ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಯ ಮುಖ್ಯಮಂತ್ರಿಗಳೇ, ಸರಕಾರದ ಬೊಕ್ಕಸ ತುಂಬಲು ಇದೇನಾ ರಾಜಮಾರ್ಗ?

|
Google Oneindia Kannada News

Recommended Video

ರೈತರ ಸಾಲಾ ಮನ್ನಾ ಫಿಕ್ಸ್..! | Oneindia Kannada

ರಾಜ್ಯದಲ್ಲಿ ಸಾರಾಯಿ ಬಂದ್ ಮಾಡಲಾಗಿದೆ. ಆದರೆ, ಸಾರಾಯಿ ಕುಡಿಯುವುದು ನಿಂತಿದ್ಯಾ? ಮೊದಲು ಮೂವತ್ತು ರೂಪಾಯಿಗೆ ಎರಡು ಪ್ಯಾಕೆಟ್ ಕುಡಿದು ಚಟ ತೀರಿಸಿಕೊಳ್ಳುತ್ತಿದ್ದರು, ಈಗ ಎರಡು ಕ್ವಾಟರ್ ಕುಡಿಯಂತಾಗಿದೆ. ಆರ್ಥಿಕವಾಗಿ ಇನ್ನಷ್ಟು ಬಲಹೀನಗೊಳ್ಳುತ್ತಿದ್ದಾರೆ ಎಂದು ತಮ್ಮ ಸಿಎಂ ಅವಧಿಯಲ್ಲಿ ಸಿದ್ದರಾಮಯ್ಯ ಹೇಳಿದ್ದರು.

ಸಾಲಮನ್ನಾದ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲು, ಮುಖ್ಯಮಂತ್ರಿ ಕುಮಾರಸ್ವಾಮಿ ಮೊದಲಿಗೆ ಕೈಹಾಕಿದ್ದು ಕುಡುಕರ ಜೇಬಿಗೆ. ಮದ್ಯ ಉತ್ಪನ್ನಗಳ ಮೇಲಿನ ಅಬಕಾರಿ ಶುಂಕವನ್ನು ಜಾಸ್ತಿ ಮಾಡಿ, ಅದನ್ನು ರೈತರ ಸಾಲಮನ್ನಾ ಮಾಡಲು ಬಳಸಿಕೊಳ್ಳುವುದಾಗಿ ಹೇಳಿದ್ದರು.

ರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟ ನಿಷೇಧ: ಸಿಎಂರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟ ನಿಷೇಧ: ಸಿಎಂ

ಅಬಕಾರಿ ಖಾತೆ ನನ್ನ ಬಳಿಯೇ ಇದೆ. ಈವರೆಗೆ ಯಾವುದೇ ಹೊಸ ಮದ್ಯದಂಗಡಿಗೆ ಪರವಾನಿಗೆ ನೀಡುವ ಕಾರ್ಯ ಆಗಿಲ್ಲ. ಆ ಬಗ್ಗೆ ಪ್ರಸ್ತಾವನೆ ಕೂಡಾ ಸರ್ಕಾರದ ಮುಂದೆ ಇಲ್ಲ ಎಂದು ಸೆಪ್ಟಂಬರ್ ತಿಂಗಳಲ್ಲಿ ಹೇಳಿದ್ದ ಸಿಎಂ ಕುಮಾರಸ್ವಾಮಿ, ಈಗ ರಾಜ್ಯದ ಬೊಕ್ಕಸಕ್ಕೆ ಇನ್ನಷ್ಟು ಆದಾಯ ತರಲು ಮತ್ತೆ ಅಬಕಾರಿ ಇಲಾಖೆಗೆ ಕೈಹಾಕಿದ್ದಾರೆ.

ರಾಜ್ಯ ಸರಕಾರದ ಅಧೀನದ ಮಾರ್ಕೆಂಟಿಗ್ ಸಂಸ್ಥೆ ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಮೂಲಕ, ಹಳ್ಳಿಹಳ್ಳಿಗಳಲ್ಲೂ ತಮ್ಮ ಮದ್ಯದ ಔಟ್ಲೆಟ್ ತೆರೆಯಲು ಮುಂದಾಗಿದೆ. ಆ ಮೂಲಕ, ಕುಡುಕರಿಗೆ ಇನ್ನಷ್ಟು ಉತ್ತೇಜನ ಸರಕಾರ ನೀಡುತ್ತಿದೆ ಎನ್ನುವ ಆಪಾದನೆ ಕೇಳಿಬರುತ್ತಿದೆ.

'ಬೇಕೇ ಬೇಕು, ಬಾರ್‌ ಬೇಕು': ಧಾರವಾಡದಲ್ಲೊಂದು 'ಟೈಟ್' ಪ್ರತಿಭಟನೆ 'ಬೇಕೇ ಬೇಕು, ಬಾರ್‌ ಬೇಕು': ಧಾರವಾಡದಲ್ಲೊಂದು 'ಟೈಟ್' ಪ್ರತಿಭಟನೆ

ಕುಡಿತದ ಚಟವಿರುವವರು, ಎಣ್ಣೆಯಂಗಡಿಯನ್ನು ಹುಡುಕಿಕೊಂಡು ಹಳ್ಳಿಗಾದರೂ ಹೋಗುತ್ತಾರೆ..ದಿಲ್ಲಿಗಾದರೂ ಹೋಗುತ್ತಾರೆ.. ಅದನ್ನು ಬಂದ್ ಮಾಡಿಸಲು ನಾವ್ಯಾರು..ಎನ್ನುವ ಮಾತನ್ನು ಹಿಂದೊಮ್ಮೆ ಹಿರಿಯ ರಾಜಕಾರಣಿಯೊಬ್ಬರು ಹೇಳಿದ್ದರು. ಅಬಕಾರಿ ಇಲಾಖೆಯ ಆದಾಯ ಹೆಚ್ಚಳ ಐಡಿಯಾ ಹೀಗಿದೆ, ಮುಂದೆ ಓದಿ..

ವಾರ್ಷಿಕ 12 ಸಾವಿರ ಕೋಟಿ ಆದಾಯ ತರುವ ಅಬಕಾರಿ ಇಲಾಖೆ

ವಾರ್ಷಿಕ 12 ಸಾವಿರ ಕೋಟಿ ಆದಾಯ ತರುವ ಅಬಕಾರಿ ಇಲಾಖೆ

ಸರಕಾರದ ಬೊಕ್ಕಸಕ್ಕೆ ವಾರ್ಷಿಕ ಅಂದಾಜು ಹನ್ನೆರಡು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯ ಮೇಲೆ, ಸರಕಾರ ಯಾವುದೇ ಇರಲಿ.. ಮುಖ್ಯಮಂತ್ರಿಗಳು ಯಾರೇ ಆಗಿರಲಿ.. ತಮ್ಮತಮ್ಮ ಅವಧಿಯಲ್ಲಿ, ಮದ್ಯ ಮಾರಾಟ ನಿಷೇಧದ ಬಗ್ಗೆ ಬರೀ ಚಿಂತನೆ ಮಾತ್ರ ಮಾಡುತ್ತಾರೆಯೇ ಹೊರತು, ಕಾರ್ಯರೂಪಕ್ಕೆ ತರುವ ಇಚ್ಚಾಶಕ್ತಿ ಯಾರಲ್ಲೂ ಇರುವುದಿಲ್ಲ. ಮೊದಲು, ಪ್ರಧಾನಿ ಮೋದಿ, ಈ ಸಂಬಂಧ ನ್ಯಾಷನಲ್ ಪಾಲಿಸಿ ಮಾಡಲಿ ಎಂದು ಕೇಂದ್ರ ಸರಕಾರವನ್ನೂ ದೂರಿದ್ದುಂಟು.

ನೆಲಮಾಳಿಗೆಯಲ್ಲಿದ್ದ ಗೋವಾ ಮದ್ಯದ ಬಾಟಲಿಗಳನ್ನು ಹೊರತೆಗೆದ ಬೆಂಗಳೂರು ಅಬಕಾರಿ ಅಧಿಕಾರಿಗಳುನೆಲಮಾಳಿಗೆಯಲ್ಲಿದ್ದ ಗೋವಾ ಮದ್ಯದ ಬಾಟಲಿಗಳನ್ನು ಹೊರತೆಗೆದ ಬೆಂಗಳೂರು ಅಬಕಾರಿ ಅಧಿಕಾರಿಗಳು

MRP ದರದಲ್ಲಿ ಮದ್ಯ ಮಾರಾಟ

MRP ದರದಲ್ಲಿ ಮದ್ಯ ಮಾರಾಟ

ಪ್ರಮುಖವಾಗಿ ಯುವ ಸಮುದಾಯದವರು ಕುಡಿತದ ಮೊರೆ ಹೋಗುತ್ತಿರುವ ವಿಷಾದಕಾರಿ ಅಂಶಗಳ ನಡುವೆ, ಎಂಎಸ್ಐಎಲ್ ಮೂಲಕ, MRP ದರದಲ್ಲಿ ಮದ್ಯ ಮಾರಾಟ ಮಾಡಲು ಅಬಕಾರಿ ಇಲಾಖೆ ಮುಂದಾಗಿದೆ. ಇನ್ನೂ ಹೆಚ್ಚಿನ ಔಟ್ಲೆಟ್ ಗಳನ್ನು ತೆರಯಲು ಸಂಸ್ಥೆ ಮುಂದಾಗಿದ್ದು, ಗ್ರಾಮೀಣ ಭಾಗದತ್ತ ಕಣ್ಣಿಟ್ಟಿದೆ.

ಮದ್ಯದ ಚಾಕೊಲೇಟ್ ತಯಾರಿಸಿ ಉಡುಪಿಯಲ್ಲಿ ಮನೆಮಾತಾದ ಶುಭಾ ರವೀಂದ್ರ ಮದ್ಯದ ಚಾಕೊಲೇಟ್ ತಯಾರಿಸಿ ಉಡುಪಿಯಲ್ಲಿ ಮನೆಮಾತಾದ ಶುಭಾ ರವೀಂದ್ರ

ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು

ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು

ಹೊಸದಾಗಿ ಬಾರ್ & ರೆಸ್ಟೋರೆಂಟ್, ವೈನ್ ಶಾಪ್ ತೆರೆಯಲು ಅನುಮತಿ ನೀಡುತ್ತಿಲ್ಲ ಎಂದು ಅಬಕಾರಿ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿಗಳು ಹೇಳಿದ್ದರೂ, ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಆರು ನೂರಕ್ಕೂ ಹೆಚ್ಚು ಎಂಎಸ್ಐಎಲ್ ಮೂಲಕ ಎಣ್ಣೆಯಂಗಡಿ ತೆರೆಯಲು ಮುಂದಾಗಿದೆ. ಪ್ರಮುಖವಾಗಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಶಾಖೆ ತೆರೆಯಲು ಇಲಾಖೆ ಮುಂದಾಗಿರುವುದು ಗಮನಿಸಬೇಕಾದ ವಿಚಾರ.

1,400 ಶಾಖೆಗಳನ್ನು ಹೊಂದುವ ಗುರಿ

1,400 ಶಾಖೆಗಳನ್ನು ಹೊಂದುವ ಗುರಿ

ಮುಂಬರುವ ಆರು ತಿಂಗಳಲ್ಲಿ 1,400 ಶಾಖೆಗಳನ್ನು ಹೊಂದುವ ಗುರಿಹಾಕಿಕೊಂಡಿರುವ ರಾಜ್ಯ ಸರಕಾರದ ಒಡೆತನದ ಎಂಎಸ್ಐಎಲ್ ಅಧಿಕಾರಿಗಳ ಪ್ರಕಾರ, ಬಾರ್ ಮತ್ತು ವೈನ್ ಶಾಪ್ ನಲ್ಲಿ ಇಲ್ಲಿಗಿಂತ ಶೇ. 10-15% ಹೆಚ್ಚು ಹಣವನ್ನು ಕೊಟ್ಟು ಮದ್ಯ ಖರೀದಿಸಬೇಕಾಗುತ್ತದೆ. ಇಲ್ಲಿಂದ ತೆಗೆದುಕೊಂಡರೆ ಹೆಚ್ಚುವರಿ ಹಣ ಪಾವತಿಸಬೇಕಾಗಿಲ್ಲ. ಹಾಗಾಗಿ, ಹೆಚ್ಚಿನ ಔಟ್ಲೆಟ್ ತೆರೆಯುವ ನಿರ್ಧಾರಕ್ಕೆ ಬಂದಿದ್ದೇವೆ ಎನ್ನುವ ಕಾರಣ ನೀಡುತ್ತಾರೆ.

ಸರಕಾರ ಕೊಟ್ಟಿರುವ ಹೊಸ ಟಾರ್ಗೆಟ್

ಸರಕಾರ ಕೊಟ್ಟಿರುವ ಹೊಸ ಟಾರ್ಗೆಟ್

ಆದರೆ, ಸರಕಾರ ಕೊಟ್ಟಿರುವ ಹೊಸ ಟಾರ್ಗೆಟ್ ತಲುಪಲು ಅಬಕಾರಿ ಇಲಾಖೆ ಹೊಸ ಔಟ್ಲೆಟ್ ತೆರೆಯಲು ಮುಂದಾಗಿರುವುದು ಎನ್ನುವ ಮಾಹಿತಿಯಿದೆ. ಜೊತೆಗೆ, ಅಬಕಾರಿ ಇಲಾಖೆಯ ಆದಾಯವನ್ನು ಸರಕಾರ ಬಹುವಾಗಿ ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣ. ಒಟ್ಟಿನಲ್ಲಿ, ಮದ್ಯಸೇವನೆಗೆ ಇನ್ನಷ್ಟು ಸರಕಾರ ಉತ್ತೇಚನ ನೀಡಿದಂತಾಗುವುದಂತೂ ಸ್ಪಷ್ಟ..

English summary
Karnataka government owned marketing firm MSIL (Mysore Sales International Ltd) to open more liquor outlets throught the state, especially in rural areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X