ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

|
Google Oneindia Kannada News

ಬೆಂಗಳೂರು, ಮಾರ್ಚ್ 13: ಕೊರೊನಾ ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ, ಪಬ್, ಸಾರ್ವಜನಿಕ ಕಾರ್ಯಕ್ರಮಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ.

Recommended Video

B.S.Yediyurappa order to close pub, mall, cinema hall from March 14, 2020 all over the state | Bandh

ಶುಕ್ರವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. "ಜನರು ಸರ್ಕಾರದ ಜೊತೆ ಸಹಕಾರ ನೀಡಬೇಕು" ಎಂದು ಮನವಿ ಮಾಡಿದರು.

ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ? ಕಲಬುರಗಿ ವೃದ್ಧನಿಗೆ ಕೊರೊನಾ ಬಂದಿದ್ದು ಹೇಗೆ?

"ಮಾರ್ಚ್ 14ರಿಂದ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಿತ್ರಮಂದಿರ, ಪಬ್, ಮಾಲ್, ಕ್ರೀಡಾ ಚಟುವಟಿಕೆ, ಸೆಮಿನಾರ್, ವಿವಾಹ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗುತ್ತದೆ" ಎಂದು ಘೋಷಣೆ ಮಾಡಿದರು.

ಕೊರೊನಾ ಗುಮ್ಮ: Work from Home ಗೆ ಮೊರೆ ಹೋದ ಕಾರ್ಪೋರೇಟ್ ಕಂಪನಿಗಳು! ಕೊರೊನಾ ಗುಮ್ಮ: Work from Home ಗೆ ಮೊರೆ ಹೋದ ಕಾರ್ಪೋರೇಟ್ ಕಂಪನಿಗಳು!

ಕರ್ನಾಟಕದಲ್ಲಿ ಕೊರೊನಾದಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಕಲಬುರಗಿ ನಗರದ ನಿವಾಸಿ ಮಹ್ಮದ್ ಹುಸೇನ್ ಸಿದ್ದಿಕಿ ಮಾರ್ಚ್ 10ರಂದು ಮೃತಪಟ್ಟಿದ್ದರು. ಮಾರ್ಚ್ 12ರಂದು ಅವರಿಗೆ ಕೊರೊನಾ ಸೋಂಕು ತಗುಲಿತ್ತು ಎಂದು ವೈದ್ಯಕೀಯ ವರದಿ ಸ್ಪಷ್ಟಪಡಿಸಿತ್ತು.

ಕೊರೊನಾ ಎಫೆಕ್ಟ್: ಸರ್ಕಾರಿ ವೈದ್ಯರು, ಗುತ್ತಿಗೆ ಸಿಬ್ಬಂದಿ ರಜೆ ರದ್ದು ಕೊರೊನಾ ಎಫೆಕ್ಟ್: ಸರ್ಕಾರಿ ವೈದ್ಯರು, ಗುತ್ತಿಗೆ ಸಿಬ್ಬಂದಿ ರಜೆ ರದ್ದು

ಯಡಿಯೂರಪ್ಪ ಪತ್ರಿಕಾಗೋಷ್ಠಿ

ಯಡಿಯೂರಪ್ಪ ಪತ್ರಿಕಾಗೋಷ್ಠಿ

ಪತ್ರಿಕಾಗೋಷ್ಠಿ ನಡೆಸಿದ ಯಡಿಯೂರಪ್ಪ ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ ಬಂದ್ ಮಾಡಬೇಕು. ವಸ್ತು ಪ್ರದರ್ಶನ, ಜಾತ್ರೆ, ಸಮ್ಮರ್ ಕ್ಯಾಂಪ್ ನಡೆಸಬಾರದು ಎಂದು ಹೇಳಿದರು. ಈ ಆದೇಶ ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕಕ್ಕೆ ಅನ್ವಯವಾಗಲಿದೆ.

ವಿದೇಶ ಪ್ರವಾಸ ಮಾಡಬೇಡಿ

ವಿದೇಶ ಪ್ರವಾಸ ಮಾಡಬೇಡಿ

ಒಂದು ವಾರಗಳ ಕಾಲ ವಿದೇಶ ಪ್ರವಾಸ ಮಾಡದಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದರು. ಇದರಿಂದಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಲಿದ್ದು, ಕ್ಯಾಬ್, ಬಿಟಿಎಂಸಿಯ ವಾಯುವಜ್ರ ಬಸ್‌ಗಳ ಸಂಚಾರ ಕಡಿಮೆಯಾಗಲಿದೆ.

ಸಾರ್ವಜನಿಕ ಕಾರ್ಯಕ್ರಮವಿಲ್ಲ

ಸಾರ್ವಜನಿಕ ಕಾರ್ಯಕ್ರಮವಿಲ್ಲ

ಒಂದು ವಾರಗಳ ಕಾಲ ರಾಜ್ಯದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಎಲ್ಲಾ ಮಾದರಿಯ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿದೆ.

ಶಾಲೆಗಳಿಗೆ ರಜೆ

ಶಾಲೆಗಳಿಗೆ ರಜೆ

ಕರ್ನಾಟಕದ ಶಾಲಾ-ಕಾಲೇಜುಗಳಿಗೆ ಮಾರ್ಚ್ 14ರಿಂದಲೇ ಅನ್ವಯವಾಗುವಂತೆ ರಜೆ ಘೋಷಣೆ ಮಾಡಲಾಗಿದೆ. ಆದರೆ, ಈಗ ನಡೆಯುತ್ತಿರುವ ಪರೀಕ್ಷೆಗಳು ಎಂದಿನಂತೆ ನಡೆಯಲಿವೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಬಿ. ಶ್ರೀರಾಮುಲು ಟ್ವೀಟ್

ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಮಾಲ್, ಸಿನಿಮಾ ಮಂದಿರ, ಜನನಿಬಿಡ ಪ್ರದೇಶಗಳ ಕಾರ್ಯಕ್ರಮ ಹಾಗೂ ಬೃಹತ್ ಸಮಾವೇಶ ಕಾರ್ಯಕ್ರಮಗಳು ಬಂದ್ ಮಾಡಿ ಸರ್ಕಾರ ಆದೇಶಿಸಿದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

ಮನೆಯಿಂದ ಕೆಲಸ ಮಾಡಿ

ಮನೆಯಿಂದ ಕೆಲಸ ಮಾಡಿ

ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿನ ಐಟಿ ಕಂಪನಿಗಳನ್ನು ಒಂದು ವಾರಗಳ ಕಾಲ ಮುಚ್ಚಲಾಗುತ್ತದೆ. ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ಸೌಮ್ಯಾ ರೆಡ್ಡಿ ಟ್ವೀಟ್

ಬೆಂಗಳೂರಿನ ಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಯಾವ-ಯಾವ ಸೇವೆ ಬಂದ್ ಆಗಿರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

English summary
Karnataka chief minister B.S.Yediyurappa order to close pub, mall, cinema hall from March 14, 2020 all over the state. What open and what close in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X