲ್ಲಿ ಜನರನ್ನು ಪ್ರಶ್ನಿಸಲಾಗಿದೆ. ಸಮೀಕ್ಷಾ ವರದಿಯ ಪ್ರಕಾರ ಶೇ 25ರಷ್ಟು ಜನರು ಆಡಳಿತ ತೃಪ್ತಿ ತಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಮೀಕ್ಷೆಯ ಫಲಿತಾಂಶ ಇಲ್ಲಿದೆ..

ಕರ್ನಾಟಕ ಸರ್ಕಾರದ ಆಡಳಿತ ಹೇಗಿದೆ?

ಕರ್ನಾಟಕ ಸರ್ಕಾರದ ಆಡಳಿತ ಹೇಗಿದೆ?

ಸಿ-ಫೋರ್ ಸಮೀಕ್ಷೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಆಡಳಿತ ಹೇಗಿದೆ? ಎಂದು ಜನರನ್ನು ಪ್ರಶ್ನೆ ಮಾಡಲಾಗಿದೆ. ಶೇ 21ರಷ್ಟು ಜನರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅಧಿಕಾರ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.

* ಆಡಳಿತ ತೃಪ್ತಿ ತಂದಿದೆ ಶೇ 21ರಷ್ಟು ಜನರು
* ಕೆಲವೊಮ್ಮೆ ತೃಪ್ತಿ ತಂದಿದೆ 54 ರಷ್ಟು ಜನರು
* ತೃಪ್ತಿ ತಂದಿಲ್ಲ ಶೇ 25ರ ರಷ್ಟು ಜನರು

ಯಾವ ಪಕ್ಷ ಬಡವರ ಪರವಾಗಿದೆ?

ಯಾವ ಪಕ್ಷ ಬಡವರ ಪರವಾಗಿದೆ?

ಸಿ-ಫೋರ್ ಸಮೀಕ್ಷೆಯಲ್ಲಿ ಕರ್ನಾಟಕ ಯಾವ ಪಕ್ಷ ಬಡವರ ಪರವಾಗಿದೆ? ಎಂದು ಜನರನ್ನು ಪ್ರಶ್ನೆ ಮಾಡಲಾಗಿದೆ. ಶೇ 65 ರಷ್ಟು ಜನರು ಕಾಂಗ್ರೆಸ್ ಬಡವರ ಪರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ - ಶೇ 65
ಬಿಜೆಪಿ - ಶೇ 19
ಜೆಡಿಎಸ್ - ಶೇ 10
ಇತರೆ/ಹೇಳುವುದು ಕಷ್ಟ - ಶೇ 6

ಯಾವ ಪಕ್ಷ ರೈತರ ಪರವಾಗಿದೆ?

ಯಾವ ಪಕ್ಷ ರೈತರ ಪರವಾಗಿದೆ?

ಸಿ-ಫೋರ್ ಸಮೀಕ್ಷೆಯಲ್ಲಿ ಕರ್ನಾಟಕದ ಯಾವ ಪಕ್ಷ ರೈತರ ಹಿತ ಕಾಪಾಡಲಿದೆ? ಎಂದು ಪ್ರಶ್ನೆ ಮಾಡಲಾಗಿದೆ. ಶೇ 64ರಷ್ಟು ಜನರು ಕಾಂಗ್ರೆಸ್ ಪಕ್ಷ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ - ಶೇ 64
ಬಿಜೆಪಿ - ಶೇ 18
ಜೆಡಿಎಸ್ - ಶೇ 15
ಇತರೆ/ಹೇಳುವುದು ಕಷ್ಟ - ಶೇ 3

ಯಾವ ಪಕ್ಷ ದಲಿತರ ಪರವಾಗಿದೆ?

ಯಾವ ಪಕ್ಷ ದಲಿತರ ಪರವಾಗಿದೆ?

ಸಿ-ಫೋರ್ ಸಮೀಕ್ಷೆಯಲ್ಲಿ ಕರ್ನಾಟಕದ ಯಾವ ಪಕ್ಷ ದಲಿತರ ಪರವಾಗಿದೆ? ಎಂದು ಪ್ರಶ್ನಿಸಲಾಗಿದೆ. ಶೇ 74 ರಷ್ಟು ಜನರು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.

ಕಾಂಗ್ರೆಸ್ - ಶೇ 74
ಬಿಜೆಪಿ - ಶೇ 11
ಜೆಡಿಎಸ್ - ಶೇ 9
ಇತರೆ/ಹೇಳುವುದು ಕಷ್ಟ - ಶೇ 6

ಯಾವ ಪಕ್ಷ ಹಿಂದುಳಿದ ವರ್ಗದ ಪರವಾಗಿದೆ?

ಯಾವ ಪಕ್ಷ ಹಿಂದುಳಿದ ವರ್ಗದ ಪರವಾಗಿದೆ?

ಸಿ-ಫೋರ್ ಸಮೀಕ್ಷೆಯಲ್ಲಿ ಕರ್ನಾಟಕದ ಯಾವ ಪಕ್ಷ ಹಿಂದುಳಿದ ವರ್ಗದ ಪರವಾಗಿದೆ? ಎಂದು ಪ್ರಶ್ನಿಸಲಾಗಿದೆ. ಶೇ 57 ರಷ್ಟು ಜನರು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.

ಕಾಂಗ್ರೆಸ್ - ಶೇ 57
ಬಿಜೆಪಿ - ಶೇ 27
ಜೆಡಿಎಸ್ - ಶೇ 9
ಇತರೆ/ಹೇಳುವುದು ಕಷ್ಟ - ಶೇ 7

English summary
Karnataka Assembly Elections 2018 : In a C-Fore pre-poll survey 21% people externally satisfied with the Karnataka government performance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X